ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್

ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್

  • ಐಪಿಎಲ್‌ 2024ರಲ್ಲಿ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ಟೂರ್ನಿಯುದ್ದಕ್ಕೂ ಮೇಲ್ನೋಟಕ್ಕೆ ಬ್ಯಾಟರ್‌ಗಳ ಅಬ್ಬರ ಕಂಡುಬಂದರೂ, ಬೌಲರ್‌ಗಳು ಕೂಡಾ ವಿಕೆಟ್‌ ಟೇಕಿಂಗ್‌ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೆ, ಈ ಆವೃತ್ತಿಯಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ ಟಾಪ್‌ 5 ಬೌಲರ್‌ಗಳು ಯಾರು ಎಂಬುದನ್ನು ನೋಡೋಣ.

ಆರ್‌ಸಿಬಿ ಕೈಬಿಟ್ಟ ಬೌಲರ್ ಹರ್ಷಲ್ ಪಟೇಲ್‌, ಈ ಬಾರಿ ಪಂಜಾಬ್‌ ಕಿಂಗ್ಸ್‌ ಪರ ಆಡಿದ 14 ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದಾರೆ. ಇದರೊಂದಿಗೆ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. 2021ರಲ್ಲಿನ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್‌ ಕಬಳಿಸಿದ್ದ ಅವರು, ಇದೀಗ ಎರಡನೇ ಬಾರಿ ಪರ್ಪಲ್‌ ಕ್ಯಾಪ್‌ ಗೆದ್ದ ಸಾಧನೆ ಮಾಡಿದ್ದಾರೆ.
icon

(1 / 5)

ಆರ್‌ಸಿಬಿ ಕೈಬಿಟ್ಟ ಬೌಲರ್ ಹರ್ಷಲ್ ಪಟೇಲ್‌, ಈ ಬಾರಿ ಪಂಜಾಬ್‌ ಕಿಂಗ್ಸ್‌ ಪರ ಆಡಿದ 14 ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದಾರೆ. ಇದರೊಂದಿಗೆ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. 2021ರಲ್ಲಿನ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್‌ ಕಬಳಿಸಿದ್ದ ಅವರು, ಇದೀಗ ಎರಡನೇ ಬಾರಿ ಪರ್ಪಲ್‌ ಕ್ಯಾಪ್‌ ಗೆದ್ದ ಸಾಧನೆ ಮಾಡಿದ್ದಾರೆ.(PBKS-X)

ಕೆಕೆಆರ್‌ ತಂಡದ ಪ್ರಮುಖ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಈ ಬಾರಿ 21 ವಿಕೆಟ್‌ ಕಬಳಿಸುವ ಮೂಲಕ, ತಂಡ ಚಾಂಪಿಯನ್‌ ಆಗುವಲ್ಲಿ‌ ಪ್ರಮುಖ ಪಾತ್ರ ವಹಿಸಿದ್ದಾರೆ.
icon

(2 / 5)

ಕೆಕೆಆರ್‌ ತಂಡದ ಪ್ರಮುಖ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಈ ಬಾರಿ 21 ವಿಕೆಟ್‌ ಕಬಳಿಸುವ ಮೂಲಕ, ತಂಡ ಚಾಂಪಿಯನ್‌ ಆಗುವಲ್ಲಿ‌ ಪ್ರಮುಖ ಪಾತ್ರ ವಹಿಸಿದ್ದಾರೆ.(PTI)

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, 20 ವಿಕೆಟ್‌ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದಿರುವ ಅವರು, ಕೇವಲ 6.48ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.
icon

(3 / 5)

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, 20 ವಿಕೆಟ್‌ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದಿರುವ ಅವರು, ಕೇವಲ 6.48ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.(ANI )

ಎಸ್‌ಆರ್‌ಎಚ್‌ ತಂಡದ ಟಿ ನಟರಾಜನ್‌ 19 ವಿಕೆಟ್‌ ಕಬಳಿಸಿದ್ದಾರೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಒಂದೇ ಪಂದ್ಯದಲ್ಲಿ ಕೇವಲ 19 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಬಳಿಸಿದ್ದಾರೆ.
icon

(4 / 5)

ಎಸ್‌ಆರ್‌ಎಚ್‌ ತಂಡದ ಟಿ ನಟರಾಜನ್‌ 19 ವಿಕೆಟ್‌ ಕಬಳಿಸಿದ್ದಾರೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಒಂದೇ ಪಂದ್ಯದಲ್ಲಿ ಕೇವಲ 19 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಬಳಿಸಿದ್ದಾರೆ.(PTI)

ರಾಜಸ್ಥಾನ್‌ ರಾಯಲ್ಸ್‌ ತಂಡದ ಸಂದೀಪ್‌ ಶರ್ಮಾ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 18 ರನ್‌ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ ಕಬಳಿಸಿದ್ದಾರೆ. ಇದು ಈ ಆವೃತ್ತಿಯ ಬೆಸ್ಟ್‌ ಬೌಲಿಂಗ್‌ ಆಗಿದೆ. 
icon

(5 / 5)

ರಾಜಸ್ಥಾನ್‌ ರಾಯಲ್ಸ್‌ ತಂಡದ ಸಂದೀಪ್‌ ಶರ್ಮಾ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 18 ರನ್‌ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ ಕಬಳಿಸಿದ್ದಾರೆ. ಇದು ಈ ಆವೃತ್ತಿಯ ಬೆಸ್ಟ್‌ ಬೌಲಿಂಗ್‌ ಆಗಿದೆ. (PTI)


ಇತರ ಗ್ಯಾಲರಿಗಳು