ಹಬ್ಬಕ್ಕೆ ತಯಾರಿಸಿ ರುಚಿಕರವಾದ ಸಿಹಿ ಖಾದ್ಯ: ಆರೋಗ್ಯಕರವಾದ ಈ 6 ಕೇಸರಿಬಾತ್ ರೆಸಿಪಿಗಳನ್ನು ನೀವು ಟ್ರೈ ಮಾಡಲೇಬೇಕು
ಕೇಸರಿಬಾತ್ ಒಂದು ಸಾಂಪ್ರದಾಯಿಕ ಸಿಹಿ ಖಾದ್ಯವಾಗಿದ್ದು, ಹಬ್ಬಗಳು, ಶುಭಕಾರ್ಯಕ್ರಮಗಳಲ್ಲಿ ಈ ಸಿಹಿಖಾದ್ಯವನ್ನು ತಯಾರಿಸಲಾಗುತ್ತದೆ. ರವೆ ಅಥವಾ ಗೋಧಿ ಹಿಟ್ಟಿನಿಂದಲೂ ಶೀರಾವನ್ನು ತಯಾರಿಸಲಾಗುತ್ತದೆ. ಇದೀಗ ನವರಾತ್ರಿ ಹಬ್ಬದ ಸಮಯವಾದ್ದರಿಂದ ಈ 6 ಬಗೆಯ ಕೇಸರಿಬಾತ್ ಅನ್ನು ನೀವು ಟ್ರೈ ಮಾಡಲೇಬೇಕು.
(1 / 8)
ಕೇಸರಿಬಾತ್ ತಯಾರಿಸುವುದು ತುಂಬಾನೇ ಸುಲಭ. ರವೆ, ತುಪ್ಪ, ಸಕ್ಕರೆ ಮತ್ತು ನೀರು ಅಥವಾ ಹಾಲಿನಿಂದ ತಯಾರಿಸಲಾದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ರುಚಿ ಹೆಚ್ಚಿಸಲು ಏಲಕ್ಕಿ, ಲವಂಗ, ಒಣ ಹಣ್ಣುಗಳನ್ನು ಸಹ ಸೇರಿಸಬಹುದು. ಈ ಹಬ್ಬದ ಋತುವಿನಲ್ಲಿ ನೀವು ಟ್ರೈ ಮಾಡಲೇಬೇಕಾದ ಆರು ಕೇಸರಿಬಾತ್ ಪಾಕವಿಧಾನಗಳು ಇಲ್ಲಿವೆ.(freepik)
(2 / 8)
ಗೋಧಿ ಕೇಸರಿಬಾತ್: ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ 1 ಕಪ್ ಗೋಧಿ ಹಿಟ್ಟನ್ನು ಸೇರಿಸಿ. ಕಡಿಮೆ ಮಧ್ಯಮ ಉರಿಯಲ್ಲಿ ಹಿಟ್ಟು ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಪರಿಮಳವನ್ನು ಬಿಡುವವರೆಗೆ ನಿರಂತರವಾಗಿ ಹುರಿಯಬೇಕು. ಪ್ರತ್ಯೇಕ ಪಾತ್ರೆಯಲ್ಲಿ, ಅರ್ಧ ಕಪ್ ಬೆಲ್ಲವನ್ನು 2 ಕಪ್ ನೀರಿನಲ್ಲಿ ಕರಗಿಸಿ. ಈ ಬೆಲ್ಲದ ನೀರನ್ನು ಹುರಿಯುತ್ತಿರುವ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬೆರೆಸಿ. ಮಿಶ್ರಣವು ದಪ್ಪವಾಗುವವರೆಗೆ, ತುಪ್ಪ ಪ್ರತ್ಯೇಕಗೊಳ್ಳುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಏಲಕ್ಕಿ ಪುಡಿ, ಒಣಹಣ್ಣುಗಳನ್ನು ಮಿಶ್ರಣ ಮಾಡಿದರೆ ರುಚಿಕರವಾದ ಖಾದ್ಯ ಸವಿಯಲು ಸಿದ್ಧ.(freepik)
(3 / 8)
ಓಟ್ಸ್ ಕೇಸರಿಬಾತ್: 1 ಕಪ್ ಓಟ್ಸ್ ಅನ್ನು ಬಾಣಲೆಯಲ್ಲಿ 2 ರಿಂದ 3 ನಿಮಿಷಗಳ ಕಾಲ ಸ್ವಲ್ಪ ಗೋಲ್ಡನ್ ಆಗುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ. ಅದೇ ಪ್ಯಾನ್‌ನಲ್ಲಿ ¼ ಕಪ್ ತುಪ್ಪವನ್ನು ಬಿಸಿ ಮಾಡಿ, ನಂತರ ಹುರಿದ ಓಟ್ಸ್ ಸೇರಿಸಿ. ಬಳಿಕ ಬಾದಾಮಿ ಹಾಲನ್ನು ಸೇರಿಸಿ. ಓಟ್ಸ್ ಹಾಲನ್ನು ಹೀರಿಕೊಳ್ಳುವವರೆಗೆ ಮತ್ತು ಮಿಶ್ರಣವು ದಪ್ಪವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಬೆಲ್ಲ, ಏಲಕ್ಕಿ ಪುಡಿ ಮತ್ತು ಒಣದ್ರಾಕ್ಷಿಗಳನ್ನು ಬೆರೆಸಿ.(freepik)
(4 / 8)
ಬಾದಾಮಿ ಕೇಸರಿಬಾತ್: ಒಣ ಬಾದಾಮಿಯನ್ನು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿ. ಬಾಣಲೆಯಲ್ಲಿ ¼ ಕಪ್ ತುಪ್ಪಕ್ಕೆ ಈ ಒಂದು ಕಪ್ ಬಾದಾಮಿ ಪುಡಿಯನ್ನು ಸೇರಿಸಿ. ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಒಂದೂವರೆ ಕಪ್ ನೀರಿಗೆ ¼ ಕಪ್ ಬೆಲ್ಲವನ್ನು ಹಾಕಿ ಕರಗಿಸಿ. ಈ ಬೆಲ್ಲದ ನೀರನ್ನು ಬಾದಾಮಿ ಮಿಶ್ರಣಕ್ಕೆ ಸೇರಿಸಿ. ಮಿಶ್ರಣವು ದಪ್ಪವಾಗುವವರೆಗೆ ಮತ್ತು ತುಪ್ಪ ಬಿಡುಗಡೆಯಾಗಲು ಪ್ರಾರಂಭವಾಗುವವರೆಗೆ ಬೇಯಿಸಿ. ನಂತರ ಒಣ ಹಣ್ಣುಗಳು ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿದರೆ ರುಚಿಕರವಾದ ಖಾದ್ಯ ಸವಿಯಲು ಸಿದ್ಧ.(slurrp)
(5 / 8)
ರಾಗಿ ಕೇಸರಿಬಾತ್: ಬಾಣಲೆಯಲ್ಲಿ 1/4 ತುಪ್ಪವನ್ನು ಬಿಸಿ ಮಾಡಿ ಅದಕ್ಕೆ 1 ಕಪ್ ರಾಗಿ ಹಿಟ್ಟನ್ನು ಸೇರಿಸಿ. ರಾಗಿ ಹಿಟ್ಟು ಸ್ವಲ್ಪ ಕಪ್ಪಾಗುವವರೆಗೆ ಕಡಿಮೆ ಮಧ್ಯಮ ಉರಿಯಲ್ಲಿ ಹುರಿಯಿರಿ. ಪ್ರತ್ಯೇಕ ಪಾತ್ರೆಯಲ್ಲಿ ಅರ್ಧ ಕಪ್ ಬೆಲ್ಲವನ್ನು ಬೆಚ್ಚಗಿನ ಹಾಲಿನಲ್ಲಿ ಕರಗಿಸಿ. ಹುರಿದ ರಾಗಿಗೆ ಬೆಲ್ಲದ ಹಾಲಿನ ಮಿಶ್ರಣವನ್ನು ಸೇರಿಸಿ, ನಿರಂತರವಾಗಿ ಬೆರೆಸಿ. ಮಿಶ್ರಣವು ದಪ್ಪವಾಗುವವರೆಗೆ, ತುಪ್ಪ ಬಿಡುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ. ಏಲಕ್ಕಿ ಪುಡಿ, ಒಣ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.(adobe stock)
(6 / 8)
ನವಣೆ ಕೇಸರಿಬಾತ್: 1 ಕಪ್ ನವಣೆಯನ್ನು ಚೆನ್ನಾಗಿ ತೊಳೆಯಿರಿ. ಅದನ್ನು 2 ಕಪ್ ನೀರಿನಲ್ಲಿ ಮೃದು ಮತ್ತು ನಯವಾಗುವ ತನಕ ಬೇಯಿಸಿ ನಂತರ ಪಕ್ಕಕ್ಕೆ ಇರಿಸಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಬೇಯಿಸಿದ ನವಣೆ ಸೇರಿಸಿ. ನಂತರ ಬೆಲ್ಲವನ್ನು ಮಿಕ್ಸ್ ಮಾಡಿ. ಬೆಲ್ಲ ಕರಗುವವರೆಗೆ ಬೆರೆಸಿ. ನಂತರ ಬಾದಾಮಿ ಹಾಲನ್ನು ಸೇರಿಸಿ, ಈ ಮಿಶ್ರಣವು ದಪ್ಪವಾಗುವವರೆಗೆ ಬೇಯಿಸಿ. ಏಲಕ್ಕಿ ಪುಡಿ, ಒಣ ಹಣ್ಣುಗಳನ್ನು ಸೇರಿಸಿ.(freepik)
(7 / 8)
ಹಣ್ಣಿನ ಕೇಸರಿಬಾತ್: ಬಾಣಲೆಯಲ್ಲಿ ¼ ಕಪ್ ತುಪ್ಪ ಬಿಸಿ ಮಾಡಿ ನಂತರ 1 ಕಪ್ ರವೆ ಹಾಕಿ. ಗೋಲ್ಡನ್ ಬ್ರೌನ್ ರವರೆಗೆ ಕಡಿಮೆ ಮಧ್ಯಮ ಉರಿಯಲ್ಲಿ ಹುರಿಯಿರಿ. ಇದಕ್ಕೆ ಹಿಸುಕಿದ ಬಾಳೆಹಣ್ಣು ಅಥವಾ ತುರಿದ ಸೇಬು ಸೇರಿಸಿ. 2 ರಿಂದ 3 ನಿಮಿಷ ಬೇಯಿಸಿ. ಒಂದುವರೆ ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ¼ ಕಪ್ ಬೆಲ್ಲವನ್ನು ಸೇರಿಸಿ ಬಿಸಿ ನೀರಿನಲ್ಲಿ ಕರಗಿಸಿ. ನಂತರ ಈ ಬೆಲ್ಲದ ನೀರನ್ನು ಮಿಶ್ರಣಕ್ಕೆ ನಿರಂತರವಾಗಿ ಬೆರೆಸಿ. ಮಿಶ್ರಣವು ದಪ್ಪವಾಗುವವರೆಗೆ ಬೇಯಿಸಿ. ನಂತರ ಏಲಕ್ಕಿ ಪುಡಿ, ಒಣ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.(freepik)
ಇತರ ಗ್ಯಾಲರಿಗಳು