High BP Symptoms: ನಿಮ್ಮ ಚರ್ಮದಲ್ಲೂ ಈ ರೀತಿಯ ಲಕ್ಷಣಗಳು ಗೋಚರಿಸ್ತಾ ಇದ್ಯಾ, ಹೈ ಬಿಪಿ ಇರಬಹುದು ಗಮನಿಸಿ
ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಎನ್ನುವುದು ನಮ್ಮ ಆರೋಗ್ಯದ ಜೊತೆಗೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಬಿಪಿ ಹೆಚ್ಚಾದರೆ ಚರ್ಮದಲ್ಲಿ ಈ ಲಕ್ಷಣಗಳು ಗೋಚರವಾಗಬಹುದು. ನಿಮಗೂ ಹೈ ಬಿಪಿ ಸಮಸ್ಯೆ ಇರಬಹುದು ಎನ್ನಿಸಿದ್ರೆ ಈ ಅಂಶಗಳನ್ನ ಗಮನಿಸಿ.
(1 / 8)
ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಸಹ ಕರೆಯುತ್ತಾರೆ. ಅಧಿಕ ರಕ್ತದೊತ್ತಡ ಸಂಕೇತಗಳನ್ನು ನಾವು ಮುಖದಿಂದಲೇ ತಿಳಿಯಬಹುದು.(shutterstock)
(2 / 8)
ಅಧಿಕ ರಕ್ತದೊತ್ತಡವು ದೇಹದಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಅಧಿಕ ರಕ್ತದೊತ್ತಡವು ರಕ್ತನಾಳಗಳ ಪರದೆಯನನ್ನು ಹಾನಿಗೊಳಿಸುತ್ತದೆ, ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಇದು ನಮಗೆ ಅರಿವಾಗದಂತೆ ನಿಧಾನಕ್ಕೆ ನಮ್ಮನ್ನು ಆವರಿಸಿಕೊಳ್ಳುತ್ತದೆ. (shutterstock)
(3 / 8)
ಅಧಿಕ ರಕ್ತದೊತ್ತಡವು ಮುಖ ಕೆಂಪಾಗುವಂತೆ ಮಾಡುತ್ತದೆ. ಆದರೆ ಕೆಲವೊಮ್ಮೆ ಅತಿಯಾದ ವ್ಯಾಯಾಮ, ಬಿಸಿಲಿನ ಶಾಖ, ಮಾನಸಿಕ ಒತ್ತಡ, ಮಸಾಲೆಯುಕ್ತ ಆಹಾರ ಅಥವಾ ಆಲ್ಕೋಹಾಲ್ ಸೇವನೆ ಕೂಡ ಮುಖ ಕೆಂಪಾಗಲು ಕಾರಣವಾಗಬಹುದು.(shutterstock)
(4 / 8)
ದೀರ್ಘಕಾಲದ ಅಧಿಕ ರಕ್ತದೊತ್ತಡವು ಚರ್ಮವನ್ನು ದುರ್ಬಲಗೊಳಿಸುತ್ತದೆ. ಗಾಯದ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಸಮಯದಲ್ಲಿ ಚರ್ಮದ ಮೇಲಾಗುವ ಯಾವುದೇ ಗಾಯಗಳು ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ.(shutterstock)
(5 / 8)
ಅಧಿಕ ರಕ್ತದೊತ್ತಡವು ಮುಖದ ಮೇಲೆ ಮೊಡವೆ ಮತ್ತು ಸೋರಿಯಾಸಿಸ್‌ನಂತಹ ಚರ್ಮ ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.(shutterstock)
(6 / 8)
ಅಧಿಕ ರಕ್ತದೊತ್ತಡವು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಚರ್ಮಕ್ಕೆ ಪೋಷಕಾಂಶಗಳು ಮತ್ತು ಆಮ್ಲಜನಕದ ಪೂರೈಕೆಯನ್ನು ಅಡ್ಡಿಪಡಿಸುತ್ತದೆ, ಇದರಿಂದಾಗಿ ಚರ್ಮವು ಮಂದ ಮತ್ತು ಶುಷ್ಕವಾಗಿರುತ್ತದೆ.(shutterstock)
(7 / 8)
ಬಿಪಿ ನಿಯಂತ್ರಣಕ್ಕೆ ಕೆಲವು ಮಾರ್ಗಗಳಿವೆ. ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಬಿಪಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವ್ಯಾಯಾಮಗಳನ್ನು ಮಾಡಬೇಕು. ತೂಕ ಹೆಚ್ಚಾಗದಂತೆ ಎಚ್ಚರವಹಿಸಿ. ಉಪ್ಪು ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಇರಬೇಕು. ಒತ್ತಡವಿಲ್ಲದೆ ಬದುಕುವುದು ಹೈಬಿಪಿ ನಿಯಂತ್ರಣಕ್ಕೆ ಬಹಳ ಮುಖ್ಯವಾಗಿದೆ. (shutterstock)
ಇತರ ಗ್ಯಾಲರಿಗಳು