Body Odour: ದೇಹ, ಬಾಯಿಯ ದುರ್ಗಂಧಕ್ಕೆ ಕಾಯಿಲೆಗಳೂ ಕಾರಣವಾಗಬಹುದು; ದೇಹದ ದುರ್ಗಂಧದ ಬಗ್ಗೆ ನಿರ್ಲಕ್ಷ್ಯ ಸಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Body Odour: ದೇಹ, ಬಾಯಿಯ ದುರ್ಗಂಧಕ್ಕೆ ಕಾಯಿಲೆಗಳೂ ಕಾರಣವಾಗಬಹುದು; ದೇಹದ ದುರ್ಗಂಧದ ಬಗ್ಗೆ ನಿರ್ಲಕ್ಷ್ಯ ಸಲ್ಲ

Body Odour: ದೇಹ, ಬಾಯಿಯ ದುರ್ಗಂಧಕ್ಕೆ ಕಾಯಿಲೆಗಳೂ ಕಾರಣವಾಗಬಹುದು; ದೇಹದ ದುರ್ಗಂಧದ ಬಗ್ಗೆ ನಿರ್ಲಕ್ಷ್ಯ ಸಲ್ಲ

  • Body Odour Due to Major Diseases: ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳು ಗೋಚರವಾಗುವುದಿಲ್ಲ. ಯಾವುದೇ ರೋಗಲಕ್ಷಣಗಳು ಇಲ್ಲದೆಯೂ ಕಾಯಿಲೆ ಉಲ್ಬಣಿಸಬಹುದು. ಆದರೆ ದೇಹ ಹಾಗೂ ಬಾಯಿಯ ದುರ್ನಾತವು ರೋಗದ  ಸೂಚನೆಯಾಗಿರಬಹುದು.

ದೇಹ ಹಾಗೂ ಬಾಯಿಯ ದುರ್ಗಂಧವು ಹಲವರನ್ನು ಮುಜುಗರಕ್ಕೀಡು ಮಾಡಬಹುದು. ಕೆಟ್ಟ ವಾಸನೆಯು ಇತರರ ಎದುರು ಹೋಗಲು ಹಿಂಜರಿಯುವಂತೆ ಮಾಡಬಹುದು. ವಾಸನೆ ಹೋಗಲಾಡಿಸಲು ಯಾವುದೇ ಕ್ರಮ ಅನುಸರಿಸಿದರೂ ಅದರಿಂದ ಪರಿಹಾರ ಸಿಕ್ಕಿರುವುದಿಲ್ಲ. ಆದರೆ ಈ ವಾಸನೆಗಳು ಗಂಭೀರ ಆರೋಗ್ಯದ ಸೂಚನೆಯಾಗಿರಬಹುದು. ದೇಹ ಹಾಗೂ ಬಾಯಿಯ ದುರ್ಗಂಧವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದಿರಿ. 
icon

(1 / 5)

ದೇಹ ಹಾಗೂ ಬಾಯಿಯ ದುರ್ಗಂಧವು ಹಲವರನ್ನು ಮುಜುಗರಕ್ಕೀಡು ಮಾಡಬಹುದು. ಕೆಟ್ಟ ವಾಸನೆಯು ಇತರರ ಎದುರು ಹೋಗಲು ಹಿಂಜರಿಯುವಂತೆ ಮಾಡಬಹುದು. ವಾಸನೆ ಹೋಗಲಾಡಿಸಲು ಯಾವುದೇ ಕ್ರಮ ಅನುಸರಿಸಿದರೂ ಅದರಿಂದ ಪರಿಹಾರ ಸಿಕ್ಕಿರುವುದಿಲ್ಲ. ಆದರೆ ಈ ವಾಸನೆಗಳು ಗಂಭೀರ ಆರೋಗ್ಯದ ಸೂಚನೆಯಾಗಿರಬಹುದು. ದೇಹ ಹಾಗೂ ಬಾಯಿಯ ದುರ್ಗಂಧವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದಿರಿ. (Freepik)

ಯಕೃತ್ತಿನ ಸಮಸ್ಯೆ: ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣ ಯಕೃತ್ತಿನ ಸಮಸ್ಯೆ. ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯು ಉಸಿರಿನ ದುರ್ನಾತಕ್ಕೆ ಕಾರಣವಾಗುತ್ತದೆ. ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯು ಬಾಯಿಯಿಂದ ವಾಸನೆ ಬರಲು ಕಾರಣವಾಗುತ್ತದೆ. 
icon

(2 / 5)

ಯಕೃತ್ತಿನ ಸಮಸ್ಯೆ: ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣ ಯಕೃತ್ತಿನ ಸಮಸ್ಯೆ. ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯು ಉಸಿರಿನ ದುರ್ನಾತಕ್ಕೆ ಕಾರಣವಾಗುತ್ತದೆ. ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯು ಬಾಯಿಯಿಂದ ವಾಸನೆ ಬರಲು ಕಾರಣವಾಗುತ್ತದೆ. (Freepik)

ಕಿಡ್ನಿ ಸಮಸ್ಯೆ: ಮೂತ್ರನಾಳದಲ್ಲಿ ಉರಿ ಅಥವಾ ನೋವು ಇಲ್ಲದೆ ಮೂತ್ರಪಿಂಡದ ಸಮಸ್ಯೆಗಳನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಮೂತ್ರನಾಳದ ಸಮಸ್ಯೆಗಳು ಗೋಚರವಾಗದೇ ಇರಬಹುದು. ಆದರೆ ದೇಹದ ದುರ್ನಾತವು ಕಿಡ್ನಿ ಸಮಸ್ಯೆಯನ್ನು ಸೂಚಿಸಬಹುದು. ಗಮನಿಸಿಸುವುದು ಅವಶ್ಯ. 
icon

(3 / 5)

ಕಿಡ್ನಿ ಸಮಸ್ಯೆ: ಮೂತ್ರನಾಳದಲ್ಲಿ ಉರಿ ಅಥವಾ ನೋವು ಇಲ್ಲದೆ ಮೂತ್ರಪಿಂಡದ ಸಮಸ್ಯೆಗಳನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಮೂತ್ರನಾಳದ ಸಮಸ್ಯೆಗಳು ಗೋಚರವಾಗದೇ ಇರಬಹುದು. ಆದರೆ ದೇಹದ ದುರ್ನಾತವು ಕಿಡ್ನಿ ಸಮಸ್ಯೆಯನ್ನು ಸೂಚಿಸಬಹುದು. ಗಮನಿಸಿಸುವುದು ಅವಶ್ಯ. (Freepik)

ಹೈಪರ್ ಥೈರಾಯ್ಡಿಸಮ್: ಹೈಪರ್‌ ಥೈರಾಯಿಡಿಸಮ್‌ ಸಮಸ್ಯೆ ಇರುವವರಲ್ಲಿ ದೇಹದ ದುರ್ಗಂಧ ಕಾಣಿಸಬಹುದು. ಥೈರಾಯ್ಡ್ ಸಮಸ್ಯೆಗಳು ತೀವ್ರವಾಗುವವರೆಗೆ ಹಲವರು ಅದನ್ನು ಗಮನಿಸುವುದಿಲ್ಲ, ಅಲ್ಲದೆ ಇದು ಅತಿಯಾದ ಮೇಲೆ ಇಲ್ಲದ ತೊಂದರೆಗಳಿಗೆ ಕಾರಣವಾಗಬಹುದು. ಆದರೆ ದೇಹದ ದುರ್ಗಂಧವು ಗಂಭೀರವಾದ ಅನಾರೋಗ್ಯವನ್ನು ಸೂಚಿಸುತ್ತದೆ ಮತ್ತು ಹೈಪರ್ ಥೈರಾಯ್ಡಿಸಮ್ ಲಕ್ಷಣವೂ ಆಗಿರಬಹುದು.
icon

(4 / 5)

ಹೈಪರ್ ಥೈರಾಯ್ಡಿಸಮ್: ಹೈಪರ್‌ ಥೈರಾಯಿಡಿಸಮ್‌ ಸಮಸ್ಯೆ ಇರುವವರಲ್ಲಿ ದೇಹದ ದುರ್ಗಂಧ ಕಾಣಿಸಬಹುದು. ಥೈರಾಯ್ಡ್ ಸಮಸ್ಯೆಗಳು ತೀವ್ರವಾಗುವವರೆಗೆ ಹಲವರು ಅದನ್ನು ಗಮನಿಸುವುದಿಲ್ಲ, ಅಲ್ಲದೆ ಇದು ಅತಿಯಾದ ಮೇಲೆ ಇಲ್ಲದ ತೊಂದರೆಗಳಿಗೆ ಕಾರಣವಾಗಬಹುದು. ಆದರೆ ದೇಹದ ದುರ್ಗಂಧವು ಗಂಭೀರವಾದ ಅನಾರೋಗ್ಯವನ್ನು ಸೂಚಿಸುತ್ತದೆ ಮತ್ತು ಹೈಪರ್ ಥೈರಾಯ್ಡಿಸಮ್ ಲಕ್ಷಣವೂ ಆಗಿರಬಹುದು.(Freepik)

ಮಧುಮೇಹ: ಮಧುಮೇಹವು ದೇಹದ ದುರ್ಗಂಧವನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ಮಧುಮೇಹವು ಇತರ ಹಲವು ರೋಗಗಳನ್ನು ತೀವ್ರಗೊಳಿಸುತ್ತವೆ. ಪರಿಣಾಮವಾಗಿ, ದೇಹದ ದುರ್ಗಂಧವು ಹೆಚ್ಚಾಗಬಹುದು. 
icon

(5 / 5)

ಮಧುಮೇಹ: ಮಧುಮೇಹವು ದೇಹದ ದುರ್ಗಂಧವನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ಮಧುಮೇಹವು ಇತರ ಹಲವು ರೋಗಗಳನ್ನು ತೀವ್ರಗೊಳಿಸುತ್ತವೆ. ಪರಿಣಾಮವಾಗಿ, ದೇಹದ ದುರ್ಗಂಧವು ಹೆಚ್ಚಾಗಬಹುದು. (Freepik)


ಇತರ ಗ್ಯಾಲರಿಗಳು