ದೆಹಲಿಯಲ್ಲಿ ಕುಸಿದ ತಾಪಮಾನ, ಚುಮುಚುಮು ಚಳಿ, ದ‌ಟ್ಟ ಹೊಗೆಯ ವಾತಾವರಣದ ನಡುವೆ ಸಾಗಿದೆ ಜನಜೀವನ; ಹೀಗಿದೆ ರಾಷ್ಟ್ರ ರಾಜಧಾನಿಯ ಚಿತ್ರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೆಹಲಿಯಲ್ಲಿ ಕುಸಿದ ತಾಪಮಾನ, ಚುಮುಚುಮು ಚಳಿ, ದ‌ಟ್ಟ ಹೊಗೆಯ ವಾತಾವರಣದ ನಡುವೆ ಸಾಗಿದೆ ಜನಜೀವನ; ಹೀಗಿದೆ ರಾಷ್ಟ್ರ ರಾಜಧಾನಿಯ ಚಿತ್ರಣ

ದೆಹಲಿಯಲ್ಲಿ ಕುಸಿದ ತಾಪಮಾನ, ಚುಮುಚುಮು ಚಳಿ, ದ‌ಟ್ಟ ಹೊಗೆಯ ವಾತಾವರಣದ ನಡುವೆ ಸಾಗಿದೆ ಜನಜೀವನ; ಹೀಗಿದೆ ರಾಷ್ಟ್ರ ರಾಜಧಾನಿಯ ಚಿತ್ರಣ

  • ಚಳಿಗಾಲ ಶುರುವಾಗಿ ಕೆಲ ದಿನಗಳು ಕಳೆದಿದ್ದರೂ ಒಂದೆರಡು ದಿನಗಳಿಂದ ಚಳಿಯ ಪ್ರತಾಪ ಜೋರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದೆಡೆ ಅಲ್ಲಿ ಗಾಳಿಯ ಗುಣಮಟ್ಟ ಕುಸಿದಿರುವುದು, ಇನ್ನೊಂದೆಡೆ ಚಳಿ ಹೆಚ್ಚಾಗಿರುವುದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಿಮಹಾಸಿದಂತಿರುವ ದೆಹಲಿ ವಾತಾವರಣದ ಚಿತ್ರಗಳು ನಿಮಗಾಗಿ

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ರಾಜಧಾನಿ ದೆಹಲಿಯು ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ದೆಹಲಿಯಲ್ಲಿ ತಾಪಮಾನ ಕುಸಿದಿದ್ದು, ಜನರು ಚಳಿಯಿಂದ ನಡುಗುವಂತಾಗಿದೆ. ಎಲ್ಲೆಲ್ಲೂ ಮಂಜು ಕವಿದ ವಾತಾವರಣವಿದ್ದು, ಚಳಿ–ಮಂಜಿನ ನಡುವೆ ಜನರು ಜೀವನ ಸಾಗಿಸಬೇಕಿದೆ. ದೆಹಲಿಯ ಸದ್ಯದ ವಾತಾವರಣ ಹಾಗೂ ಜನಜೀವನದ ಚಿತ್ರನೋಟ ಇಲ್ಲಿದೆ.
icon

(1 / 10)

ಭಾರತದ ರಾಜಧಾನಿ ದೆಹಲಿಯು ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ದೆಹಲಿಯಲ್ಲಿ ತಾಪಮಾನ ಕುಸಿದಿದ್ದು, ಜನರು ಚಳಿಯಿಂದ ನಡುಗುವಂತಾಗಿದೆ. ಎಲ್ಲೆಲ್ಲೂ ಮಂಜು ಕವಿದ ವಾತಾವರಣವಿದ್ದು, ಚಳಿ–ಮಂಜಿನ ನಡುವೆ ಜನರು ಜೀವನ ಸಾಗಿಸಬೇಕಿದೆ. ದೆಹಲಿಯ ಸದ್ಯದ ವಾತಾವರಣ ಹಾಗೂ ಜನಜೀವನದ ಚಿತ್ರನೋಟ ಇಲ್ಲಿದೆ.

ದೆಹಲಿಯಲ್ಲಿ ತಾಪಮಾನ ಕುಸಿದಿರುವುದರ ಜೊತೆ ದಟ್ಟ ಹೊಗೆಯ ಸೇರಿಕೊಂಡು ರಸ್ತೆಗಳೇ ಕಾಣದಂತಹ ಪರಿಸ್ಥಿತಿ ಎದುರಾಗಿದೆ. ಗುರುಗ್ರಾಮ ಸಿಗ್ನೇಚರ್ ಫ್ಲೈ ಓವರ್ ಬಳಿ ರಸ್ತೆಯಲ್ಲಿ ಹಿಮ, ಹೊಗೆಯ ವಾತಾವರಣದ ಕಾರಣದಿಂದ ಕುಂಟುತ್ತಾ ಸಾಗುತ್ತಿರುವ ವಾಹನಗಳನ್ನು ನೋಡಬಹುದು. ರಸ್ತೆಗಳೇ ಕಾಣದಂತೆ ಮಂಜು ಮುಸುಕಿದೆ. 
icon

(2 / 10)

ದೆಹಲಿಯಲ್ಲಿ ತಾಪಮಾನ ಕುಸಿದಿರುವುದರ ಜೊತೆ ದಟ್ಟ ಹೊಗೆಯ ಸೇರಿಕೊಂಡು ರಸ್ತೆಗಳೇ ಕಾಣದಂತಹ ಪರಿಸ್ಥಿತಿ ಎದುರಾಗಿದೆ. ಗುರುಗ್ರಾಮ ಸಿಗ್ನೇಚರ್ ಫ್ಲೈ ಓವರ್ ಬಳಿ ರಸ್ತೆಯಲ್ಲಿ ಹಿಮ, ಹೊಗೆಯ ವಾತಾವರಣದ ಕಾರಣದಿಂದ ಕುಂಟುತ್ತಾ ಸಾಗುತ್ತಿರುವ ವಾಹನಗಳನ್ನು ನೋಡಬಹುದು. ರಸ್ತೆಗಳೇ ಕಾಣದಂತೆ ಮಂಜು ಮುಸುಕಿದೆ. (PC: Praveen Kumar/HT)

ದೆಹಲಿಯ ಅಕ್ಷರಧಾಮ ದೇವಾಲಯದ ಬಳಿಯ ಕೃಷಿಭೂಮಿಯಲ್ಲಿ ಜನರು ತಿರುಗಾಡುತ್ತಿರುವ ದೃಶ್ಯವಿದು. ದಟ್ಟ ಮಂಜು ಕವಿದ ವಾತಾವರಣದ ನಡುವೆ ಮರ ಗಿಡಗಳು ಚಳಿಗೆ ನಡುಗುತ್ತಿವೆ ಎಂಬಂತೆ ಭಾಸವಾಗುತ್ತಿರುವ ದೃಶ್ಯ. ಚಳಿ, ಮಾಲಿನ್ಯದ ನಡುವೆಯೂ ಕೃಷಿಕರು ಕಾಯಕ ಯೋಗಿಗಳಂತೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 
icon

(3 / 10)

ದೆಹಲಿಯ ಅಕ್ಷರಧಾಮ ದೇವಾಲಯದ ಬಳಿಯ ಕೃಷಿಭೂಮಿಯಲ್ಲಿ ಜನರು ತಿರುಗಾಡುತ್ತಿರುವ ದೃಶ್ಯವಿದು. ದಟ್ಟ ಮಂಜು ಕವಿದ ವಾತಾವರಣದ ನಡುವೆ ಮರ ಗಿಡಗಳು ಚಳಿಗೆ ನಡುಗುತ್ತಿವೆ ಎಂಬಂತೆ ಭಾಸವಾಗುತ್ತಿರುವ ದೃಶ್ಯ. ಚಳಿ, ಮಾಲಿನ್ಯದ ನಡುವೆಯೂ ಕೃಷಿಕರು ಕಾಯಕ ಯೋಗಿಗಳಂತೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. (PC: RAJ K RAJ / Hindustan Times)

ಒಂದೆಡೆ ಕಲುಷಿತ ವಾತಾವರಣದ ಕಾರಣದಿಂದ ಹರಡಿರುವ ದಟ್ಟ ಹೊಗೆ, ಇನ್ನೊಂದೆಡೆ  ಮಂಜು ಮುಸುಕಿದ ವಾತಾವರಣ ಈ ನಡುವೆ ಜನರು ಮಾಸ್ಕ್ ಧರಿಸಿ ವಾಹನಗಳಲ್ಲಿ ಓಡಾಡುವುದನ್ನು ಕಾಣಬಹುದು. 
icon

(4 / 10)

ಒಂದೆಡೆ ಕಲುಷಿತ ವಾತಾವರಣದ ಕಾರಣದಿಂದ ಹರಡಿರುವ ದಟ್ಟ ಹೊಗೆ, ಇನ್ನೊಂದೆಡೆ  ಮಂಜು ಮುಸುಕಿದ ವಾತಾವರಣ ಈ ನಡುವೆ ಜನರು ಮಾಸ್ಕ್ ಧರಿಸಿ ವಾಹನಗಳಲ್ಲಿ ಓಡಾಡುವುದನ್ನು ಕಾಣಬಹುದು. 

ಸುತ್ತಲೂ ಹಿಮ ಆವರಿಸಿರುವ ಜಾಗದಲ್ಲಿ ರಸ್ತೆ ದಾಟಲು ನಿಂತ ಯುವತಿ. ಮಂಜು ಕವಿದ ವಾತಾವರಣದಲ್ಲಿ ಹಗಲಿನಲ್ಲೂ ವಾಹನಗಳ ಹೆಡ್‌ಲೈಟ್ ಆನ್ ಮಾಡಿಕೊಂಡು ಬರುವ ಪರಿಸ್ಥಿತಿ ದೆಹಲಿಯಲ್ಲಿ ಎದುರಾಗಿದೆ. ಈ ನಡುವೆ ರಸ್ತೆ ದಾಟಲು ಡಿವೈಡರ್ ಮೇಲೆ ನಿಂತಿರುವ ಯುವತಿ ಮೊಬೈಲ್‌ ನೋಡುವುದನ್ನು ಕಾಣಬಹುದು. 
icon

(5 / 10)

ಸುತ್ತಲೂ ಹಿಮ ಆವರಿಸಿರುವ ಜಾಗದಲ್ಲಿ ರಸ್ತೆ ದಾಟಲು ನಿಂತ ಯುವತಿ. ಮಂಜು ಕವಿದ ವಾತಾವರಣದಲ್ಲಿ ಹಗಲಿನಲ್ಲೂ ವಾಹನಗಳ ಹೆಡ್‌ಲೈಟ್ ಆನ್ ಮಾಡಿಕೊಂಡು ಬರುವ ಪರಿಸ್ಥಿತಿ ದೆಹಲಿಯಲ್ಲಿ ಎದುರಾಗಿದೆ. ಈ ನಡುವೆ ರಸ್ತೆ ದಾಟಲು ಡಿವೈಡರ್ ಮೇಲೆ ನಿಂತಿರುವ ಯುವತಿ ಮೊಬೈಲ್‌ ನೋಡುವುದನ್ನು ಕಾಣಬಹುದು. ( Parveen Kumar/Hindustan Times)

ಚಳಿ, ಹಿಮ ಅಂತ ಸುಮ್ನೆ ಕೂತ್ರೆ ಆಗುತ್ತಾ, ಹೊಟ್ಟೆಪಾಡು ನಡಿಬೇಕಲ್ಲ. ನಾವು ಕೆಲಸ, ಕಾಲೇಜು ಅಂತ ಹೋಗ್ಲೇ ಬೇಕು ಎನ್ನುತ್ತಾ ಮಾಸ್ಕ್‌, ಸ್ವೆಟರ್, ಬ್ಯಾಗ್ ಧರಿಸಿ ಕಾಲೇಜು ಹೋಗುತ್ತಿರುವ ಯುವತಿಯರು ಉದ್ಯೋಗಿಗಳನ್ನು ಈ ಚಿತ್ರದಲ್ಲಿ ಕಾಣಬಹುದು. 
icon

(6 / 10)

ಚಳಿ, ಹಿಮ ಅಂತ ಸುಮ್ನೆ ಕೂತ್ರೆ ಆಗುತ್ತಾ, ಹೊಟ್ಟೆಪಾಡು ನಡಿಬೇಕಲ್ಲ. ನಾವು ಕೆಲಸ, ಕಾಲೇಜು ಅಂತ ಹೋಗ್ಲೇ ಬೇಕು ಎನ್ನುತ್ತಾ ಮಾಸ್ಕ್‌, ಸ್ವೆಟರ್, ಬ್ಯಾಗ್ ಧರಿಸಿ ಕಾಲೇಜು ಹೋಗುತ್ತಿರುವ ಯುವತಿಯರು ಉದ್ಯೋಗಿಗಳನ್ನು ಈ ಚಿತ್ರದಲ್ಲಿ ಕಾಣಬಹುದು. (PC: Ajay Aggarwal/Hindustan Times)

ರಸ್ತೆಗಳಲ್ಲಿ ಮಂಜು, ಹೊಗೆ ಆವರಿಸಿದ್ದು ಗಾಡಿ ಓಡಿಸುವುದು ಕಷ್ಟ ಎಂಬಂಥ ಪರಿಸ್ಥಿತಿ ಎದುರಾಗಿದೆ. ರಸ್ತೆಯುದ್ದಕ್ಕೂ ದೀಪಾವಳಿ ಹಣತೆ ಹಚ್ಚಿದಂತೆ ವಾಹನಗಳು ಹೆಡ್‌ಲೈನ್ ಆನ್‌ ಮಾಡಿಕೊಂಡು ನಿಧಾನಕ್ಕೆ ಸಾಗುತ್ತಿರುವ ಗಾಡಿಗಳನ್ನು ಕಾಣಬಹುದು. 
icon

(7 / 10)

ರಸ್ತೆಗಳಲ್ಲಿ ಮಂಜು, ಹೊಗೆ ಆವರಿಸಿದ್ದು ಗಾಡಿ ಓಡಿಸುವುದು ಕಷ್ಟ ಎಂಬಂಥ ಪರಿಸ್ಥಿತಿ ಎದುರಾಗಿದೆ. ರಸ್ತೆಯುದ್ದಕ್ಕೂ ದೀಪಾವಳಿ ಹಣತೆ ಹಚ್ಚಿದಂತೆ ವಾಹನಗಳು ಹೆಡ್‌ಲೈನ್ ಆನ್‌ ಮಾಡಿಕೊಂಡು ನಿಧಾನಕ್ಕೆ ಸಾಗುತ್ತಿರುವ ಗಾಡಿಗಳನ್ನು ಕಾಣಬಹುದು. (PC: Sanchit Khanna/ Hindustan Times)

 ಹಿಮ ಹಾಸಿದ ವಾತಾವರಣದ ನಡುವೆ ಕಾಯಕಯೋಗಿಗಳು ನಮ್ಮ ಕೆಲಸ ಮಾಡುತ್ತಿದ್ದರೆ ಪಕ್ಷಿಗಳು ಕೂಡ ಚಳಿ ಅಂತ ಸುಮ್ನೆ ಕೂತ್ರೆ ಆಗುತ್ತಾ, ನಮ್ಮ ಹೊಟ್ಟೆ ನಾವು ತುಂಬಿಸಿಕೊಳ್ಳಬೇಕು ಅಂತ ಆಹಾರ ಹುಡುಕಲು ಹೋಗುತ್ತಿವೆ. 
icon

(8 / 10)

 ಹಿಮ ಹಾಸಿದ ವಾತಾವರಣದ ನಡುವೆ ಕಾಯಕಯೋಗಿಗಳು ನಮ್ಮ ಕೆಲಸ ಮಾಡುತ್ತಿದ್ದರೆ ಪಕ್ಷಿಗಳು ಕೂಡ ಚಳಿ ಅಂತ ಸುಮ್ನೆ ಕೂತ್ರೆ ಆಗುತ್ತಾ, ನಮ್ಮ ಹೊಟ್ಟೆ ನಾವು ತುಂಬಿಸಿಕೊಳ್ಳಬೇಕು ಅಂತ ಆಹಾರ ಹುಡುಕಲು ಹೋಗುತ್ತಿವೆ. (PC: Sanchit Khanna/ Hindustan Times)

ನಡುಗುವ ಚಳಿಯಲ್ಲೇ ವ್ಯಕ್ತಿಯೊಬ್ಬ ತನ್ನ ಮಡದಿ, ಮಗುವನ್ನು ಸೈಕಲ್ ಗಾಡಿಯಲ್ಲಿ ಕೂರಿಸಿಕೊಂಡು ಹೋಗುವ ದ್ರಶ್ಯವನ್ನು ಕಾಡಬಹುದು. ಕಂಬಳಿ ಹೊದ್ದು ಕೂತಿರುವ ತಾಯಿಯ ಮಡಲಿನಿಂದ ಇಣುಕಿ ನೋಡುತ್ತಿರುವ ಮಗು ‘ಯಪ್ಪಾ, ಇದೇನಪ್ಪಾ ಚಳಿ ಅಂದುಕೊಳ್ಳುತ್ತಿರಬಹುದು‘ ಅಲ್ವಾ.  
icon

(9 / 10)

ನಡುಗುವ ಚಳಿಯಲ್ಲೇ ವ್ಯಕ್ತಿಯೊಬ್ಬ ತನ್ನ ಮಡದಿ, ಮಗುವನ್ನು ಸೈಕಲ್ ಗಾಡಿಯಲ್ಲಿ ಕೂರಿಸಿಕೊಂಡು ಹೋಗುವ ದ್ರಶ್ಯವನ್ನು ಕಾಡಬಹುದು. ಕಂಬಳಿ ಹೊದ್ದು ಕೂತಿರುವ ತಾಯಿಯ ಮಡಲಿನಿಂದ ಇಣುಕಿ ನೋಡುತ್ತಿರುವ ಮಗು ‘ಯಪ್ಪಾ, ಇದೇನಪ್ಪಾ ಚಳಿ ಅಂದುಕೊಳ್ಳುತ್ತಿರಬಹುದು‘ ಅಲ್ವಾ.  

ದೆಹಲಿ–ಗುರುಗ್ರಾಮ ಹೆದ್ದಾರಿಯಲ್ಲಿ ನಿಧಾನಕ್ಕೆ ಸಾಗುತ್ತಿರುವ ವಾಹನಗಳು ಒಂದೆಡೆಯಾದರೆ ಮೆಟ್ರೊ ನಿಲ್ದಾಣವು ಮಸುಕಾಗಿ ಕಾಣುತ್ತಿದೆ. ಫ್ಲೈ ಓವರ್ ಮೇಲಿಂದ ಕಾಣುವ ಈ ದೃಶ್ಯದಲ್ಲಿ ಸುತ್ತಲೂ ಮಂಜು ಕವಿದಿರುವುದು ಸ್ವಷ್ಟವಾಗಿ ಗೋಚರವಾಗುತ್ತಿದೆ.
icon

(10 / 10)

ದೆಹಲಿ–ಗುರುಗ್ರಾಮ ಹೆದ್ದಾರಿಯಲ್ಲಿ ನಿಧಾನಕ್ಕೆ ಸಾಗುತ್ತಿರುವ ವಾಹನಗಳು ಒಂದೆಡೆಯಾದರೆ ಮೆಟ್ರೊ ನಿಲ್ದಾಣವು ಮಸುಕಾಗಿ ಕಾಣುತ್ತಿದೆ. ಫ್ಲೈ ಓವರ್ ಮೇಲಿಂದ ಕಾಣುವ ಈ ದೃಶ್ಯದಲ್ಲಿ ಸುತ್ತಲೂ ಮಂಜು ಕವಿದಿರುವುದು ಸ್ವಷ್ಟವಾಗಿ ಗೋಚರವಾಗುತ್ತಿದೆ.( PC: Parveen Kumar/Hindustan Times)


ಇತರ ಗ್ಯಾಲರಿಗಳು