ಕನ್ನಡ ಸುದ್ದಿ  /  Photo Gallery  /  Health News Nutrients To Consume While Trying To Get Pregnant Female Fertility Diet Female Health News In Kannada Jra

ಮಹಿಳೆಯರಲ್ಲಿ ಫಲವಂತಿಕೆ ಸಮಸ್ಯೆ; ಗರ್ಭಧಾರಣೆ ಪ್ರಯತ್ನದಲ್ಲಿ ಈ 10 ಪೋಷಕಾಂಶಗಳು ದೇಹ ಸೇರಲಿ

  • ಆಧುನಿಕ ಒತ್ತಡದ ಬದುಕು ಮತ್ತು ಆಹಾರ ಪದ್ಧತಿಯಿಂದ, ಬಿಸಿ ರಕ್ತದ ಯುವಕ ಯುವತಿಯರ ಆರೋಗ್ಯವೂ ಹದಗೆಡುತ್ತಿದೆ. ದಾಂಪತ್ಯ ಜೀವನದ ಬಳಿಕ ಕೆಲವು ಸಣ್ಣ ಅನಾರೋಗ್ಯ ಸಮಸ್ಯೆ ಕೂಡಾ ಹೆಚ್ಚು ಚಿಂತೆಗೀಡುಮಾಡುತ್ತದೆ. ಇದರಲ್ಲಿ ಮಕ್ಕಳಾಗದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. 

ಸಂತಾನೋತ್ಪತ್ತಿಯ ಆರೋಗ್ಯವನ್ನು ಹೆಚ್ಚಿಸುವ ಮತ್ತು ಗರ್ಭಧಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವೊಂದು ಆಹಾರಕ್ರಮಗಳಿವೆ. ಮಹಿಳೆಯೊಬ್ಬಳು ಗರ್ಭಧರಿಸುವಲ್ಲಿ, ಆಕೆ ಸೇವಿಸುವ ಪೌಷ್ಟಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಸಂತಾನೋತ್ಪತ್ತಿ ಮತ್ತದರ ಪರಿಕಲ್ಪನೆಗೆ ಅಗತ್ಯ ಪೋಷಕಾಂಶಗಳು ದೇಹದಲ್ಲಿರುವುದು ತುಂಬಾ ಮುಖ್ಯ. ಪೌಷ್ಟಿಕತಜ್ಞರಾದ ಜೂಹಿ ಕಪೂರ್ ಅವರು ಸೂಚಿಸಿದಂತೆ, ಗರ್ಭಧಾರಣೆ ಪ್ರಕ್ರಿಯೆಯನ್ನು ಸುಲಭವಾಗಿಸಲು ಆಹಾರದೊಂದಿಗೆ ಸೇರಿಸಬೇಕಾದ ಪೋಷಕಾಂಶಗಳು ಇಲ್ಲಿವೆ.
icon

(1 / 11)

ಸಂತಾನೋತ್ಪತ್ತಿಯ ಆರೋಗ್ಯವನ್ನು ಹೆಚ್ಚಿಸುವ ಮತ್ತು ಗರ್ಭಧಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವೊಂದು ಆಹಾರಕ್ರಮಗಳಿವೆ. ಮಹಿಳೆಯೊಬ್ಬಳು ಗರ್ಭಧರಿಸುವಲ್ಲಿ, ಆಕೆ ಸೇವಿಸುವ ಪೌಷ್ಟಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಸಂತಾನೋತ್ಪತ್ತಿ ಮತ್ತದರ ಪರಿಕಲ್ಪನೆಗೆ ಅಗತ್ಯ ಪೋಷಕಾಂಶಗಳು ದೇಹದಲ್ಲಿರುವುದು ತುಂಬಾ ಮುಖ್ಯ. ಪೌಷ್ಟಿಕತಜ್ಞರಾದ ಜೂಹಿ ಕಪೂರ್ ಅವರು ಸೂಚಿಸಿದಂತೆ, ಗರ್ಭಧಾರಣೆ ಪ್ರಕ್ರಿಯೆಯನ್ನು ಸುಲಭವಾಗಿಸಲು ಆಹಾರದೊಂದಿಗೆ ಸೇರಿಸಬೇಕಾದ ಪೋಷಕಾಂಶಗಳು ಇಲ್ಲಿವೆ.(Freepik)

ಫೋಲೇಟ್ (Folate (vitamin B-9)): ಆರೋಗ್ಯಕರ ಅಂಡಾಣು ಉತ್ಪತ್ತಿಗಾಗಿ ಸೊಪ್ಪು ತರಕಾರಿಗಳು, ಬೀನ್ಸ್ ಮತ್ತು ಬಲವರ್ಧಿತ ಧಾನ್ಯಗಳನ್ನು ಸೇವಿಸಿ.
icon

(2 / 11)

ಫೋಲೇಟ್ (Folate (vitamin B-9)): ಆರೋಗ್ಯಕರ ಅಂಡಾಣು ಉತ್ಪತ್ತಿಗಾಗಿ ಸೊಪ್ಪು ತರಕಾರಿಗಳು, ಬೀನ್ಸ್ ಮತ್ತು ಬಲವರ್ಧಿತ ಧಾನ್ಯಗಳನ್ನು ಸೇವಿಸಿ.(Pixabay)

2. ಕಬ್ಬಿಣ (Iron): ರಕ್ತಹೀನತೆಯನ್ನು ತಡೆಗಟ್ಟಲು ಮಾಂಸ, ಬೀನ್ಸ್ ಮತ್ತು ಪಾಲಕ್‌ ಸೇವಿಸಿ.
icon

(3 / 11)

2. ಕಬ್ಬಿಣ (Iron): ರಕ್ತಹೀನತೆಯನ್ನು ತಡೆಗಟ್ಟಲು ಮಾಂಸ, ಬೀನ್ಸ್ ಮತ್ತು ಪಾಲಕ್‌ ಸೇವಿಸಿ.(Getty Images)

3. ಒಮೆಗಾ-3 ಕೊಬ್ಬಿನಾಮ್ಲಗಳು (Omega-3 fatty acids) : ಹಾರ್ಮೋನ್ ನಿಯಂತ್ರಣ ಮತ್ತು ಅಂಡಾಣುವಿನ ಗುಣಮಟ್ಟಕ್ಕಾಗಿ ಮೀನು, ಅಗಸೆಬೀಜ ಮತ್ತು ವಾಲ್‌ನಟ್‌ ಸೇವಿಸಿ.
icon

(4 / 11)

3. ಒಮೆಗಾ-3 ಕೊಬ್ಬಿನಾಮ್ಲಗಳು (Omega-3 fatty acids) : ಹಾರ್ಮೋನ್ ನಿಯಂತ್ರಣ ಮತ್ತು ಅಂಡಾಣುವಿನ ಗುಣಮಟ್ಟಕ್ಕಾಗಿ ಮೀನು, ಅಗಸೆಬೀಜ ಮತ್ತು ವಾಲ್‌ನಟ್‌ ಸೇವಿಸಿ.(Shutterstock)

4. ಉತ್ಕರ್ಷಣ ನಿರೋಧಕಗಳು (Antioxidants): ಅಂಡಾಣುವನ್ನು ರಕ್ಷಿಸಲು ಹಣ್ಣು, ಸಿಟ್ರಸ್ ಅಂಶವಿರುವ ಹಣ್ಣುಗಳು ಮತ್ತು ಹೆಚ್ಚು ನಟ್ಸ್‌ ಸೇವಿಸಿ.
icon

(5 / 11)

4. ಉತ್ಕರ್ಷಣ ನಿರೋಧಕಗಳು (Antioxidants): ಅಂಡಾಣುವನ್ನು ರಕ್ಷಿಸಲು ಹಣ್ಣು, ಸಿಟ್ರಸ್ ಅಂಶವಿರುವ ಹಣ್ಣುಗಳು ಮತ್ತು ಹೆಚ್ಚು ನಟ್ಸ್‌ ಸೇವಿಸಿ.(Unsplash)

5. ಪ್ರೋಟೀನ್ (Protein) : ಹಾರ್ಮೋನ್ ಉತ್ಪಾದನೆ ಹೆಚ್ಚಿಸಲು ಕೋಳಿ, ತೋಫು ಮತ್ತು ಬೀನ್ಸ್‌ನಂತಹ ಮೂಲಗಳನ್ನು ಆರಿಸಿಕೊಳ್ಳಿ.
icon

(6 / 11)

5. ಪ್ರೋಟೀನ್ (Protein) : ಹಾರ್ಮೋನ್ ಉತ್ಪಾದನೆ ಹೆಚ್ಚಿಸಲು ಕೋಳಿ, ತೋಫು ಮತ್ತು ಬೀನ್ಸ್‌ನಂತಹ ಮೂಲಗಳನ್ನು ಆರಿಸಿಕೊಳ್ಳಿ.(Unsplash)

6. ಕ್ಯಾಲ್ಸಿಯಂ (Calcium): ಡೈರಿ ಹಾಲು ಕುಡಿಯಿರಿ. ಹಾಗೆಯೇ ಸೊಪ್ಪು ತರಕಾರಿಗಳಿಂದ ಕ್ಯಾಲ್ಸಿಯಂ ಪಡೆಯಿರಿ.
icon

(7 / 11)

6. ಕ್ಯಾಲ್ಸಿಯಂ (Calcium): ಡೈರಿ ಹಾಲು ಕುಡಿಯಿರಿ. ಹಾಗೆಯೇ ಸೊಪ್ಪು ತರಕಾರಿಗಳಿಂದ ಕ್ಯಾಲ್ಸಿಯಂ ಪಡೆಯಿರಿ.(Unsplash)

7. ಸತು (Zinc): ಹಾರ್ಮೋನುಗಳನ್ನು ನಿಯಂತ್ರಿಸಲು ಧಾನ್ಯಕಾಳುಗಳು, ನಟ್ಸ್ ಮತ್ತು ಕಾಳುಗಳ ಸೇವನೆಯೊಂದಿಗೆ ಸತುವಿನ ಅಂಶ ದೇಹಕ್ಕೆ ಹೋಗಲಿ
icon

(8 / 11)

7. ಸತು (Zinc): ಹಾರ್ಮೋನುಗಳನ್ನು ನಿಯಂತ್ರಿಸಲು ಧಾನ್ಯಕಾಳುಗಳು, ನಟ್ಸ್ ಮತ್ತು ಕಾಳುಗಳ ಸೇವನೆಯೊಂದಿಗೆ ಸತುವಿನ ಅಂಶ ದೇಹಕ್ಕೆ ಹೋಗಲಿ(Unsplash)

8. ವಿಟಮಿನ್ ಸಿ ಮತ್ತು ಇ (Vitamins C and E): ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಹಣ್ಣುಗಳು, ತರಕಾರಿಗಳು ಮತ್ತು ನಟ್ಸ್ ಸೇವನೆ ಹೆಚ್ಚಿಸಿ.
icon

(9 / 11)

8. ವಿಟಮಿನ್ ಸಿ ಮತ್ತು ಇ (Vitamins C and E): ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಹಣ್ಣುಗಳು, ತರಕಾರಿಗಳು ಮತ್ತು ನಟ್ಸ್ ಸೇವನೆ ಹೆಚ್ಚಿಸಿ.(Unsplash)

9. ಫೈಬರ್ (Fibre): ರಕ್ತದಲ್ಲಿನ ಸಕ್ಕರೆ ಮತ್ತು ಹಾರ್ಮೋನ್ ಸಮತೋಲನಕ್ಕಾಗಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿ.
icon

(10 / 11)

9. ಫೈಬರ್ (Fibre): ರಕ್ತದಲ್ಲಿನ ಸಕ್ಕರೆ ಮತ್ತು ಹಾರ್ಮೋನ್ ಸಮತೋಲನಕ್ಕಾಗಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿ.(Pixabay)

10. ನೀರು ಕುಡುಯಿರಿ (Hydration): ಒಟ್ಟಾರೆ ಆರೋಗ್ಯಕ್ಕಾಗಿ ಯಥೇಚ್ಛವಾಗಿ ನೀರು ಕುಡಿಯಿರಿ.
icon

(11 / 11)

10. ನೀರು ಕುಡುಯಿರಿ (Hydration): ಒಟ್ಟಾರೆ ಆರೋಗ್ಯಕ್ಕಾಗಿ ಯಥೇಚ್ಛವಾಗಿ ನೀರು ಕುಡಿಯಿರಿ.(Unsplash)

ಇತರ ಗ್ಯಾಲರಿಗಳು