ಬಕ್ರೀದ್‌ ಆಚರಣೆಗೆ ದಿನಗಣನೆ; ಇತರ ದೇಶಗಳಲ್ಲಿ ಈ ತ್ಯಾಗದ ಹಬ್ಬ ಈದ್‌ ಉಲ್‌ ಅಧಾವನ್ನು ಹೇಗೆ ಆಚರಿಸುತ್ತಾರೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಕ್ರೀದ್‌ ಆಚರಣೆಗೆ ದಿನಗಣನೆ; ಇತರ ದೇಶಗಳಲ್ಲಿ ಈ ತ್ಯಾಗದ ಹಬ್ಬ ಈದ್‌ ಉಲ್‌ ಅಧಾವನ್ನು ಹೇಗೆ ಆಚರಿಸುತ್ತಾರೆ?

ಬಕ್ರೀದ್‌ ಆಚರಣೆಗೆ ದಿನಗಣನೆ; ಇತರ ದೇಶಗಳಲ್ಲಿ ಈ ತ್ಯಾಗದ ಹಬ್ಬ ಈದ್‌ ಉಲ್‌ ಅಧಾವನ್ನು ಹೇಗೆ ಆಚರಿಸುತ್ತಾರೆ?

ಬಕ್ರೀದ್‌ 2024: ಈದ್ ಉಲ್ ಅಧಾವನ್ನು ಬಕ್ರೀದ್‌ ಎಂದೂ ಕರೆಯುತ್ತಾರೆ. ತ್ಯಾಗದ ಹಬ್ಬ ಎಂದೂ ಕರೆಯಲ್ಪಡುವ ಈದ್ ಉಲ್ ಅಧಾ ಪ್ರಪಂಚದಾದ್ಯಂತ ಆಚರಿಸಲಾಗುವ ಇಸ್ಲಾಂ ಸಮುದಾಯದ ಅತ್ಯಂತ ವಿಶೇಷ ಹಬ್ಬಗಳಲ್ಲಿ ಒಂದು.ಈದ್ ಉಲ್ ಅಧಾವನ್ನು ವಿಶ್ವಾದ್ಯಂತ ಹೇಗೆ ಆಚರಿಸುತ್ತಾರೆ ಕುರಿತು ಇಲ್ಲೊಂದಿಷ್ಟು ಮಾಹಿತಿ ಇದೆ.

 ಭಾರತದಲ್ಲಿ ಬಕ್ರೀದ್ ಎಂದೂ ಕರೆಯಲ್ಪಡುವ ಈದ್ ಉಲ್ ಅಧಾ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಈ ವರ್ಷ, ಈದ್ ಉಲ್ ಅಧಾವನ್ನು ಭಾರತದಲ್ಲಿ ಜೂನ್ 16 ರಂದು ಮತ್ತು ಸೌದಿ ಅರೇಬಿಯಾದಲ್ಲಿ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. 
icon

(1 / 5)

 ಭಾರತದಲ್ಲಿ ಬಕ್ರೀದ್ ಎಂದೂ ಕರೆಯಲ್ಪಡುವ ಈದ್ ಉಲ್ ಅಧಾ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಈ ವರ್ಷ, ಈದ್ ಉಲ್ ಅಧಾವನ್ನು ಭಾರತದಲ್ಲಿ ಜೂನ್ 16 ರಂದು ಮತ್ತು ಸೌದಿ ಅರೇಬಿಯಾದಲ್ಲಿ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. (Unsplash)

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ, ಈದ್ ಉಲ್ ಅಧಾ ದಿನದಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲಾಗಿದೆ. ಬೆಳಗ್ಗೆ ಅಲ್ಲಾಹರ್‌ ಪ್ರಾರ್ಥನೆ ಮಾಡುವ ಮೂಲಕ ಹಬ್ಬ ಆರಂಭವಾಗುತ್ತದೆ. ನಂತರ ಮೇಕೆಯನ್ನು ಬಲಿ ಕೊಡುತ್ತಾರೆ. ಮೊರಾಕೊದಲ್ಲಿ, ಜನರು ಅಲ್ಲಾಹ್‌ಗೆ ಬಲಿ ಕೊಡುವ ಪ್ರಾಣಿಗಳ ಕೊಂಬುಗಳಿಗೆ ಗೋರಂಟಿ ಹಚ್ಚುತ್ತಾರೆ, ಹೀಗೆ ಮಾಡಿದರೆ ಶುಭ ಎಂಬ ನಂಬಿಕೆ ಇದೆ. ಭಾರತದಲ್ಲಿ ಈ ಹಬ್ಬದಂದು ಮೇಕೆ ಅಥವಾ ಕುರಿಯನ್ನು ಬಲಿ ಕೊಟ್ಟರೆ ವಿದೇಶಗಳಲ್ಲಿ ಒಂಟಿಯನ್ನು ಬಲಿ ಕೊಡುತ್ತಾರೆ. 
icon

(2 / 5)

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ, ಈದ್ ಉಲ್ ಅಧಾ ದಿನದಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲಾಗಿದೆ. ಬೆಳಗ್ಗೆ ಅಲ್ಲಾಹರ್‌ ಪ್ರಾರ್ಥನೆ ಮಾಡುವ ಮೂಲಕ ಹಬ್ಬ ಆರಂಭವಾಗುತ್ತದೆ. ನಂತರ ಮೇಕೆಯನ್ನು ಬಲಿ ಕೊಡುತ್ತಾರೆ. ಮೊರಾಕೊದಲ್ಲಿ, ಜನರು ಅಲ್ಲಾಹ್‌ಗೆ ಬಲಿ ಕೊಡುವ ಪ್ರಾಣಿಗಳ ಕೊಂಬುಗಳಿಗೆ ಗೋರಂಟಿ ಹಚ್ಚುತ್ತಾರೆ, ಹೀಗೆ ಮಾಡಿದರೆ ಶುಭ ಎಂಬ ನಂಬಿಕೆ ಇದೆ. ಭಾರತದಲ್ಲಿ ಈ ಹಬ್ಬದಂದು ಮೇಕೆ ಅಥವಾ ಕುರಿಯನ್ನು ಬಲಿ ಕೊಟ್ಟರೆ ವಿದೇಶಗಳಲ್ಲಿ ಒಂಟಿಯನ್ನು ಬಲಿ ಕೊಡುತ್ತಾರೆ. (Unsplash)

ದಕ್ಷಿಣ ಏಷ್ಯಾದಲ್ಲಿ ಈದ್‌ ಉಲ್‌ ಅಧಾದಂದು ವಿಶೇಷ ಫುಡ್‌ಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ಈ ಹಬ್ಬದಂದು ಬಿರಿಯಾನಿ, ಶೀರ್‌ ಕುರ್ಮಾ ಸೇರಿದಂತೆ ಇನ್ನಿತರ ರುಚಿಕರ ಭೋಜನಗಳನ್ನು ತಯಾರಿಸುತ್ತಾರೆ. ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಸವಿಯುತ್ತಾರೆ. 
icon

(3 / 5)

ದಕ್ಷಿಣ ಏಷ್ಯಾದಲ್ಲಿ ಈದ್‌ ಉಲ್‌ ಅಧಾದಂದು ವಿಶೇಷ ಫುಡ್‌ಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ಈ ಹಬ್ಬದಂದು ಬಿರಿಯಾನಿ, ಶೀರ್‌ ಕುರ್ಮಾ ಸೇರಿದಂತೆ ಇನ್ನಿತರ ರುಚಿಕರ ಭೋಜನಗಳನ್ನು ತಯಾರಿಸುತ್ತಾರೆ. ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಸವಿಯುತ್ತಾರೆ. (Unsplash)

ಯುರೋಪ್ ಮತ್ತು ಅಮೆರಿಕಾದಲ್ಲಿ, ಮುಸ್ಲಿಮರು ಈದ್ ಉಲ್ ಅಧಾವನ್ನು ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ತಾವು ಈ ಊಟವನ್ನು ತಿನ್ನುವ ಮುನ್ನ ಜನರಿಗೆ ಮೊದಲು ಹಂಚುತ್ತಾರೆ.  
icon

(4 / 5)

ಯುರೋಪ್ ಮತ್ತು ಅಮೆರಿಕಾದಲ್ಲಿ, ಮುಸ್ಲಿಮರು ಈದ್ ಉಲ್ ಅಧಾವನ್ನು ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ತಾವು ಈ ಊಟವನ್ನು ತಿನ್ನುವ ಮುನ್ನ ಜನರಿಗೆ ಮೊದಲು ಹಂಚುತ್ತಾರೆ.  (Unsplash)

ಮಲೇಷ್ಯಾ, ಇಂಡೋನೇಷ್ಯಾ, ಸಿಂಗಪೂರ್‌ನಂಥ ದೇಶಗಳಲ್ಲಿ ಈದ ಉಲ್‌ ಅಧಾವನ್ನು ಹರಿ ರಾಯ ಹಾಜಿ, ಹರಿ ರಾಯ ಐದಿಲಾಧ ಎಂದು ಕರೆಯುತ್ತಾರೆ. ಈ ದಿನ ಪ್ರಾಣಿಗಳ ಬಲಿ, ಪ್ರಾರ್ಥನೆ ಮಾಡುವುದರೊಂದಿಗೆ ದಾನ ಮಾಡುವ ಮೂಲಕ ಹಬ್ಬ ಆಚರಿಸುತ್ತಾರೆ. 
icon

(5 / 5)

ಮಲೇಷ್ಯಾ, ಇಂಡೋನೇಷ್ಯಾ, ಸಿಂಗಪೂರ್‌ನಂಥ ದೇಶಗಳಲ್ಲಿ ಈದ ಉಲ್‌ ಅಧಾವನ್ನು ಹರಿ ರಾಯ ಹಾಜಿ, ಹರಿ ರಾಯ ಐದಿಲಾಧ ಎಂದು ಕರೆಯುತ್ತಾರೆ. ಈ ದಿನ ಪ್ರಾಣಿಗಳ ಬಲಿ, ಪ್ರಾರ್ಥನೆ ಮಾಡುವುದರೊಂದಿಗೆ ದಾನ ಮಾಡುವ ಮೂಲಕ ಹಬ್ಬ ಆಚರಿಸುತ್ತಾರೆ. (Unsplash)


ಇತರ ಗ್ಯಾಲರಿಗಳು