WTC Point Table: ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಫೈನಲ್ ಅವಕಾಶ ಏನಾಗುತ್ತೆ?-cricket news what happens if india vs bangladesh kanpur test is washed out wtc final world test championship jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Point Table: ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಫೈನಲ್ ಅವಕಾಶ ಏನಾಗುತ್ತೆ?

WTC Point Table: ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಫೈನಲ್ ಅವಕಾಶ ಏನಾಗುತ್ತೆ?

  • ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ 2ನೇ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಕಾನ್ಪುರ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ಆಟ ನಡೆದಿರಲಿಲ್ಲ. ಎರಡನೇ ದಿನವಾದ ಶನಿವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಒಂದು ಎಸೆತವೂ ಇಲ್ಲದೆ ದಿನದಾಟ ರದ್ದಾಯ್ತು. ಇದೀಗ ಪಂದ್ಯವೇ ಸಂಪೂರ್ಣ ರದ್ದಾಗುವ ಭೀತಿ ಅಭಿಮಾನಿಗಳಿಗೆ ಶುರುವಾಗಿದೆ.

ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಒದ್ದೆ ಮೈದಾನದಿಂದಾಗಿ ಪಂದ್ಯದ ಆರಂಭ ವಿಳಂಬವಾಯಿತು. ಸರಣಿ ಸಮಬಲ ಸಾಧಿಸುವ ಗುರಿ ಹೊಂದಿರುವ ಬಾಂಗ್ಲಾದೇಶ, ಮೊದಲ ಇನಿಂಗ್ಸ್‌ನಲ್ಲಿ ಈವರೆಗೆ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಶನಿವಾರವಾರದ ದಿನದಾಟವೂ ರದ್ದಾದ ಕಾರಣ ಮೊತ್ತ ಇಷ್ಟರಲ್ಲೇ ನಿಂತಿದೆ.
icon

(1 / 7)

ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೇವಲ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಒದ್ದೆ ಮೈದಾನದಿಂದಾಗಿ ಪಂದ್ಯದ ಆರಂಭ ವಿಳಂಬವಾಯಿತು. ಸರಣಿ ಸಮಬಲ ಸಾಧಿಸುವ ಗುರಿ ಹೊಂದಿರುವ ಬಾಂಗ್ಲಾದೇಶ, ಮೊದಲ ಇನಿಂಗ್ಸ್‌ನಲ್ಲಿ ಈವರೆಗೆ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಶನಿವಾರವಾರದ ದಿನದಾಟವೂ ರದ್ದಾದ ಕಾರಣ ಮೊತ್ತ ಇಷ್ಟರಲ್ಲೇ ನಿಂತಿದೆ.(HT_PRINT)

ಪಂದ್ಯಕ್ಕೆ ಮೂರನೇ ದಿನವಾದ ಭಾನುವಾರ ಕೂಡಾ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಆದರೆ, ದಿನದಾಟ ಸಂಪೂರ್ಣ ರದ್ದಾಗುವ ಭೀತಿ ಇಲ್ಲ. ನಾಳೆ ಮಳೆಯ ಸಾಧ್ಯತೆಗಳು ಶೇಕಡಾ 59ರಷ್ಟಿದೆ. ಗುಡುಗು ಸಹಿತ ಮಳೆಯಾಗುವ ಸಂಭವನೀಯತೆ ಶೇಕಡಾ 14ರಷ್ಟಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
icon

(2 / 7)

ಪಂದ್ಯಕ್ಕೆ ಮೂರನೇ ದಿನವಾದ ಭಾನುವಾರ ಕೂಡಾ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಆದರೆ, ದಿನದಾಟ ಸಂಪೂರ್ಣ ರದ್ದಾಗುವ ಭೀತಿ ಇಲ್ಲ. ನಾಳೆ ಮಳೆಯ ಸಾಧ್ಯತೆಗಳು ಶೇಕಡಾ 59ರಷ್ಟಿದೆ. ಗುಡುಗು ಸಹಿತ ಮಳೆಯಾಗುವ ಸಂಭವನೀಯತೆ ಶೇಕಡಾ 14ರಷ್ಟಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.(HT_PRINT)

ಕಾನ್ಪುರದಲ್ಲಿ 4 ಮತ್ತು 5ನೇ ದಿನದಾಟದಂದು ಹವಾಮಾನ ಸುಧಾರಿಸುವ ಸಾಧ್ಯತೆಯಿದೆಯಿದೆ. ಆದರೆ, ಮಳೆಯಿಂದಾಗಿ ಬಹುತೇಕ ಆಟ ನಷ್ಟವಾದ ಕಾರಣದಿಂದ ಪಂದ್ಯ ಡ್ರಾಗೊಂಡರೂ ಅಚ್ಚರಿಯಿಲ್ಲ.
icon

(3 / 7)

ಕಾನ್ಪುರದಲ್ಲಿ 4 ಮತ್ತು 5ನೇ ದಿನದಾಟದಂದು ಹವಾಮಾನ ಸುಧಾರಿಸುವ ಸಾಧ್ಯತೆಯಿದೆಯಿದೆ. ಆದರೆ, ಮಳೆಯಿಂದಾಗಿ ಬಹುತೇಕ ಆಟ ನಷ್ಟವಾದ ಕಾರಣದಿಂದ ಪಂದ್ಯ ಡ್ರಾಗೊಂಡರೂ ಅಚ್ಚರಿಯಿಲ್ಲ.(AFP)

ಹಾಗಿದ್ದರೆ, ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಅವಕಾಶಗಳಿಗೆ ಏನಾಗುತ್ತದೆ ಎಂಬುದನ್ನು ನೋಡೋಣ. ಭಾರತ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ ಭಾರತವು 7 ಗೆಲುವುಗಳೊಂದಿಗೆ, ಶೇಕಡಾ 71.67ರಷ್ಟು ಗೆಲುವಿನ ಪ್ರಮಾಣ ಹೊಂದಿದೆ.
icon

(4 / 7)

ಹಾಗಿದ್ದರೆ, ಕಾನ್ಪುರ ಟೆಸ್ಟ್ ರದ್ದಾದರೆ ಭಾರತದ ಡಬ್ಲ್ಯುಟಿಸಿ ಅವಕಾಶಗಳಿಗೆ ಏನಾಗುತ್ತದೆ ಎಂಬುದನ್ನು ನೋಡೋಣ. ಭಾರತ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ ಭಾರತವು 7 ಗೆಲುವುಗಳೊಂದಿಗೆ, ಶೇಕಡಾ 71.67ರಷ್ಟು ಗೆಲುವಿನ ಪ್ರಮಾಣ ಹೊಂದಿದೆ.(AFP)

ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ 2-0 ಅಂತರದ ವೈಟ್‌ವಾಶ್‌ ಸಾಧ್ಯವಾಗಿದ್ದರೆ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ಅವಕಾಶವನ್ನು ಬಲಪಡಿಸಬಹುದಿತ್ತು. ಸದ್ಯ ಭಾರತದ ಮುಂದಿರುವ ಐದು ಅವಕಾಶಗಳಲ್ಲಿ ಮೂರು ಗೆಲುವುಗಳು ಬೇಕಾಗಿವೆ. ಮುಂದೆ ಭಾರತವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿಯಲ್ಲಿ ಆಡಲಿದೆ.
icon

(5 / 7)

ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ 2-0 ಅಂತರದ ವೈಟ್‌ವಾಶ್‌ ಸಾಧ್ಯವಾಗಿದ್ದರೆ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ಅವಕಾಶವನ್ನು ಬಲಪಡಿಸಬಹುದಿತ್ತು. ಸದ್ಯ ಭಾರತದ ಮುಂದಿರುವ ಐದು ಅವಕಾಶಗಳಲ್ಲಿ ಮೂರು ಗೆಲುವುಗಳು ಬೇಕಾಗಿವೆ. ಮುಂದೆ ಭಾರತವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿಯಲ್ಲಿ ಆಡಲಿದೆ.(PTI)

ಒಂದು ವೇಳೆ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ ಡ್ರಾಗೊಂಡರೆ, ಭಾರತ ಮತ್ತು ಬಾಂಗ್ಲಾದೇಶ ತಲಾ ಆರು ಅಂಕಗಳನ್ನು ಹಂಚಿಕೊಳ್ಳಲಿದೆ. ಆಗ ರೋಹಿತ್ ಶರ್ಮಾ ಪಡೆಯ ಮುಂದಿನ ಗೆಲುವಿನ ಲೆಕ್ಕಾಚಾರ ತುಸು ಕಠಿಣವಾಗಿದೆ.
icon

(6 / 7)

ಒಂದು ವೇಳೆ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ ಡ್ರಾಗೊಂಡರೆ, ಭಾರತ ಮತ್ತು ಬಾಂಗ್ಲಾದೇಶ ತಲಾ ಆರು ಅಂಕಗಳನ್ನು ಹಂಚಿಕೊಳ್ಳಲಿದೆ. ಆಗ ರೋಹಿತ್ ಶರ್ಮಾ ಪಡೆಯ ಮುಂದಿನ ಗೆಲುವಿನ ಲೆಕ್ಕಾಚಾರ ತುಸು ಕಠಿಣವಾಗಿದೆ.

ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವೈಟ್‌ವಾಶ್ ಮಾಡಿದರೂ ಸಾಲುವುದಿಲ್ಲ. ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನಾದರೂ ಗೆಲ್ಲಬೇಕಾಗುತ್ತದೆ.
icon

(7 / 7)

ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವೈಟ್‌ವಾಶ್ ಮಾಡಿದರೂ ಸಾಲುವುದಿಲ್ಲ. ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನಾದರೂ ಗೆಲ್ಲಬೇಕಾಗುತ್ತದೆ.(PTI)


ಇತರ ಗ್ಯಾಲರಿಗಳು