Dengue Prevention: ಮಳೆಗಾಲದಲ್ಲಿ ಡೆಂಘಿ ಜ್ವರದ ಭಯ; ಡೆಂಗ್ಯೂ ಸೊಳ್ಳೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಟಿಪ್ಸ್
- Dengue mosquito: ಡೆಂಗ್ಯೂ ಅಥವಾ ಡೆಂಘಿ ಜ್ವರಕ್ಕೆ ಸೊಳ್ಳೆಗಳೇ ಮುಖ್ಯ ಕಾರಣ. ಎಲ್ಲಾ ಸೊಳ್ಳೆಗಳಲ್ಲಿ ಡೆಂಗ್ಯೂ ಸೊಳ್ಳೆ ಅತ್ಯಂತ ಅಪಾಯಕಾರಿ ಮತ್ತು ಸಾಮಾನ್ಯವಾಗಿ ಭಾರತದಲ್ಲಿ ಮಳೆಗಾಲದಲ್ಲಿ ಡೆಂಘಿ ಜ್ವರ ಹೆಚ್ಚಾಗಿ ಹರಡುತ್ತದೆ. ಈ ಸೊಳ್ಳೆಗಳಿಂದ ಮತ್ತು ಡೆಂಗ್ಯೂ ಜ್ವರದಿಂದ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಸಲಗೆಗಳು..

(1 / 5)
ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದ್ದರಿಂದ ನಿಮ್ಮ ಮನೆಯ ಹತ್ತಿರ ಸೊಳ್ಳೆ ಉತ್ಪತ್ತಿಯಾಗುವ ಯಾವುದೇ ಮೂಲಗಳನ್ನು ತೊಡೆದುಹಾಕಿ. ಹೂವಿನ ಕುಂಡಗಳು, ಬಿಸಾಡಿದ ಹಳೆಯ ಬಕೆಟ್ಗಳು, ಹಳೆಯ ಟೈರುಗಳು, ಮತ್ತು ನಿಯಮಿತವಾಗಿ ನೀರನ್ನು ಸಂಗ್ರಹಿಸಬಹುದಾದ ನೀರಿನ ತೊಟ್ಟಿಯನ್ನು ಪರೀಕ್ಷಿಸಿ ಮತ್ತು ಖಾಲಿ ಮಾಡಿ.
(2 / 5)
ಮಕ್ಕಳ ಚರ್ಮಕ್ಕೆ ಅವರ ವಯಸ್ಸಿಗೆ ಅನುಗುಣವಾದ ಸುರಕ್ಷಿತ ಸೊಳ್ಳೆ ನಿವಾರಕ ಕ್ರೀಮ್ ಬಳಸಿ ಮತ್ತು ಪ್ಯಾಕೇಜಿಂಗ್‌ನಲ್ಲಿನ ಶಿಫಾರಸುಗಳನ್ನು ಅನುಸರಿಸಿ.
(3 / 5)
ಮಕ್ಕಳು ಮಲಗುವ ಹಾಸಿಗೆಗಳಿಗೆ ಸೊಳ್ಳೆ ಪರದೆ ಅಳವಡಿಸಿ. ಸೊಳ್ಳೆಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಲು ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಬೇಡಿ.
(4 / 5)
ಮಕ್ಕಳನ್ನು ಹೊರಗಡೆ ಕಳಿಸುವಾಗ ಸಂಪೂರ್ಣ ದೇಹ ಕವರ್ ಆಗುವ ಬಟ್ಟೆಗಳನ್ನು ಹಾಕಿ. ಉದ್ದನೆಯ ತೋಳಿನ ಟಾಪ್/ಶರ್ಟ್, ಉದ್ದನೆಯ ಪ್ಯಾಂಟ್, ಸಾಕ್ಸ್ ಮತ್ತು ಶೂಗಳನ್ನು ಹಾಕಿ ಕಳುಹಿಸಿ.
ಇತರ ಗ್ಯಾಲರಿಗಳು