ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುವ ನೆಲ್ಲಿಕಾಯಿ ಮಸಾಲಾ ಚಟ್ನಿ ರೆಸಿಪಿ ಇಲ್ಲಿದೆ: ನೀವೊಮ್ಮೆ ಟ್ರೈ ಮಾಡಿ, ತಿಂದೋರು ಸೂಪರ್ ಅಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುವ ನೆಲ್ಲಿಕಾಯಿ ಮಸಾಲಾ ಚಟ್ನಿ ರೆಸಿಪಿ ಇಲ್ಲಿದೆ: ನೀವೊಮ್ಮೆ ಟ್ರೈ ಮಾಡಿ, ತಿಂದೋರು ಸೂಪರ್ ಅಂತಾರೆ

ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುವ ನೆಲ್ಲಿಕಾಯಿ ಮಸಾಲಾ ಚಟ್ನಿ ರೆಸಿಪಿ ಇಲ್ಲಿದೆ: ನೀವೊಮ್ಮೆ ಟ್ರೈ ಮಾಡಿ, ತಿಂದೋರು ಸೂಪರ್ ಅಂತಾರೆ

ನೆಲ್ಲಿಕಾಯಿ ಆರೋಗ್ಯ ಗುಣಗಳ ಗಣಿ, ಇದನ್ನ ತಿನ್ನುವುದರಿಂದ ದೇಹಾರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನೆಲ್ಲಿಕಾಯಿಗೆ ಉಪ್ಪು, ಖಾರ ಹಾಕಿ ತಿನ್ನುವ ರುಚಿ ನಿಮ್ಮ ನಾಲಿಗೆಗೆ ತಿಳಿದಿರಬಹುದು. ಆದರೆ ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅಂತಹ ಖಾದ್ಯಗಳಲ್ಲಿ ನೆಲ್ಲಿಕಾಯಿ ಮಸಾಲ ಚಟ್ನಿ ಕೂಡ ಒಂದು. ಇದನ್ನು ಮಾಡೋದು ಹೇಗೆ ನೋಡಿ.

ನೆಲ್ಲಿಕಾಯಿ ಮಸಾಲ ಚಟ್ನಿ
ನೆಲ್ಲಿಕಾಯಿ ಮಸಾಲ ಚಟ್ನಿ

ನೆಲ್ಲಿಕಾಯಿ ವಿಟಮಿನ್ ಸಿಯಲ್ಲಿ ಸಮೃದ್ಧವಾಗಿದೆ. ಚಳಿಗಾಲದಲ್ಲಿ ಇದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಮಕ್ಕಳ, ವಯಸ್ಕರು ಎಲ್ಲರಿಗೂ ಉತ್ತಮ. ಪೇಟೆಗಳಲ್ಲಿ ನೆಲ್ಲಿಕಾಯಿಗೆ ಉಪ್ಪು, ಖಾರ ಹಾಕಿ ಮಾರಾಟ ಮಾಡುತ್ತಾರೆ. ಇದರ ರುಚಿ ಬಹುತೇಕರಿಗೆ ಇಷ್ಟವಾಗುತ್ತದೆ.  ಅಂತೆಯೆ ಇದರಿಂದ ನಾಲಿಗೆಗೆ ರುಚಿಸುವ ಖಾದ್ಯವನ್ನೂ ತಯಾರಿಸಬಹುದು. ಅಂತಹ ಖಾದ್ಯಗಳಲ್ಲಿ ಒಂದು ನೆಲ್ಲಿಕಾಯಿ ಮಸಾಲ ಚಟ್ನಿ.

ಹೆಸರೇ ಹೇಳುವಂತೆ ಮಸಾಲ ಚಟ್ನಿ ರುಚಿ ಸೂಪರ್ ಆಗಿರುತ್ತೆ. ಅನ್ನದ ಜೊತೆ ಇದರ ಕಾಂಬಿನೇಷನ್ ಚೆನ್ನಾಗಿರುತ್ತದೆ. ನೆಲ್ಲಿಕಾಯಿ ಬರಿ ಬಾಯಲ್ಲಿ ತಿನ್ನಲು ಸಾಧ್ಯವಿಲ್ಲ ಎನ್ನುವವರು ಈ ಚಟ್ನಿ ಮಾಡಿ ತಿನ್ನಬಹುದು. ಇದನ್ನು ಒಮ್ಮೆ ಮಾಡಿಟ್ಟು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟರೆ ಕೆಲವು ದಿನಗಳ ಕಾಲ ಕೆಡದಂತೆ ಇಡಬಹುದು. 

ನೆಲ್ಲಿಕಾಯಿ ಮಸಾಲಾ ಚಟ್ನಿ ಮಾಡುವ ವಿಧಾನ

ನೆಲ್ಲಿಕಾಯಿ – ಅರ್ಧ ಕೆಜಿ, ಎಣ್ಣೆ – 1ಚಮಚ, ಸಾಸಿವೆ – 1 ಚಮಚ, ಮೆಂತ್ಯೆ – ಕಾಲು ಚಮಚ, ಜೀರಿಗೆ – ಅರ್ಧ ಚಮಚ, ಸೋಂಪು – ಅರ್ಧ ಚಮಚ, ಕೊತ್ತಂಬರಿ ಸೊಪ್ಪು – 1 ಚಮಚ, ಖಾರದಪುಡಿ – 1ಚಮಚ, ಅರಿಸಿನ – ಅರ್ಧ ಚಮಚ, ಬ್ಲ್ಯಾಕ್ ಸಾಲ್ಟ್ – 1ಚಮಚ, ಶುಂಠಿ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ,

ನೆಲ್ಲಿಕಾಯಿ ಮಸಾಲ ಚಟ್ನಿ ರೆಸಿಪಿ

ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿ. ಅದಕ್ಕೆ ನೀರು ಸೇರಿಸಿ ಕಾಲು ಗಂಟೆ ಹೊತ್ತು ಸಣ್ಣ ಉಗಿಯಲ್ಲಿ ಬೇಯಿಸಿ. ನೆಲ್ಲಿಕಾಯಿ ಮೃದುವಾಗುವವರೆಗೂ ಬೇಯಿಸಿ. ನಂತರ ನೆಲ್ಲಿಕಾಯಿಯನ್ನು ಬೀಜ ತೆಗೆದು ಬೇರ್ಪಡಿಸಿ. ಈಗ ಚಿಕ್ಕ ಬಾಣಲಿಯಲ್ಲಿ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಮೆಂತ್ಯೆ, ಜೀರಿಗೆ, ಸಾಸಿವೆ ಮತ್ತು ಸೋಂಪು ಕಾಳು ಸೇರಿಸಿ. ಇದಕ್ಕೆ ಒಂದು ಚಮಚ ಕೊತ್ತಂಬರಿ ಕಾಳು ಸೇರಿಸಿ ಮಿಶ್ರಣ ಮಾಡಿ. ಈಗ ಬೇಯಿಸಿದ ನೆಲ್ಲಿಕಾಯಿ ಚೂರುಗಳನ್ನು ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ನಂತರ ಅರ್ಧ ಕಪ್ ಬೆಲ್ಲವನ್ನು ತುರಿದು ಹಾಕಿ. ಬೆಲ್ಲ ಕರಗಿ ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಮಿಶ್ರಣವು ಗಟ್ಟಿಯಾದಾಗ, ಅದನ್ನು ಕಡಿಮೆ ಉರಿಯಲ್ಲಿ ಇರಿಸಿ ಖಾರದಪುಡಿ, ಅರಿಸಿನ ಪುಡಿ, ಧನಿಯಾ ಪುಡಿ ಮತ್ತು ಕಪ್ಪು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಸಣ್ಣಗೆ ಕತ್ತರಿಸಿದ ಶುಂಠಿಯನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಈಗ ನೆಲ್ಲಿಕಾಯಿ ಮಸಾಲ ಚಟ್ನಿ ತಿನ್ನಲು ಸಿದ್ಧ. ಇದನ್ನು ರೊಟ್ಟಿ, ಪರೋಟ, ಅನ್ನದೊಂದಿಗೆ ತಿನ್ನಲು ಅದ್ಭುತವಾಗಿರುತ್ತದೆ.

ನೆಲ್ಲಿಕಾಯಿ ನಮ್ಮ ಆರೋಗ್ಯಕ್ಕೆ ಉತ್ತಮವಾದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಮ್ಲಾ ತಿನ್ನುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳನ್ನು ತಡೆಯುತ್ತದೆ. ಮಕ್ಕಳಿಗೆ ಆಮ್ಲಾವನ್ನು ತಿನ್ನಿಸುವುದರಿಂದ ಏಕಾಗ್ರತೆ ಮತ್ತು ಅಧ್ಯಯನವು ಉತ್ತಮಗೊಳ್ಳುತ್ತದೆ. ಆಮ್ಲಾದಲ್ಲಿರುವ ಪೋಷಕಾಂಶಗಳು ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿವೆ.

Whats_app_banner