ಪಾರ್ಲೆ-ಜಿ ಬಿಸ್ಕೆಟ್‌ನಲ್ಲಿ ʼಜಿʼ ಯ ಅರ್ಥವೇನು? 90ರ ದಶಕದ ಮಕ್ಕಳ ನೆಚ್ಚಿನ ಬಿಸ್ಕತ್ ಕುರಿತ ಆಸಕ್ತಿದಾಯಕ ವಿಚಾರವಿದು
- G in Parle G: ಪಾರ್ಲೆ-ಜಿ, ಹಲವು ದಶಕಗಳಿಂದಲೂ ಭಾರತದ ಅತ್ಯಂತ ಜನಪ್ರಿಯ ಬಿಸ್ಕತ್ತುಗಳಲ್ಲಿ ಒಂದು. 90ರ ದಶಕದವರಿಗೆ ಪಾರ್ಲೆ-ಜಿ ಪಿಝ್ಜಾಕ್ಕೆ ಸಮನಾಗಿತ್ತು ಎಂಬುದು ಸುಳ್ಳಲ್ಲ. ಅದೇನೇ ಇರಲಿ ಪಾರ್ಲೆ-ಜಿಯಲ್ಲಿ ಇಂಗ್ಲಿಷ್‌ನ ʼಜಿʼ ಎಂದರೇನು ಅಂತ ಯಾವಾಗಲಾದ್ರೂ ಯೋಚಿಸಿದ್ರಾ? ಈ ಕುತೂಹಲ ನಿಮಗೂ ಇದ್ರೆ ಇಲ್ಲಿದೆ ಉತ್ತರ.
- G in Parle G: ಪಾರ್ಲೆ-ಜಿ, ಹಲವು ದಶಕಗಳಿಂದಲೂ ಭಾರತದ ಅತ್ಯಂತ ಜನಪ್ರಿಯ ಬಿಸ್ಕತ್ತುಗಳಲ್ಲಿ ಒಂದು. 90ರ ದಶಕದವರಿಗೆ ಪಾರ್ಲೆ-ಜಿ ಪಿಝ್ಜಾಕ್ಕೆ ಸಮನಾಗಿತ್ತು ಎಂಬುದು ಸುಳ್ಳಲ್ಲ. ಅದೇನೇ ಇರಲಿ ಪಾರ್ಲೆ-ಜಿಯಲ್ಲಿ ಇಂಗ್ಲಿಷ್‌ನ ʼಜಿʼ ಎಂದರೇನು ಅಂತ ಯಾವಾಗಲಾದ್ರೂ ಯೋಚಿಸಿದ್ರಾ? ಈ ಕುತೂಹಲ ನಿಮಗೂ ಇದ್ರೆ ಇಲ್ಲಿದೆ ಉತ್ತರ.
(1 / 8)
ಬಿಸ್ಕತ್ತುಗಳ ವಿಷಯಕ್ಕೆ ಬಂದರೆ, ಹಲವು ಭಾರತೀಯರ ಮನಸ್ಸಿಗೆ ಮೊದಲು ಬರುವುದು ಪಾರ್ಲೆ-ಜಿ. ಇದು ಕೇವಲ ಬಿಸ್ಕೆಟ್ ಅಲ್ಲ. 90ರ ದಶಕದ ಮಂದಿಗೆ ಅದರೊಂದಿಗೆ ಅನೇಕ ಸವಿ ನೆನಪುಗಳಿವೆ. ಬಾಲ್ಯದಲ್ಲಿ ಪಾರ್ಲೆ-ಜಿ ಬಿಸ್ಕತ್ತನ್ನು ಪಿಝ್ಜಾದಂತೆ ತಿಂದ ಖುಷಿಯೂ ಇದೆ. ಇಲ್ಲಿಯವರೆಗೆ ಹಲವು ಬಿಸ್ಕತ್ತುಗಳು ಮಾರುಕಟ್ಟೆಗೆ ಬಂದರೂ ಪಾರ್ಲೆ-ಜಿ ತನ್ನ ಜನಪ್ರಿಯತೆ ಹಾಗೆಯೇ ಉಳಿಸಿಕೊಂಡಿವೆ. ಈಗಲೂ ಪಾರ್ಲೆ-ಜಿ ಫೇವರಿಟ್ ಬಿಸ್ಕತ್ತಿನ ಸ್ಥಾನ ಉಳಿಸಿಕೊಂಡಿದೆ.
(2 / 8)
ಬಿಸ್ಕತ್ತುಗಳ ವಿಷಯಕ್ಕೆ ಬಂದರೆ, ಹಲವು ಭಾರತೀಯರ ಮನಸ್ಸಿಗೆ ಮೊದಲು ಬರುವುದು ಪಾರ್ಲೆ-ಜಿ. ಪಾರ್ಲೆ-ಜಿ ಕೇವಲ ಬಿಸ್ಕೆಟ್ ಅಲ್ಲ ಆದರೆ ಹಲವರ ನೆಚ್ಚಿನ ಸಂಗಾತಿ. 90ರ ದಶಕದ ಮಂದಿಗೆ ಅದರೊಂದಿಗೆ ಅನೇಕ ಸವಿ ನೆನಪುಗಳಿವೆ. ಇಲ್ಲಿಯವರೆಗೆ ಹಲವು ಬಿಸ್ಕತ್ತುಗಳು ಮಾರುಕಟ್ಟೆಗೆ ಬಂದರೂ ಪಾರ್ಲೆ-ಜಿ ತನ್ನ ಜನಪ್ರಿಯತೆ ಹಾಗೆಯೇ ಉಳಿಸಿಕೊಂಡಿವೆ.
(3 / 8)
ಪಾರ್ಲೆ-ಜಿಯ ಅಡಿಬರಹ ಇಂದಿಗೂ ಬಹಳ ಜನಪ್ರಿಯವಾಗಿದೆ. ಆದರೆ ಪಾರ್ಲೆ-ಜಿಯಲ್ಲಿ ಈ ಅಕ್ಷರದ ಅರ್ಥ ಏನಿರಬಹುದು, ಜಿ ಎಂದು ಹೆಸರು ಇಡಲು ಕಾರಣವೇನು ಎಂದು ನಿಮಗೂ ಅನ್ನಿಸಿರಬಹುದು. ಪಾರ್ಲೆ-ಜಿ ಹೆಸರಿನ ಹಿಂದಿನ ಕಥೆ ಆಸಕ್ತಿದಾಯಕವಾಗಿದೆ.
(5 / 8)
ಸ್ವಾತಂತ್ರ್ಯ ಪೂರ್ವದಿಂದಲೂ ಪಾರ್ಲೆ-ಜಿ ಬಿಸ್ಕೆಟ್ ಮಾರುಕಟ್ಟೆಯಲ್ಲಿತ್ತು. ಆದರೆ ಆ ಸಮಯದಲ್ಲಿ ಪಾರ್ಲೆ-ಜಿಯನ್ನು ಗ್ಲುಕೋ ಬಿಸ್ಕೆಟ್ ಎಂದು ಕರೆಯಲಾಗುತ್ತಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಗ್ಲುಕೋ ಬಿಸ್ಕತ್ತುಗಳು ಭಾರತೀಯ ಮತ್ತು ಬ್ರಿಟಿಷ್ ಸೈನಿಕರ ನೆಚ್ಚಿನ ತಿನಿಸಾಗಿತ್ತು. ಆದಾಗ್ಯೂ, ಸ್ವಾತಂತ್ರ್ಯದ ನಂತರ, ದೇಶವು ಆಹಾರದ ಬಿಕ್ಕಟ್ಟನ್ನು ಎದುರಿಸಿತು. ಇದರಿಂದಾಗಿ ಬಿಸ್ಕೆಟ್ ಉತ್ಪಾದನೆ ಸ್ಥಗಿತಗೊಂಡಿತ್ತು.
(6 / 8)
ಕೆಲವು ದಿನಗಳ ನಂತರ, ಗ್ಲುಕೋ ಬಿಸ್ಕತ್ತುಗಳು ಮಾರುಕಟ್ಟೆಗೆ ಮರಳಿದವು. ಆದರೆ ಆ ಸಮಯದಲ್ಲಾಗಲೇ ಹಲವು ಪ್ರತಿಸ್ಪರ್ಧಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಬ್ರಿಟಾನಿಯಾ ಕಂಪನಿಯು ಗ್ಲೂಕೋಸ್-ಡಿ ಬಿಸ್ಕತ್ತುಗಳೊಂದಿಗೆ ಸಂಪೂರ್ಣ ಮಾರುಕಟ್ಟೆಯನ್ನು ವಶಪಡಿಸಿಕೊಂಡಿತು. ಆಗ, ಈ ಗ್ಲುಕೋ ಬಿಸ್ಕತ್ ಅನ್ನು ಹೊಸ ಹೆಸರಿನಲ್ಲಿ ಮತ್ತೆ ಮಾರುಕಟ್ಟೆಗೆ ತರಲಾಯಿತು.
(7 / 8)
ಗ್ಲುಕೋ ಬಿಸ್ಕೆಟ್ಸ್ ಅನ್ನು ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಯಿತು. ಪಾರ್ಲೆ-ಜಿ ಎಂಬ ಹೆಸರನ್ನು ಮುಂಬೈನ ವೈಲ್ ಪಾರ್ಲೆ ಪ್ರದೇಶದಿಂದ ತೆಗೆದುಕೊಳ್ಳಲಾಗಿದೆ. ಇದು ಗ್ಲೂಕೋಸ್ ಬಿಸ್ಕತ್ ಆಗಿರುವುದರಿಂದ, ಅದರ ಹಿಂಭಾಗದಲ್ಲಿ 'ಜಿ' ಅನ್ನು ಇರಿಸಲಾಗುತ್ತದೆ. ಪಾರ್ಲೆ-ಜಿ ಯಲ್ಲಿನ 'ಜಿ' ಎಂದರೆ ಗ್ಲೂಕೋಸ್, ಜೆಂಟಿಯನ್ ಅಲ್ಲ.
ಇತರ ಗ್ಯಾಲರಿಗಳು