Spicy chicken fry recipe: 20 ನಿಮಿಷದಲ್ಲಿ ಪಟಾಪಟ್‌ ಮಾಡಿ ಚಿಕನ್‌ ಫ್ರೈ; ಸೋಯಾ, ಟೊಮೊಟೊ ಸಾಸ್‌ನಿಂದಾಗಿ ಡಿಫರೆಂಟ್‌ ರುಚಿ-food make spicy chicken fry recipe in 20 minutes with soy sauce tometo sauce tasty chicken fry making very easy pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Spicy Chicken Fry Recipe: 20 ನಿಮಿಷದಲ್ಲಿ ಪಟಾಪಟ್‌ ಮಾಡಿ ಚಿಕನ್‌ ಫ್ರೈ; ಸೋಯಾ, ಟೊಮೊಟೊ ಸಾಸ್‌ನಿಂದಾಗಿ ಡಿಫರೆಂಟ್‌ ರುಚಿ

Spicy chicken fry recipe: 20 ನಿಮಿಷದಲ್ಲಿ ಪಟಾಪಟ್‌ ಮಾಡಿ ಚಿಕನ್‌ ಫ್ರೈ; ಸೋಯಾ, ಟೊಮೊಟೊ ಸಾಸ್‌ನಿಂದಾಗಿ ಡಿಫರೆಂಟ್‌ ರುಚಿ

  • Spicy chicken fry recipe: ಚಿಕನ್‌ ಅಡುಗೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅರ್ಜೆಂಟಿಗೆ ಆಗೋದಿಲ್ಲ ಎಂದು ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ, ಹತ್ತಿಪ್ಪತ್ತು ನಿಮಿಷದಲ್ಲಿ ಚಿಕನ್‌ ಫ್ರೈ ಮಾಡಬಹುದು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 20 ನಿಮಿಷದಲ್ಲಿ ರುಚಿಕರ ಚಿಕನ್‌ ಫ್ರೈ ಮಾಡೋದು ಹೇಗೆ ಎಂದು ತಿಳಿಯೋಣ ಬನ್ನಿ.

Spicy chicken fry recipe: ಚಿಕನ್‌ ಫ್ರೈ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಸೋಯಾ ಸಾಸ್‌, ಟೊಮೊಟೊ ಸಾಸ್‌ ಹಾಕುವ ಕಾರಣ ಮಕ್ಕಳೂ ಗೋಬಿಮಂಚೂರಿ ತಿಂದಂತೆ ಈ ಚಿಕನ್‌ ಫ್ರೈ ಖಾಲಿ ಮಾಡಿಬಿಡುತ್ತಾರೆ. ಮನೆಗೆ ಯಾರಾದ್ರೂ ನೆಂಟ್ರು ಬಂದರೆ ಸುಲಭವಾಗಿ ಈ ರೆಸಿಪಿ ಮಾಡಬಹುದು. ಖಾರ ಹೆಚ್ಚು ಬಯಸುವವರು ಹೆಚ್ಚು ಖಾರದ ಪುಡಿ ಹಾಕಿ ಸ್ಪೈಸಿ ಚಿಕನ್‌ ಫ್ರೈ ರೆಸಿಪಿ ಮಾಡಬಹುದು. ಖಾರ ಕಡಿಮೆ ಸಾಕು ಎನ್ನುವವರು ಕಡಿಮೆ ಖಾರ ಹಾಕಿದ್ರೆ ಆಯ್ತು. ಈ ರೆಸಿಪಿ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಹೆಚ್ಚು ಸಾಮಾಗ್ರಿಯೂ ಬೇಕಿಲ್ಲ. ಆದರೆ, ಸೋಯಾ ಸಾಸ್‌ ಮತ್ತು ಟೊಮೆಟೊ ಸಾಸ್‌ ಬೇಕೇಬೇಕು. ಬನ್ನಿ ಪಟಾಪಟ್‌ ಚಿಕನ್‌ ಫ್ರೈ ಮಾಡೋಣ.
icon

(1 / 6)

ಕತ್ತರಿಸಿಟ್ಟ ಅರ್ಧ ಕೆಜಿ ಚಿಕನ್‌ ಮಾಂಸಕ್ಕೆ ಅರ್ಧ ಚಮಚ ಉಪ್ಪು ಹಾಕಿ. ಚೆನ್ನಾಗಿ ಮಿಕ್ಸ್‌ ಮಾಡಿಡಿ. ಬೋನ್‌ಲೆಸ್‌ ಚಿಕನ್‌ ಆದ್ರೆ ಉತ್ತಮ. ಬೇಗ ಬೇಯುತ್ತದೆ. ಬೋನ್‌ ಇರುವ ಚಿಕನ್‌ ಆಗಿದ್ರೆ ಸ್ವಲ್ಪ ಹೆಚ್ಚು ಹೊತ್ತು ಬೇಯಿಸಬೇಕು. 20 ನಿಮಿಷದ ಬದಲು ಅರ್ಧಗಂಟೆ ಬೇಕಾಗಬಹುದು. 
icon

(2 / 6)

ಒಂದು  ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ನಾಲ್ಕೈದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಗ ಉಪ್ಪು ಹಾಕಿ ಮಿಕ್ಸ್‌ ಮಾಡಿಟ್ಟ ಚಿಕನ್‌ ಅನ್ನು ಇದಕ್ಕೆ ಹಾಕಿ.  ಸ್ವಲ್ಪ ಹೊತ್ತು ಮಗುಚುತ್ತ ಇರಿ. ಚಿಕನ್‌ ರಸ ಬಿಟ್ಟು ಡ್ರೈ ಆಗಲು ಆರಂಭವಾಗುತ್ತದೆ. ಇದಕ್ಕೆ ಒಂದು ಅರ್ಧ ಚಮಚ ಅರಸಿನ ಪೌಡರ್‌ ಹಾಕಿ. 
icon

(3 / 6)

ಗ್ಯಾಸ್‌ ಫುಲ್‌ ವಾಲ್ಯುಮ್‌ನಲ್ಲಿ ಇರಲಿ. ಚಿಕನ್‌ ಫ್ರೈ ಆಗ್ತಾ ಇರಲಿ. ಚಿಕನ್‌ ಫ್ರೈ ಆಗಿದೆ ಎಂದಾದಗ ಅದನ್ನು ತೆಗೆದುಪಕ್ಕಕ್ಕೆ ಇಡಿ. ಇನ್ನೊಂದು ಬಾಣಲೆ ತೆಗೆದುಕೊಳ್ಳಿ. ಅದಕ್ಕೆ ಎಣ್ಣೆ ಹಾಕಿ. ಕೊಂಚ ಕರಿಬೇವಿನ ಸೊಪ್ಪು ಹಾಕಿ. ಸ್ವಲ್ಪ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಹಾಕಿ. ಚೆನ್ನಾಗಿ ಫ್ರೈ ಆಗಲಿ.
icon

(4 / 6)

ಕರಿಬೇವು, ಶುಂಠಿಬೆಳ್ಳುಳ್ಳಿ ಪೇಸ್ಟ್‌ ಫ್ರೈ ಆದ ಬಳಿಕ ಅದಕ್ಕೆ ಸುಮಾರು ಒಂದೂವರೆ ಚಮಚ ಮೆಣಸಿನ ಪುಡಿ ಹಾಕಿ. ಖಾರ ಜಾಸ್ತಿ ಬೇಕಿದ್ರೆ ಇನ್ನಷ್ಟು ಹಾಕಬಹುದು. ಇದಕ್ಕೆ ಒಂದು ಮೂರು ಚಮಚ ಸೋಯಾ ಸಾಸ್‌ ಹಾಕಿ. ಮೂರು ನಾಲ್ಕು ಚಮಚದಷ್ಟು ಟೊಮೆಟೊ ಸೂಪ್‌ ಹಾಕಿ. ಅಂದ್ರೆ ತಲಾ ಕಾಲು ಕಪ್ಪಿನಷ್ಟು ಸೋಯಾ ಮತ್ತು ಟೊಮೊಟಾ ಸಾಸ್‌ ಹಾಕಿರಿ. ಸ್ವಲ್ಪ ಹೊತ್ತು ಬಿಸಿಮಾಡಿ.
icon

(5 / 6)

ಇದಕ್ಕೆ ಬೇಯಿಸಿ ತೆಗೆದಿಟ್ಟ ಚಿಕನ್‌ ಅನ್ನು ಹಾಕಿ. ಚೆನ್ನಾಗಿ ಮಿಕ್ಸ್‌ ಮಾಡಿ. ಚೆನ್ನಾಗಿ ಫ್ರೈ ಆಗಲಿ. ಬೆಂಕಿ ಫುಲ್‌ ವಾಲ್ಯೂಮ್‌ನಲ್ಲಿ ಇರಲಿ. ಉಪ್ಪು ಕಡಿಮೆ ಆಗಿದ್ರೆ ಈಗಲೇ ಉಪ್ಪು ಹಾಕಿ. ಇದಾದ ಬಳಿಕ ಅರ್ಧ ನಿಂಬೆ ರಸ ಹಾಕಿ. ಕಟ್‌ ಮಾಡಿಟ್ಟಿರುವ ಸ್ವಲ್ಪ ಕೊತ್ತಂಬರಿಸೊಪ್ಪು  ಹಾಕಿ.  ಸ್ಟವ್‌ ಆಫ್‌ ಮಾಡಿ. 20 ನಿಮಿಷ ಆಯ್ತೋ ಗೊತ್ತಿಲ್ಲ, ಚಿಕನ್‌ ಫ್ರೈ ರೆಡಿಯಾಗಿದೆ.  
icon

(6 / 6)

ಇತರ ಗ್ಯಾಲರಿಗಳು