Egg Curry Recipe: ಎಗ್ ಗ್ರೇವಿ ಮಾಡುವುದು ಹೇಗೆ, 30 ನಿಮಿಷದಲ್ಲಿ ಮಾಡಿ ರುಚಿಕರ ಮೊಟ್ಟೆ ಮಸಾಲ, ಬ್ಯಾಚುಲರ್ಸ್ ತಪ್ಪದೇ ಟ್ರೈ ಮಾಡಿ
- Egg Gravy Recipe in Kannada: ಮೊಟ್ಟೆಯಿಂದ ಹಲವು ಬಗೆಯ ಗ್ರೇವಿ, ಮಸಾಲ, ಆಮ್ಲೆಟ್ ಇತ್ಯಾದಿಗಳನ್ನು ಮಾಡಬಹುದು. ರುಚಿಕರವಾಗಿ ಮೊಟ್ಟೆ ಮಸಾಲ ಮಾಡುವುದು ಹೇಗೆ ಎಂದು ತಿಳಿಯೋಣ. ಬ್ಯಾಚುಲರ್ಸ್‌ಗಳು ಪಟಾಪಟ್ ಸಾಂಬಾರ್ ಮಾಡಲು ಬಯಸಿದರೆ ಇದನ್ನು ಟ್ರೈ ಮಾಡಬಹುದು. ಕುಟುಂಬಸ್ಥರು ಕೂಡ ಚಪಾತಿ, ರೋಟಿಗೆ ಈ ಗ್ರೇವಿ ಟ್ರೈ ಮಾಡಬಹುದು.
- Egg Gravy Recipe in Kannada: ಮೊಟ್ಟೆಯಿಂದ ಹಲವು ಬಗೆಯ ಗ್ರೇವಿ, ಮಸಾಲ, ಆಮ್ಲೆಟ್ ಇತ್ಯಾದಿಗಳನ್ನು ಮಾಡಬಹುದು. ರುಚಿಕರವಾಗಿ ಮೊಟ್ಟೆ ಮಸಾಲ ಮಾಡುವುದು ಹೇಗೆ ಎಂದು ತಿಳಿಯೋಣ. ಬ್ಯಾಚುಲರ್ಸ್‌ಗಳು ಪಟಾಪಟ್ ಸಾಂಬಾರ್ ಮಾಡಲು ಬಯಸಿದರೆ ಇದನ್ನು ಟ್ರೈ ಮಾಡಬಹುದು. ಕುಟುಂಬಸ್ಥರು ಕೂಡ ಚಪಾತಿ, ರೋಟಿಗೆ ಈ ಗ್ರೇವಿ ಟ್ರೈ ಮಾಡಬಹುದು.
(1 / 8)
Egg Curry Recipe in Kannada: ಮೊಟ್ಟೆ ಗ್ರೇವಿ ಮಾಡಲು ಬೇಕಾದ ಸಾಮಾಗ್ರಿಗಳು: ಮೊಟ್ಟೆ ತಿನ್ನಲು ಎಷ್ಟು ಹೊಟ್ಟೆ ಇದೆ ಎಂದು ಲೆಕ್ಕಹಾಕಿಕೊಂಡು ಮೊಟ್ಟೆ ಬೇಯಿಸಿ. ಇಲ್ಲಿ ಎಂಟು ಮೊಟ್ಟೆಯನ್ನು ಬಳಸಲಾಗಿದೆ. ಮೂರು ಸಾಧಾರಣ ಗಾತ್ರದ ಈರುಳ್ಳಿ, ಮೂರು ಟೊಮೆಟೊವನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿ. ಮೂರು ಮೆಣಸಿನ ಕಾಯಿಯನ್ನು ಉದ್ದಗೆ ಕತ್ತರಿಸಿಡಿ. ಸ್ವಲ್ಪ ಕರಿಬೇವಿನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಇರಲಿ.(Photos: Praveen Chandra)
(2 / 8)
Egg Masala Recipe in Kannada: ಈರುಳ್ಳಿ ಟೊಮೆಟೊ ಕತ್ತರಿಸಿದ ಬಳಿಕ ಸಾಸಿವೆ ಅರ್ಧ ಚಮಚ, ಒಂದು ಚಮಚ ಮೆಣಸಿನ ಪುಡಿ, ಅರಸಿನ ಪುಡಿ, ಒಂದು ಚಮಚ ದನಿಯಾ ಅಥವಾ ಕೊತ್ತಂಬರಿ ಪುಡಿ, ಸ್ವಲ್ಪ ಗರಂ ಮಸಾಲ ಪುಡಿ ಸಿದ್ಧವಾಗಿಟ್ಟುಕೊಳ್ಳಿ. ಅರ್ಧ ನಿಂಬೆಗಾತ್ರದ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಯಲು ಹಾಕಿರಿ.
(3 / 8)
Egg Recipe: ಮೊದಲಿಗೆ ಮೊಟ್ಟೆ ಬೇಯಿಸಿ ಸಿಪ್ಪೆ ತೆಗೆದಿಡಿ. ಬೇಯಿಸಿದ ಮೊಟ್ಟೆಯ ನಾಲ್ಕು ಕಡೆ ಗೆರೆ ಹಾಕಿ. ಮಸಾಲ ಚೆನ್ನಾಗಿ ಎಳೆದುಕೊಳ್ಳಲು ಇದು ಸಹಕಾರಿ. ಈಗ ಒಂದು ಬಾಣಲೆಯನ್ನು ಸ್ಟವ್ ಮೇಲೆ ಇಡಿ.
(4 / 8)
ಬಾಣಲೆಗೆ ನಾಲ್ಕೈದು ಚಮಚ ಎಣ್ಣೆ ಹಾಕಿ. ಎಣ್ಣೆ ತುಸು ಜಾಸ್ತಿ ಇರಲಿ. ಹೆಚ್ಚು ರುಚಿಕರವಾಗುತ್ತದೆ. ಅದಕ್ಕೆ ಅರ್ಧ ಚಮಚ ಅರಸಿನ ಪುಡಿ ಹಾಕಿ. ಬೇಯಿಸಿದ ಮೊಟ್ಟೆಯನ್ನು ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ. ಮೊಟ್ಟೆಯನ್ನು ತೆಗೆದು ಪಕ್ಕಕ್ಕಿಡಿ.
(5 / 8)
ಅದೇ ಬಾಣಲೆ ಬಿಸಿ ಮಾಡಿ. ಅದರಲ್ಲಿ ಸಾಕಷ್ಟು ಎಣ್ಣೆ ಉಳಿದಿರುತ್ತದೆ. ಮೊದಲಿಗೆ ಸಾಸಿವೆ ಹಾಕಿ. ಸಾಸಿವೆ ಚಿಟಪಟ ಅಂದಾಗ ಕರಿಬೇವಿನ ಸೊಪ್ಪು ಹಾಕಿ. ಇದಾದ ಬಳಿಕ ಈರುಳ್ಳಿ ಹಾಕಿ. ಈರುಳ್ಳಿ ಚೆನ್ನಾಗಿ ಫ್ರೈ ಆಗಲಿ. ಸ್ಟವ್ ಮೀಡಿಯಂ ಫ್ಲೇಮ್‌ನಲ್ಲಿ ಇರಲಿ. ಇದಾದ ಬಳಿಕ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಇದಾದ ಬಳಿಕ ಕತ್ತರಿಸಿಟ್ಟ ಟೊಮೆಟೊ ಹಾಕಿ. ಟೊಮೆಟೊ ಮೃದುವಾಗುವ ತನಕ ಫ್ರೈ ಮಾಡಿ.
(6 / 8)
ಟೊಮೆಟೊ ಚೆನ್ನಾಗಿ ಬೆಂದ ಬಳಿಕ ಮಸಾಲಗಳನ್ನು ಹಾಕಲು ಆರಂಭಿಸಿ. ಒಂದು ಚಮಚ ಮೆಣಸಿನ ಪುಡಿ, ಒಂದು ಚಮಚ ದನಿಯಾ ಅಥವಾ ಕೊತ್ತಂಬರಿ ಪುಡಿ, ಸ್ವಲ್ಪ ಗರಂ ಮಸಾಲ ಪುಡಿ ಹಾಕಿ. ಅರಸಿನ ಪುಡಿ ಕೊಂಚ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲ ತುಂಬಾ ಗಟ್ಟಿ ಇದ್ದರೆ ಒಂದರ್ಧ ಗ್ಲಾಸ್ ನೀರು ಹಾಕಿ. ಮೂರು ನಿಮಿಷ ಬೇಯಲಿ.
(7 / 8)
ಚೆನ್ನಾಗಿ ಕುದಿ ಬರುತ್ತಿರುವಾಗ ಬೇಯಿಸಿಟ್ಟ ಮೊಟ್ಟೆಯನ್ನು ಹಾಕಿ. ಒಂದು ಮೂರು ನಿಮಿಷ ಬೇಯಲಿ. ಇದಾದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ. ಸ್ಟೀಮ್‌ನಲ್ಲಿ ಕೆಲವು ನಿಮಿಷ ಬೇಯಲಿ. ಈ ಸಮಯದಲ್ಲಿ ಮೊಟ್ಟೆಗೆ ಮಸಾಲ ಚೆನ್ನಾಗಿ ಸೇರುತ್ತದೆ. (Photos: Praveen Chandra)
ಇತರ ಗ್ಯಾಲರಿಗಳು