ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಕೊಹ್ಲಿ ಮ್ಯಾನೇಜರ್​ ಆಗಿದ್ದ ರಿತಿಕಾ ಸಜ್ದೇಹ್ ರೋಹಿತ್ ಶರ್ಮಾರನ್ನು ಪ್ರೀತಿಸಿದ್ದೇಗೆ; ಇಲ್ಲಿದೆ ಸೂಪರ್​ಹಿಟ್ ಲವ್​ಸ್ಟೋರಿ

ವಿರಾಟ್ ಕೊಹ್ಲಿ ಮ್ಯಾನೇಜರ್​ ಆಗಿದ್ದ ರಿತಿಕಾ ಸಜ್ದೇಹ್ ರೋಹಿತ್ ಶರ್ಮಾರನ್ನು ಪ್ರೀತಿಸಿದ್ದೇಗೆ; ಇಲ್ಲಿದೆ ಸೂಪರ್​ಹಿಟ್ ಲವ್​ಸ್ಟೋರಿ

  • Rohit Sharma Love Story : ರೋಹಿತ್​ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅವರು ಮದುವೆಯಾಗಿ 9 ವರ್ಷಗಳಾಗಿದೆ. 2015ರಲ್ಲಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಸುಂದರ ಲವ್​ ಸ್ಟೋರಿ ಹೇಗಿತ್ತು ಎಂಬುದನ್ನು ಈ ಮುಂದೆ ನೋಡೋಣ.

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಏಪ್ರಿಲ್ 30ರಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಹಿನ್ನೆಲೆ ಹಿಟ್​ಮ್ಯಾನ್ ಮತ್ತು ಪತ್ನಿ ರಿತಿಕಾ ಸಜ್ದೇಹ್ ಅವರ ಸೂಪರ್​ ಹಿಟ್​ ಕ್ಯೂಟ್ ಲವ್ ಸ್ಟೋರಿಯನ್ನು ತಿಳಿಯೋಣ.
icon

(1 / 9)

ರೋಹಿತ್​ ಮತ್ತು ರಿತಿಕಾ ಅವರು ಮದುವೆಯಾಗಿದ್ದು 2015ರ ಡಿಸೆಂಬರ್​ 13ರಂದು. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆ ಕ್ರಿಕೆಟ್​ ಮತ್ತು ಬಾಲಿವುಡ್ ಸೆಲೆಬ್ರೆಟಿಗಳು ಸಹ ಭಾಗವಹಿಸಿದ್ದರು. ಈ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಹೆಸರು ಸಮೈರಾ.
icon

(2 / 9)

ರಿತಿಕಾ ಸಜ್ದೇಹ್ ಅವರು 2010 ರಿಂದ 3 ವರ್ಷಗಳ ಕಾಲ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮ್ಯಾನೇಜರ್​ ಆಗಿದ್ದರು. ​ಆಗ ಕೊಹ್ಲಿ-ರಿತಿಕಾ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿ ಎದ್ದಿತ್ತು.
icon

(3 / 9)

ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಮೊದಲ ಬಾರಿಗೆ   ಭೇಟಿಯಾಗಿದ್ದು, ಜಾಹೀರಾತು ಚಿತ್ರೀಕರಣದ ಸಮಯದಲ್ಲಿ. ಅದು ಕೂಡ 2008ರಲ್ಲಿ. ಆದರೆ ಮೊದಲ ಭೇಟಿಯಲ್ಲಿ ಇಬ್ಬರು ಹೆಚ್ಚು ಮಾತುಕತೆಯೇ ನಡೆದಿರಲಿಲ್ಲ. ಅಲ್ಲಿ ರಿತಿಕಾ ಕ್ರೀಡಾ ಈವೆಂಟ್ ಮ್ಯಾನೇಜರ್ ಆಗಿದ್ದರು.
icon

(4 / 9)

ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಕಾರ್ನರ್​ಸ್ಟೋನ್ ಸ್ಪೋರ್ಟ್‌ನ ಸಿಇಒ ಬಂಟಿ ಸಜ್ದೇಹ್ ಅವರ ಸೋದರಸಂಬಂದಿ ರಿತಿಕಾ ಸಜ್ದೇಹ್. ರೋಹಿತ್ ಶರ್ಮಾ ಅವರನ್ನು ಭೇಟಿಯಾಗುವ ಮೊದಲು, ರಿತಿಕಾ ಅವರು ಕ್ರೀಡಾ ಜಗತ್ತಿಗೆ ಹೆಸರುವಾಸಿಯಾಗಿದ್ದರು.
icon

(5 / 9)

ರಿತಿಕಾ ಅವರು ಉನ್ನತ ಮಟ್ಟದ ಕ್ರಿಕೆಟಿಗರಿಗೆ ಕ್ರೀಡಾ ಈವೆಂಟ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ 'ರಾಖಿ' ಸಹೋದರಿಯೂ ಹೌದು. ಆಕೆ ನನ್ನ ತಂಗಿ. ನೀನು ಆಕೆಯನ್ನು ನೋಡುವಂತಿಲ್ಲ ಎಂದು ತಮಾಷೆಯಾಗಿ ರೋಹಿತ್​ಗೆ ಯವಿ ವಾರ್ನ್​ ಮಾಡಿದ್ದರು.
icon

(6 / 9)

ಜಾಹೀರಾತು ಶೂಟಿಂಗ್ ಸಮಯದಲ್ಲಿ ರಿತಿಕಾರನ್ನು ಅವರನ್ನು ರೋಹಿತ್ ಸರಿಯಾಗಿ ಮಾತನಾಡದಿದ್ದರೂ ಕ್ರಮೇಣ ಇಬ್ಬರು ಉತ್ತಮ ಸ್ನೇಹಿತರಾದರು. ಈ ಸ್ನೇಹ ಪ್ರೀತಿಯಾಗಿ ಚಿಗುರುತ್ತದೆ. ರೋಹಿತ್,  ರಿತಿಕಾ ಜೊತೆ 6 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು.
icon

(7 / 9)

ಪರಸ್ಪರ ಪ್ರೀತಿಯಲ್ಲಿದ್ದಾಗ ಮುಂಬೈನ ಬೋರಿವ್ಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು ರಿತಿಕಾ ಸಜ್ದೇಹ್​ಗೆ ಮಂಡಿಯೂರಿ ಉಂಗುರದೊಂದಿಗೆ ಪ್ರಪೋಸ್ ಮಾಡಿದ್ದರು. ಈ ಪ್ರಪೋಸಲ್ ಅನ್ನು ರಿತಿಕಾ ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದರು.
icon

(8 / 9)

ರೋಹಿತ್ ಪ್ರಸ್ತುತ ಭಾರತ ತಂಡದ ನಾಯಕರಾಗಿದ್ದು, ಜೂನ್ 1ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರತಿ ಪ್ರಮುಖ ಪಂದ್ಯಗಳಲ್ಲಿ ರೋಹಿತ್​ರನ್ನು ಹುರಿದುಂಬಿಸಲು ರಿತಿಕಾ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಾರೆ.
icon

(9 / 9)

IPL_Entry_Point

ಇತರ ಗ್ಯಾಲರಿಗಳು