Yugadi 2024: ಯುಗಾದಿ ಥೀಮ್‌ನಲ್ಲಿ ನಿಮ್ಮ ಪುಟಾಣಿಗೆ ಫೋಟೊಶೂಟ್ ಮಾಡಿಸಬೇಕು ಅಂತಿದೀರಾ, ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು
- ಹಬ್ಬಗಳ ಸಂದರ್ಭದಲ್ಲಿ ಪುಟ್ಟ ಮಗುವಿಗೆ ಸುಂದರವಾಗಿ ಡ್ರೆಸ್ ಮಾಡುವುದೆಂದರೆ ತಾಯಿಗೆ ಅದೇನೋ ಸಂಭ್ರಮ. ಈ ವರ್ಷದ ಯುಗಾದಿಗೆ ನಿಮ್ಮ ಪುಟ್ಟ ಕಂದಮ್ಮನಿಗೆ ಯುಗಾದಿ ಹಬ್ಬದ ಪರಿಕಲ್ಪನೆಯಲ್ಲಿ ಡ್ರೆಸ್ ಹಾಕಿಸಿ, ಫೋಟೊಶೂಟ್ ಮಾಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ. ಹೀಗೆ ಡ್ರೆಸ್ ಮಾಡಿ, ಫೋಟೊಗಳನ್ನು ಹಂಚಿಕೊಂಡ ಮೇಲೆ ದೃಷ್ಟಿ ತೆಗಿಯೋದು ಮರಿಬೇಡಿ.
- ಹಬ್ಬಗಳ ಸಂದರ್ಭದಲ್ಲಿ ಪುಟ್ಟ ಮಗುವಿಗೆ ಸುಂದರವಾಗಿ ಡ್ರೆಸ್ ಮಾಡುವುದೆಂದರೆ ತಾಯಿಗೆ ಅದೇನೋ ಸಂಭ್ರಮ. ಈ ವರ್ಷದ ಯುಗಾದಿಗೆ ನಿಮ್ಮ ಪುಟ್ಟ ಕಂದಮ್ಮನಿಗೆ ಯುಗಾದಿ ಹಬ್ಬದ ಪರಿಕಲ್ಪನೆಯಲ್ಲಿ ಡ್ರೆಸ್ ಹಾಕಿಸಿ, ಫೋಟೊಶೂಟ್ ಮಾಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ. ಹೀಗೆ ಡ್ರೆಸ್ ಮಾಡಿ, ಫೋಟೊಗಳನ್ನು ಹಂಚಿಕೊಂಡ ಮೇಲೆ ದೃಷ್ಟಿ ತೆಗಿಯೋದು ಮರಿಬೇಡಿ.
(1 / 11)
ಇತ್ತೀಚಿನ ದಿನಗಳಲ್ಲಿ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಆ ದಿನದ ಪರಿಕಲ್ಪನೆ ಅಥವಾ ಥೀಮ್ ಇರಿಸಿಕೊಂಡು ಪುಟ್ಟ ಕಂದಮ್ಮಗಳ ಫೋಟೊಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ನೀವು ನಿಮ್ಮ ಮಗುವಿಗೆ ಈ ಯುಗಾದಿ ಹಬ್ಬಕ್ಕೆ ಯುಗಾದಿ ಥೀಮ್‌ನಲ್ಲಿ ಫೋಟೊಶೂಟ್ ಮಾಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.
(2 / 11)
ಯುಗಾದಿ ಹಬ್ಬದಂದು ತಳಿರು ತೋರಣ, ಬೇವು-ಬೆಲ್ಲ ಈ ಎಲ್ಲವೂ ವಿಶೇಷ. ಇದೇ ಪರಿಕಲ್ಪನೆಯಲ್ಲಿ ನಿಮ್ಮ ಮಗುವನ್ನು ಅಲಂಕರಿಸಿ. ನಿಮ್ಮ ಮುದ್ದು ಮುಗುವಿನ ಹೊಸ ಬಟ್ಟೆ ಧರಿಸಿ, ಬಿಳಿ ಬಟ್ಟೆಯ ಮೇಲೆ ಮಲಗಿಸಿ ತಲೆಯ ಬಳಿ ಮಾವು-ಬೇವುಗಳನ್ನ ಇರಿಸಿ. ಮಗುವಿನ ಪಕ್ಕದಲ್ಲಿ ಯಗಾದಿ ಖಾದ್ಯಗಳನ್ನು ಇರಿಸಿ ಫೋಟೊಶೂಟ್ ಮಾಡಿಸಬಹುದು. (PC: Pinterest )
(3 / 11)
ತಾಜಾ ಬಾಳೆಎಲೆಗಳು, ಬಾಳೆಹಣ್ಣು ಹಾಗೂ ಯುಗಾದಿ ಖಾದ್ಯಗಳನ್ನು ಇರಿಸಿ, ನಿಮ್ಮ ಪುಟಾಣಿ ಮಗುವಿಗೆ ಹೊಸ ಬಟ್ಟೆ ತೊಡಿಸಿ ಮಧ್ಯದಲ್ಲಿ ಮಲಗಿಸಿ ಚೆಂದ ಯುಗಾದಿ ಥೀಮ್‌ನ ಫೋಟೊಶೂಟ್ ಮಾಡಿಸಬಹುದು. ಇದು ವಿಶು ಹಬ್ಬಕ್ಕೂ ಹೇಳಿ ಮಾಡಿಸಿದಂತಿರುವುದು ಸುಳ್ಳಲ್ಲ. (PC: Pinterest )
(4 / 11)
ಯುಗಾದಿಯನ್ನು ಶಿವನೊಂದಿಗೆ ತಳುಕು ಹಾಕಿ ಹೊಸ ಪರಿಕಲ್ಪನೆಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸಬಹುದು. ಶಿವಲಿಂಗ, ರುದ್ರಾಕ್ಷಿ, ಕಮಂಡಲದೊಂದಿಗೆ ಮಗುವಿನ ಸುತ್ತಲೂ ವಿವಿಧ ಭಕ್ಷಗಳನ್ನ ಇರಿಸಿ ಫೋಟೊಶೂಟ್ ಮಾಡಿಸಬಹುದು. (PC: Pinterest )
(5 / 11)
ನಿಮ್ಮ ಪುಟ್ಟ ಕಂದಮ್ಮನಿಗೆ ಸಾಂಪ್ರದಾಯಿಕ ಲಂಗ-ದಾವಣಿ ಅಥವಾ ಪುಟ್ಟದಾದ ಶರ್ಟ್-ಪಂಜೆ ತೊಡಿಸಿ, ಮನೆಯನ್ನು ಅಲಂಕರಿಸಿದಂತೆ ತಳಿರು ತೋರಣಗಳಿಂದ ಮಾವು-ಬೇವಿನ ಎಲೆಗಳಿಂದ ಹಾಸಿಗೆಯನ್ನು ಅಲಂಕರಿಸಿ ಪಕ್ಕದಲ್ಲಿ ಒಬ್ಬಟ್ಟು, ಚಿತ್ರಾನ್ನ ಇರಿಸಿ ಚೆಂದದ ಫೋಟೊಶೂಟ್ ಮಾಡಿಸಬಹುದು. (PC: Pinterest )
(6 / 11)
ಸಾಂಪ್ರದಾಯಿಕ ರೇಷ್ಮೆ ಬಟ್ಟೆ ತೊಡಿಸಿ, ಮಾವಿನಕಾಯಿ, ಬೇವಿನಎಲೆ, ಬೇವು-ಬೆಲ್ಲ, ಚಿತ್ರಾನ್ನ, ಈ ಎಲ್ಲವನ್ನೂ ಇರಿಸಿ ಮಗುವಿಗೆ ಚಿನ್ನಾಭರಣಗಳನ್ನು ತೊಡಿಸಿ ಚೆಂದದ ಫೋಟೊ ತೆಗೆಯಬಹುದು.
(7 / 11)
ಯುಗಾದಿಗೆ ಚೆಂಡು ಹೂವಿನಿಂದ ಮನೆ ಅಲಂಕರಿಸಲಾಗುತ್ತದೆ. ಇದೇ ಚೆಂಡು ಹೂ ನಿಮ್ಮ ಮಗುವಿನ ಫೋಟೊಶೂಟ್‌ಗೆ ಭಿನ್ನ ರೂಪ ನೀಡಬಹುದು. ಚೆಂಡು ಹೂವನ್ನು ಉದ್ದಕ್ಕೆ ಇಳಿಬಿಟ್ಟು, ತಲೆ ಮೇಲೆ ಚೆಂಡು ಹೂವಿನ ಹಾರದಿಂದ ಅಲಂಕರಿಸಿ, ಮಧ್ಯೆ ಮಾವಿನ ಎಲೆಯ ತೋರಣ ಕಟ್ಟಿ ಮಾವಿನಎಲೆಗಳಿಂದಲೇ ಯುಗಾದಿ ಶುಭಾಶಯ ಎಂದು ಬರೆದು ಸಿಂಗರಿಸಬಹುದು.(PC: Pinterest )
(8 / 11)
ಮಾವಿನಎಲೆಗಳಿಂದ ಮಗುವನ್ನು ಸಿಂಗರಿಸುವ ಜೊತೆಗೆ ಚೆಂಡು ಹೂವಿನ ಜೋಕಾಲಿಯಲ್ಲಿ ಮಗು ಕುಳಿತಂತೆ ಮಾಡಿ ಫೋಟೊಶೂಟ್ ಮಾಡಿಸಬಹುದು. (PC: Pinterest )
(9 / 11)
ಮಾವಿನಎಲೆಗಳಿಂದ ನಕ್ಷತ್ರ ರಚಿಸಿ ಮಧ್ಯೆದಲ್ಲಿ ಸೇವಂತಿಗೆ ಹೂ ಇರಿಸಿ, ಮಗುವಿನ ತಲೆಯ ಭಾಗದಲ್ಲಿ ನೀಟಾಗಿ ಜೋಡಿಸಿ. ಮಾವಿನ ಎಲೆ, ಮಾವಿನಹಣ್ಣುಗಳನ್ನು ಇರಿಸಿ, ಚೆಂದದ ಹೊಸ ಬಟ್ಟೆ ಹಾಕಿಸಿ, ಆಟಿಕೆಗಳನ್ನು ಜೋಡಿಸಿ ಇಡುವ ಮೂಲಕ ಫೋಟೊಶೂಟ್ ಮಾಡಿಸಬಹುದು. (iyesh_asvisurya/ Instagram page )
(10 / 11)
ಸರಳವಾಗಿ ಒಂದರ ಪಕ್ಕದಲ್ಲಿ ಒಂದರಂತೆ ಮಾವಿನ ಎಲೆಗಳನ್ನು ಇರಿಸಿ ಮಗುವನ್ನು ಮಲಗಿಸಿ, ಹೂವಿನ ಪಕಳೆಗಳಿಂದ ಯುಗಾದಿ ಹಬ್ಬದ ಶುಭಾಶಯ ಎಂದು ಬರೆದು ಕೂಡ ಫೋಟೊಶೂಟ್ ಮಾಡಿಸಬಹುದು. (cutie.pie122023/ Instagram page )
ಇತರ ಗ್ಯಾಲರಿಗಳು