Saree Draping Tips: ನೀರೆಯರೇ ಸೀರೆ ಉಡುವುದು ಸುಲಭವಲ್ಲ, ಸೀರೆ ಉಟ್ಟಾಗ ಈ 5 ಅಂಶ ಗಮನಿಸೋಕೆ ಮರಿಬೇಡಿ
- ಸೀರೆ ಉಡೋದು ಅಂದ್ರೆ ಹೆಣ್ಣುಮಕ್ಕಳಿಗೆ ಅದೇನೋ ಒಲವು. ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿರುವ ಸೀರೆಯನ್ನು ಉಡಲು ಒಂದು ಕ್ರಮವಿದೆ. ಹೇಗೋಗೋ ಸೀರೆಯುಟ್ಟರೆ ಅಸಂಬದ್ಧವಾಗಿ ಕಾಣಬಹುದು. ಈ ಅಂಶಗಳು ನೀವು ಸರಿಯಾಗಿ ಸೀರೆ ಉಟ್ಟಿಲ್ಲ ಎಂಬುದನ್ನು ಸೂಚಿಸುತ್ತವೆ.
- ಸೀರೆ ಉಡೋದು ಅಂದ್ರೆ ಹೆಣ್ಣುಮಕ್ಕಳಿಗೆ ಅದೇನೋ ಒಲವು. ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿರುವ ಸೀರೆಯನ್ನು ಉಡಲು ಒಂದು ಕ್ರಮವಿದೆ. ಹೇಗೋಗೋ ಸೀರೆಯುಟ್ಟರೆ ಅಸಂಬದ್ಧವಾಗಿ ಕಾಣಬಹುದು. ಈ ಅಂಶಗಳು ನೀವು ಸರಿಯಾಗಿ ಸೀರೆ ಉಟ್ಟಿಲ್ಲ ಎಂಬುದನ್ನು ಸೂಚಿಸುತ್ತವೆ.
(1 / 7)
ಸೆರಗಿನ ಉದ್ದ ಸರಿಯಿಲ್ಲದೇ ಇರುವುದು: ಸೀರೆ ಉಡುವಾಗ ಸೆರಗನ್ನು ಸರಿಯಾಗಿ ಜೋಡಿಸಿ ಪಿನ್ ಮಾಡುವುದು ಬಹಳ ಮುಖ್ಯ. ಉದ್ದ, ಗಿಡ್ಡ ಮಾಡಿ ಮಡಿಸಿದರೆ ಸೀರೆ ಉಟ್ಟಿದ್ದು ಅಸಂಬದ್ಧವಾಗಿ ಕಾಣಬಹುದು. ಸಂಪೂರ್ಣವಾಗಿ ಸೀರೆ ಉಟ್ಟಾದ ಮೇಲೆ ಸೆರಗನ್ನು ಗಮನಿಸಿ. ಅತಿ ಉದ್ದವಾದರೂ ಚೆಂದ ಕಾಣುವುದಿಲ್ಲ, ಗಿಡ್ಡವೂ ಬೇಡ.
(2 / 7)
ನೆರಿಗೆ: ಸೀರೆ ಉಟ್ಟಾಗ ಅಂದ ಹೆಚ್ಚಿಸುವುದೇ ನೆರಿಗೆಗಳು. ಸೀರೆ ನೆರಿಗೆಯನ್ನು ನೀಟಾಗಿ ಜೋಡಿಸಿ, ನೆರಿಗೆ ಜೋಡಿಸಲು ಬೇರೆಯವರ ಸಹಾಯ ಪಡೆಯಿರಿ. ನೆರಿಗೆಗಳು ಕೂಡ ತೀರಾ ಸಡಿಲವಾಗಿರಬಾರದು. ಹಾಗಂತ ಬಿಗಿಯಾಗಿ ಇರುವುದು ಸರಿಯಲ್ಲ. ನೆರಿಗೆ ಸಿಕ್ಕಿಸಿಕೊಳ್ಳುವ ಮೊದಲೇ ಸರಿ ಮಾಡಿಕೊಳ್ಳಿ.
(3 / 7)
ಸೇಫ್ಟಿ ಪಿನ್ ಕಾಣಿಸುವುದು: ಸೀರೆ ಉಟ್ಟಾಗ ಸೇಫ್ಟಿ ಫಿನ್ ಹಾಕುವುದು ಸಹಜ. ಆದರೆ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ ಕಾಣುವಂತೆ ಇರಿಸಬಾರದು. ಇದರಿಂದ ನಿಮ್ಮ ಸೀರೆ ಅಂದ ಕೆಡುವ ಜೊತೆಗೆ ನಿಮಗೆ ಮುಜುಗರ ಉಂಟಾಗಬಹುದು. ಸೀರೆ ಉಟ್ಟಾಗ ತಪ್ಪಿಯೂ ಸೇಫ್ಟಿ ಪಿನ್ ಕಾಣದಂತೆ ಮಾಡುವುದು ಒಂದು ಕಲೆ.
(4 / 7)
ಸೀರೆ ಅಂಚು: ಸೀರೆಯ ನೆರಿಗೆಯಂತೆ ತುದಿಯನ್ನು ಕೂಡ ಸರಿಯಾಗಿ ಜೋಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಸೀರೆ ತುದಿ ಓರೆಕೋರೆಯಾದರೆ ಸೀರೆಯ ಅಂದದ ಜೊತೆಗೆ ನಿಮ್ಮ ಅಂದವೂ ಕೆಡುವುದರಲ್ಲಿ ಅನುಮಾನವಿಲ್ಲ. ಸೀರೆ ಡ್ರಾಪಿಂಗ್ ಎನ್ನುವುದು ಅಡಿಯಿಂದ ಕುತ್ತಿಗೆಯವರೆಗೆ ಎಲ್ಲಾ ಕಡೆ ಸರಿಯಾಗಿ ಇರುವುದು ಮುಖ್ಯವಾಗುತ್ತದೆ. ಸೀರೆಯನ್ನು ಪಾದ ಮುಚ್ಚುವಂತೆ ಉಡಬೇಕು. ಪಾದ ತೋರುವಂತೆ ಸೀರೆ ಉಡುವುದು ಚೆಂದವಲ್ಲ.
(5 / 7)
ಸೀರೆ ಉಡುವಾಗ ಬಹಳ ಮುಖ್ಯವಾಗಿರುವುದು ಕಂಫರ್ಟ್. ನೀವು ಸೀರೆಯಲ್ಲಿ ಕಂಫರ್ಟ್ ಇದ್ದಾಗ ಮಾತ್ರ ಇದು ನಿಮಗೆ ಪರ್ಫೆಕ್ಟ್ ಆಗಿ ಕಾಣಿಸುವುದು. ಸೀರೆ ಉಟ್ಟಿದ್ದು ಸರಿಯಿಲ್ಲ ಎಂದಾದರೆ ನಿಮಗೆ ಕಿರಿಕಿರಿ ಅನ್ನಿಸಬಹುದು. ಸೀರೆ ಸಡಿಲವಾಗಿದ್ದರೂ ಅಸಹ್ಯ ಕಾಣಿಸಬಹುದು.
(6 / 7)
ಸೀರೆ ಉಡುವುದು ಒಂದು ಕಲೆ. ಎಲ್ಲರಿಗೂ ಚೆನ್ನಾಗಿ ಸೀರೆ ಉಡಲು ಬರುವುದಿಲ್ಲ. ಆದರೆ ಸೀರೆ ಉಡುವ ಮುನ್ನ ಈ ಮೇಲಿನ ಅಂಶಗಳನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಸೀರೆ ಉಟ್ಟು ಹೆಚ್ಚಬೇಕಾದ ನಿಮ್ಮ ಅಂದ ಕೆಡುವುದರಲ್ಲಿ ಅನುಮಾನವಿಲ್ಲ.
ಇತರ ಗ್ಯಾಲರಿಗಳು