ಬರ್ಫಿಯಿಂದ ಗುಲಾಬ್ ಜಾಮೂನ್‌ವರೆಗೆ: ವಿದೇಶಿ ಮೂಲಗಳನ್ನು ಹೊಂದಿರುವ ಐದು ಜನಪ್ರಿಯ ಸಿಹಿತಿಂಡಿಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬರ್ಫಿಯಿಂದ ಗುಲಾಬ್ ಜಾಮೂನ್‌ವರೆಗೆ: ವಿದೇಶಿ ಮೂಲಗಳನ್ನು ಹೊಂದಿರುವ ಐದು ಜನಪ್ರಿಯ ಸಿಹಿತಿಂಡಿಗಳಿವು

ಬರ್ಫಿಯಿಂದ ಗುಲಾಬ್ ಜಾಮೂನ್‌ವರೆಗೆ: ವಿದೇಶಿ ಮೂಲಗಳನ್ನು ಹೊಂದಿರುವ ಐದು ಜನಪ್ರಿಯ ಸಿಹಿತಿಂಡಿಗಳಿವು

ಭಾರತದಲ್ಲಿ ಹಬ್ಬವಿರಲಿ ಯಾವುದೇ ಶುಭ ಸಮಾರಂಭವಿರಲಿ ಸಿಹಿತಿಂಡಿಯಿಲ್ಲದೆ ಆ ಸಮಾರಂಭ ಪೂರ್ಣವಾಗುವುದಿಲ್ಲ. ಅದರಲ್ಲೂ ಕೆಲವು ಸಿಹಿತಿಂಡಿಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಅನ್ನೋವಷ್ಟರ ಮಟ್ಟಿಗೆ ಇಲ್ಲಿ ಜನಪ್ರಿಯವಾಗಿದೆ. ವಿದೇಶದಲ್ಲಿ ಹುಟ್ಟಿಕೊಂಡು ಭಾರತದಲ್ಲಿ ಜನಪ್ರಿಯತೆ ಪಡೆದಿರುವ ಐದು ಬಗೆಯ ಸಿಹಿತಿಂಡಿಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಭಾರತದಲ್ಲಿರುವ ಹಲವು ವೈವಿಧ್ಯಮಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳು ಬೇರೆ ದೇಶದಿಂದ ಪ್ರಭಾವಿತವಾಗಿದೆ. ವಿದೇಶಿ ಮೂಲಗಳನ್ನು ಹೊಂದಿರುವ ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ಇಲ್ಲಿವೆ: 
icon

(1 / 7)

ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಭಾರತದಲ್ಲಿರುವ ಹಲವು ವೈವಿಧ್ಯಮಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳು ಬೇರೆ ದೇಶದಿಂದ ಪ್ರಭಾವಿತವಾಗಿದೆ. ವಿದೇಶಿ ಮೂಲಗಳನ್ನು ಹೊಂದಿರುವ ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ಇಲ್ಲಿವೆ: 

ಬರ್ಫಿ: ಬರ್ಫಿ ಎಂಬುದು ಮಂದಗೊಳಿಸಿದ ಹಾಲು, ಸಕ್ಕರೆ ಮತ್ತು ಏಲಕ್ಕಿ ಅಥವಾ ಪಿಸ್ತಾಗಳಿಂದ ತಯಾರಿಸಿದ ಮಿಠಾಯಿ ತರಹದ ಸಿಹಿ ತಿಂಡಿಯಾಗಿದೆ. ಇದರ ಮೂಲ ಪರ್ಷಿಯಾ ದೇಶ. ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.
icon

(2 / 7)

ಬರ್ಫಿ: ಬರ್ಫಿ ಎಂಬುದು ಮಂದಗೊಳಿಸಿದ ಹಾಲು, ಸಕ್ಕರೆ ಮತ್ತು ಏಲಕ್ಕಿ ಅಥವಾ ಪಿಸ್ತಾಗಳಿಂದ ತಯಾರಿಸಿದ ಮಿಠಾಯಿ ತರಹದ ಸಿಹಿ ತಿಂಡಿಯಾಗಿದೆ. ಇದರ ಮೂಲ ಪರ್ಷಿಯಾ ದೇಶ. ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.(Pinterest)

ಗುಲಾಬ್ ಜಾಮೂನ್: ಈ ಹಾಲು ಆಧಾರಿತ ಸಿಹಿ ಪರ್ಷಿಯಾದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇದನ್ನೂ ಕೂಡ ಭಾರತಕ್ಕೆ ಪರಿಚಯಿಸಿದ್ದು ಮೊಘಲರು. ಹಾಲಿನ ಪುಡಿ ಮತ್ತು ಮೈದಾವನ್ನು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲಸಿ ಸಣ್ಣ ಉಂಡೆಗಳನ್ನಾಗಿ ಮಾಡಲಾಗುತ್ತದೆ. ನಂತರ ಇದನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. 
icon

(3 / 7)

ಗುಲಾಬ್ ಜಾಮೂನ್: ಈ ಹಾಲು ಆಧಾರಿತ ಸಿಹಿ ಪರ್ಷಿಯಾದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇದನ್ನೂ ಕೂಡ ಭಾರತಕ್ಕೆ ಪರಿಚಯಿಸಿದ್ದು ಮೊಘಲರು. ಹಾಲಿನ ಪುಡಿ ಮತ್ತು ಮೈದಾವನ್ನು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲಸಿ ಸಣ್ಣ ಉಂಡೆಗಳನ್ನಾಗಿ ಮಾಡಲಾಗುತ್ತದೆ. ನಂತರ ಇದನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. (Pinterest)

ರಸಗುಲ್ಲಾ: ಮೃದುವಾದ, ಸ್ಪಂಜಿನ ರೀತಿಯಿರುವ ಬಿಳಿ ಚೆಂಡಿನ ಆಕಾರದ ಸಿಹಿಯಾಗಿರುವ ರಸಗುಲ್ಲಾವನ್ನು ಕಾಟೇಜ್ ಚೀಸ್ ಮತ್ತು ರವೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ನಂತರ ಅದನ್ನು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಇದು ಪೂರ್ವ ಭಾರತದಲ್ಲಿ ಹುಟ್ಟಿಕೊಂಡಿದ್ದು, ಪೋರ್ಚುಗೀಸರು ಇದನ್ನು ಭಾರತಕ್ಕೆ ಪರಿಚಯಿಸಿದ್ದು ಎಂದು ನಂಬಲಾಗಿದೆ. 
icon

(4 / 7)

ರಸಗುಲ್ಲಾ: ಮೃದುವಾದ, ಸ್ಪಂಜಿನ ರೀತಿಯಿರುವ ಬಿಳಿ ಚೆಂಡಿನ ಆಕಾರದ ಸಿಹಿಯಾಗಿರುವ ರಸಗುಲ್ಲಾವನ್ನು ಕಾಟೇಜ್ ಚೀಸ್ ಮತ್ತು ರವೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ನಂತರ ಅದನ್ನು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಇದು ಪೂರ್ವ ಭಾರತದಲ್ಲಿ ಹುಟ್ಟಿಕೊಂಡಿದ್ದು, ಪೋರ್ಚುಗೀಸರು ಇದನ್ನು ಭಾರತಕ್ಕೆ ಪರಿಚಯಿಸಿದ್ದು ಎಂದು ನಂಬಲಾಗಿದೆ. (Pinterest)

ಜಿಲೇಬಿ: ಕಾದ ಎಣ್ಣೆಯಲ್ಲಿ ಹಿಟ್ಟನ್ನು ಸುರಿದು ಸಕ್ಕರೆ ಪಾಕದಲ್ಲಿ ನೆನೆಸಿ ತಯಾರಿಸಲಾಗುವ ಸಿಹಿ ಖಾದ್ಯವಿದು. ಜಿಲೇಬಿ ಪಶ್ಚಿಮ ಏಷ್ಯಾದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪರ್ಷಿಯನ್ ಮತ್ತು ಅರಬ್ ವ್ಯಾಪಾರಿಗಳ ಮೂಲಕ ಭಾರತಕ್ಕೆ ಪರಿಚಯಿಸಲಾಯಿತು ಎಂದು ಹೇಳಲಾಗಿದೆ. 
icon

(5 / 7)

ಜಿಲೇಬಿ: ಕಾದ ಎಣ್ಣೆಯಲ್ಲಿ ಹಿಟ್ಟನ್ನು ಸುರಿದು ಸಕ್ಕರೆ ಪಾಕದಲ್ಲಿ ನೆನೆಸಿ ತಯಾರಿಸಲಾಗುವ ಸಿಹಿ ಖಾದ್ಯವಿದು. ಜಿಲೇಬಿ ಪಶ್ಚಿಮ ಏಷ್ಯಾದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪರ್ಷಿಯನ್ ಮತ್ತು ಅರಬ್ ವ್ಯಾಪಾರಿಗಳ ಮೂಲಕ ಭಾರತಕ್ಕೆ ಪರಿಚಯಿಸಲಾಯಿತು ಎಂದು ಹೇಳಲಾಗಿದೆ. (Pinterest)

ಲಡ್ಡು: ಇದು ಬೇಳೆ ಹಿಟ್ಟು, ರವೆ ಅಥವಾ ತೆಂಗಿನಕಾಯಿಯಂತಹ ವಿವಿಧ ಪದಾರ್ಥಗಳಿಂದ ಮಾಡಿದ ಚೆಂಡಿನ ಆಕಾರದ ಸಿಹಿಯಾಗಿದೆ. ಲಡ್ಡು ಅಥವಾ ಲಾಡು ಮಧ್ಯಪ್ರಾಚ್ಯದಲ್ಲಿ ಹುಟ್ಟಿಕೊಂಡಿತು, ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. 
icon

(6 / 7)

ಲಡ್ಡು: ಇದು ಬೇಳೆ ಹಿಟ್ಟು, ರವೆ ಅಥವಾ ತೆಂಗಿನಕಾಯಿಯಂತಹ ವಿವಿಧ ಪದಾರ್ಥಗಳಿಂದ ಮಾಡಿದ ಚೆಂಡಿನ ಆಕಾರದ ಸಿಹಿಯಾಗಿದೆ. ಲಡ್ಡು ಅಥವಾ ಲಾಡು ಮಧ್ಯಪ್ರಾಚ್ಯದಲ್ಲಿ ಹುಟ್ಟಿಕೊಂಡಿತು, ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. (Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ


ಇತರ ಗ್ಯಾಲರಿಗಳು