ಜಿರಳೆ ಕಂಡಾಕ್ಷಣ ಕಾಲಿನಿಂದ ತುಳಿಯುವ ಅಭ್ಯಾಸ ಇದ್ಯಾ; ಇದ್ರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ ನೆನಪಿರಲಿ
- ಜಿರಳೆ ಎಂದರೆ ಕೆಲವರಿಗೆ ವಿಪರೀತ ಭಯ. ಇನ್ನೂ ಕೆಲವರಿಗೆ ಜಿರಳೆ ಎಂದರೆ ಅಸಹ್ಯ. ಜಿರಳೆ ಕಂಡಾಕ್ಷಣ ಕೊಲ್ಲುವ ಸಲುವಾಗಿ ಕಾಲಿನಿಂದ ತುಳಿಯುವ ಅಭ್ಯಾಸ ಕೆಲವರಿಗುತ್ತದೆ. ಆದರೆ ಜೀವಂತವಾಗಿರಲಿ ಅಥವಾ ಸತ್ತಿರಲಿ ಜಿರಳೆಯನ್ನು ಕಾಲಿನಿಂದ ತುಳಿಯುವುದು ಅಪಾಯಕಾರಿ.
- ಜಿರಳೆ ಎಂದರೆ ಕೆಲವರಿಗೆ ವಿಪರೀತ ಭಯ. ಇನ್ನೂ ಕೆಲವರಿಗೆ ಜಿರಳೆ ಎಂದರೆ ಅಸಹ್ಯ. ಜಿರಳೆ ಕಂಡಾಕ್ಷಣ ಕೊಲ್ಲುವ ಸಲುವಾಗಿ ಕಾಲಿನಿಂದ ತುಳಿಯುವ ಅಭ್ಯಾಸ ಕೆಲವರಿಗುತ್ತದೆ. ಆದರೆ ಜೀವಂತವಾಗಿರಲಿ ಅಥವಾ ಸತ್ತಿರಲಿ ಜಿರಳೆಯನ್ನು ಕಾಲಿನಿಂದ ತುಳಿಯುವುದು ಅಪಾಯಕಾರಿ.
(1 / 6)
ಜಿರಳೆಗಳು ಮನೆಯಲ್ಲಿ ಎಲ್ಲೆಂದರಲ್ಲಿ ಇರಬಹುದು. ಅವು ಹೆಚ್ಚಾಗಿ ಹಳೆಯ ವಸ್ತುಗಳು ಮತ್ತು ಕೊಳಕು ಸ್ಥಳಗಳಲ್ಲಿ ಕಂಡುಬರುತ್ತವೆ. ಕೆಲವರಿಗೆ ಜಿರಳೆ ಕಂಡಾಕ್ಷಣ ತಮ್ಮ ಕಾಲುಗಳಿಂದ ತುಳಿದು ಸಾಯಿಸುವ ಅಭ್ಯಾಸ ಹೊಂದಿರುತ್ತಾರೆ. ಇದು ಅವರ ಕೆಟ್ಟ ಸ್ವಭಾವವು ಇರಬಹುದು. ಆದರೆ ಜಿರಳೆಗಳನ್ನು ಕಾಲಿನಿಂದ ತುಳಿಯುವುದು ನಮಗೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.
(2 / 6)
ಜಿರಳೆಗಳನ್ನು ಪಾದದಿಂದ ತುಳಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇವುಗಳಿಂದ ಹೊರಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮತ್ತು ಅವುಗಳನ್ನು ಉಸಿರಾಡುವುದರಿಂದ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ. ಜಿರಳೆ ಸತ್ತಿರುವ ಜಾಗದಲ್ಲಿ ಉಸಿರಾಡುವಾಗ ಸುರಕ್ಷಿತವಾಗಿರುವುದು ಉತ್ತಮ ಎನ್ನುವುದು ತಜ್ಞರು ಅಭಿಪ್ರಾಯ.
(3 / 6)
ಸತ್ತ ಜಿರಳೆಯಿಂದ ಸಾಲ್ಮೊನೆಲ್ಲಾ, ಸ್ಟ್ರೆಪ್ಟೋಕೊಕಿ, ಸ್ಟ್ಯಾಫಿಲೋಕೊಕಿಯಂತಹ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತವೆ. ಇದು ಮಾನವ ದೇಹದಲ್ಲಿ ವಿಶೇಷವಾಗಿ ಕರುಳಿನಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಅತಿಸಾರ, ಕಾಲರಾ, ಟೈಫಾಯಿಡ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
(4 / 6)
ಕೆಲವೊಮ್ಮೆ ನಾವು ಜಿರಳೆಗಳನ್ನು ಸಾಯಿಸುವ ಸಲುವಾಗಿ ತುಳಿಯುತ್ತೇವೆ, ಆರಂಭದಲ್ಲಿ ಅವು ತಮ್ಮ ಗಾಯಗಳಿಂದ ಸತ್ತಂತೆ ಕಾಣುತ್ತವೆ ಮತ್ತು ಸ್ವಲ್ಪ ಸಮಯದ ನಂತರ ತಪ್ಪಿಸಿಕೊಳ್ಳುತ್ತವೆ. ಚಿಕ್ಕದಾಗಿ ಕಾಣುವ ಜಿರಳೆ ತನ್ನ ತೂಕದ 900 ಪಟ್ಟು ಭಾರವನ್ನು ಹೊತ್ತುಕೊಳ್ಳಬಲ್ಲದು ಎಂದು ಹೇಳಲಾಗುತ್ತದೆ. ಎಲ್ಲಾ ರೀತಿಯ ಪರಿಸರಕ್ಕೂ ಹೊಂದಿಕೊಳ್ಳುವ ಕಾರಣ ಜಿರಳೆಯ ಜೀವತಾವಧಿ ಪ್ರಮಾಣ ಅಧಿಕ ಎಂದು ಹೇಳಲಾಗುತ್ತದೆ.
(5 / 6)
ಜಿರಳೆಯನ್ನು ಕಾಲುಗಳಿಂದ ತುಳಿಯಬೇಡಿ. ಇದು ಖಂಡಿತ ಅಪಾಯ. ಜಿರಳೆ ಸಾಯಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಜಿರಳೆ ಸಮಸ್ಯೆಯಿದ್ದರೆ ಅದನ್ನು ಕೊಲ್ಲಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಔಷಧಗಳು ಲಭ್ಯವಿವೆ. ಅವುಗಳನ್ನು ಬಳಸಿ, ಸಾಯಿಸಿ. ಅದರ ಬದಲು ಕಾಲಿನಿಂದ ತುಳಿಯುವುದನ್ನು ತಪ್ಪಿಸಿ.
ಇತರ ಗ್ಯಾಲರಿಗಳು