ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಸಂಭ್ರಮ; ವಿಶೇಷ ದೀಪಾಲಂಕಾರದಿಂದ ಶ್ರೀ ಕ್ಷೇತ್ರ ಝಗಮಗ, ಚಿತ್ರಗಳನ್ನು ಕಣ್ತುಂಬಿಕೊಳ್ಳಿ
- Maha Shivaratri Sri Kshetra Dharmasthala: ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಶಿವಭಕ್ತರು ಶಿವ ನಾಮಸ್ಮರಣೆ, ಜಾಗರಣೆ, ಉಪವಾಸದ ಮೂಲಕ ಶಿವನ ಆಶೀರ್ವಾದ ಬೇಡುತ್ತಿದ್ದಾರೆ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಮಹಾಶಿವರಾತ್ರಿ ಕಳೆಗಟ್ಟಿದೆ. ದೀಪಾಲಂಕರದಿಂದ ಧರ್ಮಸ್ಥಳ ಜಗಮಗ ಎನ್ನುತ್ತಿದೆ. (ಚಿತ್ರ ವರದಿ: ಹರೀಶ್ ಮಾಂಬಾಡಿ)

(1 / 7)
ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ. ಶಿವಭಕ್ತರು ಶಿವ ನಾಮಸ್ಮರಣೆ, ಜಾಗರಣೆ, ಉಪವಾಸದ ಮೂಲಕ ಶಿವನ ಆಶೀರ್ವಾದ ಬೇಡುತ್ತಿದ್ದಾರೆ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಮಹಾಶಿವರಾತ್ರಿ ಕಳೆಗಟ್ಟಿದೆ. ದೀಪಾಲಂಕರದಿಂದ ಧರ್ಮಸ್ಥಳ ಜಗಮಗ ಎನ್ನುತ್ತಿದೆ.
(2 / 7)
ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಶಿವರಾತ್ರಿ ಮತ್ತು ವಾರಾಂತ್ಯದ ರಜೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸೇರಿದಂತೆ ಪರವೂರಿನ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಮಂಜುನಾಥನ ದರ್ಶನಕ್ಕೆ ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ದೆ. ದೀಪಾಲಂಕರದಿಂದ ಧರ್ಮಸ್ಥಳ ಜಗಮಗ ಎನ್ನುತ್ತಿದೆ.
(3 / 7)
ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಾರೆ. ಇಲ್ಲಿನ ಮಂಜುನಾಥ ಸ್ವಾಮಿ ದರ್ಶನ ಮಾಡಿ, ಅನ್ನಪ್ರಸಾದ ಸ್ವೀಕರಿಸಿ, ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ನೋಡಿ ತೆರಳುತ್ತಾರೆ.
(4 / 7)
ಸಾಮಾನ್ಯವಾಗಿ ಕರ್ನಾಟಕದ ಇತರ ಭಾಗಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದ ಮೇಲೆ ಹೆಚ್ಚಾಗಿದೆ. ಮಹಾಶಿವರಾತ್ರಿ ಸಮಯದಲ್ಲೂ ದೇಗುಲದಲ್ಲಿ ಭಕ್ತರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಂಡಿದೆ.
(5 / 7)
ಮಹಾಶಿವರಾತ್ರಿ ಎಂದರೆ ಧರ್ಮಸ್ಥಳದಲ್ಲೂ ವಿಶೇಷ ಪೂಜೆ, ಭಜನೆ, ಶಿವಪಂಚಾಕ್ಷರಿ ಮಂತ್ರ ಪಠಣ ಸಹಿತ ಹಬ್ಬದ ವಾತಾವರಣ.
(6 / 7)
ನಾಡಿನುದ್ದಗಲದಿಂದ ಶಿವನ ಈ ಪಾವನ ಸಾನಿಧ್ಯಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು ಸಂಭ್ರಮದ ಶಿವ ಪಂಚಾಕ್ಷರಿ ನಾಮಸ್ಮರಣೆ ಹಾಗೂ ಜಾಗರಣೆ ನಡೆಯಲಿದೆ.
ಇತರ ಗ್ಯಾಲರಿಗಳು