ದೀಪಾವಳಿಗೆ ಅಂದವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸೋ ಪ್ಲ್ಯಾನ್‌ ಇದ್ಯಾ? ಕಿರುತೆರೆ ಸ್ಟಾರ್‌ಗಳ ಈ ಸ್ಟೈಲ್‌ ನಿಮಗೆ ಇಷ್ಟವಾಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿಗೆ ಅಂದವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸೋ ಪ್ಲ್ಯಾನ್‌ ಇದ್ಯಾ? ಕಿರುತೆರೆ ಸ್ಟಾರ್‌ಗಳ ಈ ಸ್ಟೈಲ್‌ ನಿಮಗೆ ಇಷ್ಟವಾಗಬಹುದು

ದೀಪಾವಳಿಗೆ ಅಂದವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸೋ ಪ್ಲ್ಯಾನ್‌ ಇದ್ಯಾ? ಕಿರುತೆರೆ ಸ್ಟಾರ್‌ಗಳ ಈ ಸ್ಟೈಲ್‌ ನಿಮಗೆ ಇಷ್ಟವಾಗಬಹುದು

  • ದೀಪಾವಳಿ ಹಬ್ಬಕ್ಕೆ ಹಣತೆಗಳನ್ನು ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಹಬ್ಬವೆಂದರೆ, ಹೊಸ ಹೊಸ ಉಡುಪು ಧರಿಸಿ ಹಬ್ಬ ಆಚರಿಸುವುದೆಂದರೆ ಖುಷಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಗೆಬಗೆಯ ಉಡುಪು ಧರಿಸಿ ಬೆಳಕಿನ ಹಬ್ಬವನ್ನು ಎಂಜಾಯ್‌ ಮಾಡಬಹುದು. ನಿಮಗಾಗಿ ದೀಪಾವಳಿ ಡ್ರೆಸಿಂಗ್‌ ಐಡಿಯಾ ನಾವು ಕೊಡ್ತೀವಿ.

ಈ ಬಾರಿಯ ದೀಪಾವಳಿಗೆ ಬಗೆಬಗೆಯ ಉಡುಪು ಪ್ಲಾನ್‌ ಮಾಡಿಕೊಳ್ಳಿ. ಕನ್ನಡ ಕಿರುತರೆಯ ಕಲಾವಿದರ ಫ್ಯಾಶನ್‌ ನಿಮಗೆ ನೆರವಾಗಬಹುದು. ಟಿವಿಯಲ್ಲಿ ಗಮನ ಸೆಳೆಯುವ ಕಲಾವಿದರು ಹಬ್ಬದ ಸಂಭ್ರಮಕ್ಕೆ ಧರಿಸಬಲ್ಲ ಉಡುಗೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅದರ ಫೋಟೋ ಇಲ್ಲಿದೆ ನೋಡಿ.
icon

(1 / 8)

ಯುವತಿಯರು ಅಥವಾ ವಿವಾಹಿತ ನಾರಿಯರು, ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಮೇಘಾಶೆಟ್ಟಿಯಂತೆ ಸರಳವಾಗಿ ಸೀರೆ ಉಟ್ಟು ಹಬ್ಬ ಆಚರಿಸಬಹುದು. ಇನ್ನೂ ಸಿಂಪಲ್‌ ಲುಕ್‌ ಬೇಕೆಂದರೆ ಸೆಲ್ವಾರ್‌ ಧರಿಸಬಹುದು.
icon

(2 / 8)

ಗೀತಾ ಧಾರಾವಾಹಿಯಲ್ಲಿ ನಾಯಕ ನಟನಾಗಿ ಮಿಂಚಿದ್ದ ಧನುಶ್‌ ಅವರ ಫೋಟೋ ನೋಡಿ. ಹುಡುಗರು ಬಿಳಿ ಬಣ್ಣದ ಸಿಂಪಲ್‌ ಕುರ್ತಾ ಧರಿಸಿ ಬೆಳಕಿನ ಹಬ್ಬಕ್ಕೆ ರೆಡಿಯಾಗಬಹುದು. ಇದಕ್ಕೊಂದು ಧೋತಿ ಕಟ್ಟಿಕೊಂಡರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ.
icon

(3 / 8)

ಮನೆಯಲ್ಲಿ ಮಕ್ಕಳು ಇದ್ದರೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಈ ರೀತಿಯ ಬಟ್ಟೆ ಪ್ಲಾನ್‌ ಮಾಡಬಹುದು. ಸೀತಾರಾಮ ಧಾರಾವಾಹಿಯ ಮಗು ಸಿಹಿ, ಹೆಣ್ಣು ಮಕ್ಕಳಿಗೆ ಒಪ್ಪುವಂತೆ ಸೀರೆ ಧರಿಸಿದ್ದಾಳೆ. ಮಕ್ಕಳಿಗೆ ಇಂಥಾ ಉಡುಗೆ ತುಂಬಾ ಇಷ್ಟವಾಗುತ್ತದೆ. ಹುಡುಗರು ಈ ಬಾಲಕನಂತೆ ಸಾಂಪ್ರದಾಯಿಕ ಬಟ್ಟೆ ಪ್ಲಾನ್‌ ಮಾಡಬಹುದು.
icon

(4 / 8)

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಂಜನಾ ಬುರ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಒಪ್ಪುವಂತೆ ಆಭರಣ ಧರಿಸಿದ್ದಾರೆ. ಅದ್ಧೂರಿಯಾಗಿ ಸಿದ್ಧರಾಗಲು ಬಯಸುವ ಮಹಿಳೆಯರು ಈ ರೀತಿ ಡ್ರೆಸಿಂಗ್‌ ಪ್ಲಾನ್‌ ಮಾಡಬಹುದು.
icon

(5 / 8)

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿಯಾಗಿ ಮಿಂಚುತ್ತಿರುವ ಧನುಶ್‌, ಸ್ಮಾರ್ಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಗೆ ಸಾಂಪ್ರದಾಯಿಕ ಬಿಳಿ ಪಂಚೆ ಧರಿಸಿದರೆ ಅದರ ಅಂದವೇ ಬೇರೆ. ಪುರುಷರಿಗೆ ಇನ್ನೂ ಅದ್ಧೂರಿ ಉಡುಗೆ ಬೇಕೆಂದರೆ ಧೋತಿ ಪ್ಯಾಂಟ್‌ ಜೊತೆಗೆ ಶೆರ್ವಾನಿ ಧರಿಸಬಹುದು.
icon

(6 / 8)

ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ಕಪ್ಪು ಮತ್ತು ಬಿಳಿ ಬಣ್ಣದ ಕಾಂಬಿನೇಶನ್‌ನಲ್ಲಿ ಸಿಂಪಲ್‌ ಕುರ್ತಾ ಧರಿಸಿದ್ದಾರೆ. ನಿಮಗೆ ಕಪ್ಪು ಬಣ್ಣ ಇಷ್ಟವಾಗುವುದಾದರೆ ಈ ಸರಳ ಡ್ರೆಸಿಂಗ್‌ ಮಾಡಬಹುದು.
icon

(7 / 8)

ಅಮ್ಮ-ಮಗಳು ಧರಿಸಬಹುದಾದ ಉಡುಪಿನ ಐಡಿಯಾ ಇದು. ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ ಅವರು ರಿತು ಸಿಂಗ್‌ (ಸಿಹಿ) ಅವರೊಂದಿಗೆ ಹೀಗೆ ಪೋಸ್‌ ಕೊಟ್ಟಿದ್ದಾರೆ. ಅಮ್ಮ ಮಗಳು ಸೀರೆ ಉಟ್ಟು ಹಬ್ಬ ಆಚರಿಸಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?
icon

(8 / 8)

ಇತರ ಗ್ಯಾಲರಿಗಳು