ಸತತ 5 ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ; ಈ ಹಿಂದೆ 2 ಬಾರಿ ಹೀಗಾಗಿದ್ದಾಗ ರನ್ನರ್ ಅಪ್ ಆಗಿತ್ತು, ಆದರೆ ಈ ಬಾರಿ…
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರಲ್ಲಿ ಸದ್ಯ ಪ್ರಚಂಡ ಫಾರ್ಮ್‌ನಲ್ಲಿದೆ. ಸತತ 5 ಪಂದ್ಯಗಳನ್ನು ಗೆದ್ದು, ಪ್ಲೇಆಫ್‌ಗೆ ಹತ್ತಿರವಾಗಿದೆ. ಆರ್‌ಸಿಬಿ ತಂಡವು ಸತತ ಐದು ಪಂದ್ಯಗಳನ್ನು ಗೆದ್ದಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ 2009 ಮತ್ತು 2016ರಲ್ಲಿ ಇಂಥಾ ಸಾಧನೆ ಮಾಡಿ ರನ್ನರ್ ಅಪ್ ಆಗಿತ್ತು. ಈ ಬಾರಿ ಏನಾಗಲಿದೆ ಎಂಬುದನ್ನು ನೋಡಬೇಕಿದೆ.

(1 / 5)
ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಫಾಫ್ ಡುಪ್ಲೆಸಿಸಿ ಪಡೆಯು ಸತತ ಐದು ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.(AFP)
(2 / 5)
ಬೆಂಗಳೂರು ತಂಡ ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ 2009 ಮತ್ತು 2016ರಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದಿತ್ತು. ಆ ಎರಡೂ ಸಂದರ್ಭಗಳಲ್ಲಿ ತಂಡ ರನ್ನರ್ ಅಪ್ ಆಗಿತ್ತು.(AFP)
(3 / 5)
ಇದನ್ನೂ ಮೀರಿ, 2011ರಲ್ಲಿ ಆರ್‌ಸಿಬಿ ಸತತ 7 ಪಂದ್ಯಗಳಲ್ಲಿ ಗೆದ್ದಿತ್ತು. ಆ ವರ್ಷವೂ ತಂಡ ರನ್ನರ್ ಅಪ್ ಆಗಿತ್ತು. 2010 ಮತ್ತು 2021ರಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ತಂಡವು ಪ್ಲೇಆಫ್ ತಲುಪಿತ್ತು. ಈ ಲೆಕ್ಕಾಚಾರದ ಪ್ರಕಾರ, ಆರ್‌ಸಿಬಿಗೆ ಈ ಬಾರಿಯೂ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.(AFP)
(4 / 5)
ಸದ್ಯ ಆರ್‌ಸಿಬಿ ತಂಡವು ಆಡಿದ 13 ಪಂದ್ಯಗಳಿಂದ 12 ಅಂಕ ಗಳಿಸಿದೆ. ಅಂಕ ಪಟ್ಟಿಯಲ್ಲಿ ತಂಡ ಐದನೇ ಸ್ಥಾನದಲ್ಲಿದೆ. ಮೇ 18ರಂದು ತಂಡವು ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದರೆ, ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಒಂದು ವೇಳೆ ಸೋತರೆ, ಟೂರ್ನಿಯಿಂದ ನಿರ್ಗಮಿಸಲಿದೆ. ಇಲ್ಲಿ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ.(AFP)
ಇತರ ಗ್ಯಾಲರಿಗಳು