ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಇತಿಹಾಸದಲ್ಲಿ ಈ ಕ್ರಿಕೆಟಿಗರನ್ನು ಕೈಬಿಟ್ಟು ಕೆಟ್ಟ ಫ್ರಾಂಚೈಸಿಗಳು; ದೊಡ್ಡ ಮಿಸ್ಟೇಕ್ ಮಾಡಿಕೊಂಡ ತಂಡಗಳು ಇವು

ಐಪಿಎಲ್ ಇತಿಹಾಸದಲ್ಲಿ ಈ ಕ್ರಿಕೆಟಿಗರನ್ನು ಕೈಬಿಟ್ಟು ಕೆಟ್ಟ ಫ್ರಾಂಚೈಸಿಗಳು; ದೊಡ್ಡ ಮಿಸ್ಟೇಕ್ ಮಾಡಿಕೊಂಡ ತಂಡಗಳು ಇವು

  • IPL 2024: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೆಲ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಕೈಬಿಟ್ಟು ದೊಡ್ಡ ಎಡವಟ್ಟು ಮಾಡಿಕೊಂಡಿವೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

ಐಪಿಎಲ್​ನ ಪ್ರತಿ ಫ್ರಾಂಚೈಸಿ ಪರ ಒಬ್ಬೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡಿರುತ್ತಾರೆ. ಆದರೆ, ಅದೇ ಆಟಗಾರ ತಾನು ಮೊದಲಿದ್ದ ತಂಡದ ಪರ ಕಳಪೆ ಪ್ರದರ್ಶನ ನೀಡಿರುತ್ತಾರೆ. ಅಥವಾ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಕೈಬಿಡಲಾಗಿರುತ್ತದೆ. ಆದರೆ, ಅಂತಹ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಟ್ಟು ತಪ್ಪು ಮಾಡಿವೆ. ಯಾವ ತಂಡ ಯಾರನ್ನು ಕೈಬಿಟ್ಟು ಕೆಟ್ಟಿದೆ ಎಂಬ ಪಟ್ಟಿ ಇಲ್ಲಿದೆ.
icon

(1 / 11)

1. ಯುಜ್ವೇಂದ್ರ ಚಹಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿದ ಅತ್ಯಂತ ದೊಡ್ಡ ಪ್ರಮಾದ ಎಂದರೆ, ಲೆಗ್​ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದು. 2014ರಲ್ಲಿ ಆರ್​ಸಿಬಿ ಸೇರಿದ ಯುಜಿ, 2021ರವರೆಗೂ ತಂಡದ ಪರ ಆಡಿದರು. ಅದ್ಭುತ ಬೌಲಿಂಗ್​ ಮೂಲಕ ಬೆಂಗಳೂರು ಪರ 140 ವಿಕೆಟ್ ಉರುಳಿಸಿದ್ದ ಚಹಲ್​ರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹರಾಜಿನಲ್ಲೂ ಬಿಡ್ ಮಾಡಲಿಲ್ಲ. ಅದರ ಪರಿಣಾಮ ಈಗ ತಂಡದಲ್ಲಿ ಲೆಗ್​ಸ್ಪಿನ್ನರ್ ಸಮಸ್ಯೆ ಎದುರಿಸುತ್ತಿದೆ.
icon

(2 / 11)

2. ರಶೀದ್ ಖಾನ್: ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ತಂಡದಿಂದ ರಿಲೀಸ್ ಮಾಡಿ ಸನ್​ರೈಸರ್ಸ್ ಹೈದರಾಬಾದ್ ಕೈ ಸುಟ್ಟುಕೊಂಡಿತ್ತು. 2017ರಲ್ಲಿ 4 ಕೋಟಿಗೆ ಎಸ್​ಆರ್​ಹೆಚ್ ಸೇರಿದ್ದ ರಶೀದ್​ರನ್ನು 2018ರ ಹರಾಜಿನಲ್ಲಿ 9 ಕೋಟಿಗೆ ಹೈದರಾಬಾದ್ ಮತ್ತೆ ಖರೀದಿಸಿತು. ರಶೀದ್ ಎಸ್‌ಆರ್‌ಎಚ್‌ ಪರ ಆಡಿದ 76 ಪಂದ್ಯಗಳಲ್ಲಿ 93 ವಿಕೆಟ್‌ ಪಡೆದಿದ್ದಾರೆ. 2021ರ ಐಪಿಎಲ್​ ನಂತರ ಆತನನ್ನು ಕೈಬಿಟ್ಟಿತು.
icon

(3 / 11)

3. ಆಂಡ್ರೆ ರಸೆಲ್: ವೆಸ್ಟ್ ಇಂಡೀಸ್​ನ ಆಂಡ್ರೆ ರಸೆಲ್ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಫಿನಿಷರ್​ ಆಗಿದ್ದಾರೆ. ಬೌಲಿಂಗ್​​ ಮತ್ತು ಬ್ಯಾಟಿಂಗ್​​ನಲ್ಲಿ ಖಡಕ್ ಪ್ರದರ್ಶನ ನೀಡುತ್ತಿದ್ದು, ಗೇಮ್​ ಚೇಂಜಿಂಗ್ ಪ್ಲೇಯರ್​ ಆಗಿದ್ದಾರೆ. ಆದರೆ ರಸೆಲ್ ಮೊದಲು ಆಡಿದ್ದು, ಡೆಲ್ಲಿ ಡೇರ್​ಡೆವಿಲ್ಸ್ ಪರ (ಈಗಿನ ಡೆಲ್ಲಿ ಕ್ಯಾಪಿಟಲ್ಸ್). ರಸೆಲ್​ರನ್ನು ತಂಡದಿಂದ ಬಿಡುಗಡೆ ಮಾಡುವ ಮೂಲಕ ದೊಡ್ಡ ಎಡವಟ್ಟವನ್ನು ಮಾಡಿಕೊಂಡಿತು.
icon

(4 / 11)

4. ಶುಭ್ಮನ್ ಗಿಲ್: ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಇದರ ಹೊರತಾಗಿಯೂ ಆತನನ್ನು ಕೆಕೆಆರ್ ಕೈಬಿಟ್ಟಿತು. ಆತನನ್ನು ಗುಜರಾತ್​ ಟೈಟಾನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು. 2018ರಿಂದ  2021ರವರೆಗೂ ಕೆಕೆಆರ್ ಪರ 58 ಪಂದ್ಯಗಳನ್ನಾಡಿದರು. ಆದರೀಗ ಜಿಟಿ ಪರ ನಾಯಕನಾಗಿ ಮಿಂಚುತ್ತಿದ್ದಾರೆ.
icon

(5 / 11)

5. ಗ್ಲೆನ್ ಮ್ಯಾಕ್ಸ್​ವೆಲ್: ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಅಬ್ಬರಿಸಿದ್ದರು. 2024ರ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಮಾತ್ರಕ್ಕೆ, ಮ್ಯಾಕ್ಸಿಯನ್ನು ಟೀಕಿಸಲು ಸಾಧ್ಯವಿಲ್ಲ. 2020ರ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದರೆಂದ ಮಾತ್ರಕ್ಕೆ ಅವರನ್ನು ಕೈಬಿಡಲಾಯಿತು. ಆದರೆ ಅದಕ್ಕೂ ಹಿಂದಿನ ಆವೃತ್ತಿಗಳಲ್ಲಿ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಿದ್ದರು. 14.25 ಕೋಟಿಗೆ ಆರ್​ಸಿಬಿ ಪಾಲಾದ ಮ್ಯಾಕ್ಸಿಯನ್ನು ಮತ್ತೆ ಉಳಿಸಿಕೊಂಡಿತ್ತು.
icon

(6 / 11)

6. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ಸೂರ್ಯನನ್ನು ಕೈಬಿಟ್ಟು ದೊಡ್ಡ ತಪ್ಪು ಮಾಡಿದ್ದೆವು ಎಂದು ಈ ಹಿಂದೆ ಗೌತಮ್ ಗಂಭೀರ್ ಹೇಳಿದ್ದರು. 360 ಡಿಗ್ರಿಯಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಸೂರ್ಯ, ಐಪಿಎಲ್​ನಲ್ಲಿ ಆರ್ಭಟಿಸಿ ಭಾರತ ತಂಡಕ್ಕೂ ಕಾಲಿಟ್ಟರು. ಪ್ರೀಮಿಯಮ್​ ಆಟಗಾರನಾದ ಸೂರ್ಯ, ಕೆಕೆಆರ್​​ನಲ್ಲಿದ್ದರೂ ಘರ್ಜಿಸಿದ್ದರು. ಇದರ ಹೊರತಾಗಿಯೂ ಆತನನ್ನು ಕೈಬಿಡಲಾಯಿತು. 2014ರಿಂದ 2018ರವರೆಗೂ ಕೆಕೆಆರ್​ ಪಎ ಆಡಿದ್ದರು. ಈಗ ಅಂದಿನಿಂದ ಮುಂಬೈ ಪರ ಆಡುತ್ತಿದ್ದಾರೆ.
icon

(7 / 11)

7. ಜೋಸ್ ಬಟ್ಲರ್: ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆರ್ಭಟ ನಡೆಸುತ್ತಿರುವ ಜೋಸ್ ಬಟ್ಲರ್, ಮೊದಲು ಮುಂಬೈ ತಂಡದಲ್ಲಿದ್ದರು. 2016 ಮತ್ತು 2017ರಲ್ಲಿ ಮುಂಬೈ ಪರ ಆಡಿದ್ದರು. ಆ ಬಳಿಕ 2018ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
icon

(8 / 11)

8. ಕೆಎಲ್ ರಾಹುಲ್: ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಆ ಬಳಿಕ ಪಂಜಾಬ್ ಕಿಂಗ್ಸ್ ಸೇರಿದ್ದರು. ಅಲ್ಲಿ ನಾಯಕನಾಗಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಆ ಬಳಿಕ ರಾಹುಲ್ ಲಕ್ನೋ ತಂಡವನ್ನು ಸೇರಿದ್ದು, ಇಲ್ಲೂ ಕ್ಯಾಪ್ಟನ್ ಆಗಿದ್ದಾರೆ.
icon

(9 / 11)

9. ಡೇವಿಡ್ ವಾರ್ನರ್: ಟ್ರೋಫಿ ಗೆದ್ದುಕೊಟ್ಟಿದ್ದ ಡೇವಿಡ್ ವಾರ್ನರ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಕೈಬಿಟ್ಟು ಕೆಟ್ಟಿತು. ತಂಡದ ಪರ ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದ ವಾರ್ನರ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.
icon

(10 / 11)

10. ಎಬಿ ಡಿವಿಲಿಯರ್ಸ್: ಆರ್​ಸಿಬಿ ಆಪತ್ಭಾಂದವ ಎಂದೇ ಕರೆಸಿಕೊಳ್ಳುವ ಎಬಿ ಡಿವಿಲಿಯರ್ಸ್ ಮೊದಲು ಡೆಲ್ಲಿ ತಂಡದ ಪರ ಆಡುತ್ತಿದ್ದರು. ಆದರೆ 2010ರಲ್ಲಿ ಕೈಬಿಟ್ಟಿತು. ಆ ಬಳಿಕ 2011ರಿಂದ 2020 ರವರೆಗೂ ಆರ್​ಸಿಬಿ ಪರ ಆಡಿದ್ದರು.
icon

(11 / 11)

IPL_Entry_Point

ಇತರ ಗ್ಯಾಲರಿಗಳು