ಆಯುರ್ವೇದ: ನಮ್ಮ ದೇಹದ ಮೂಳೆಯ ಆರೋಗ್ಯ, ಶಕ್ತಿ ಹೆಚ್ಚಿಸಲು ಪರಿಹಾರಗಳಿವು; ಶುಂಠಿಯಿಂದ ಅಶ್ವಗಂಧದವರೆಗೆ
Ayurvedic remedies for bone health: ದೇಹದಲ್ಲಿ ಮೂಳೆ ಸದೃಢವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ. ನಮ್ಮ ಮೂಳೆಯ ಆರೋಗ್ಯ ಉತ್ತಮಪಡಿಸಲು ಹಲವು ಗಿಡಮೂಲಿಕೆಗಳು, ಅಭ್ಯಾಸಗಳು ನೆರವಾಗುತ್ತವೆ. ಆರೋಗ್ಯಕರ ಮೂಳೆಗಳಿಗೆ ಆಯುರ್ವೇದದಲ್ಲಿರುವ ಪರಿಹಾರಗಳ ವಿವರ ಇಲ್ಲಿ ನೀಡಲಾಗಿದೆ.
(1 / 7)
ದೇಹದಲ್ಲಿ ಮೂಳೆ ಸದೃಢವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ. ನಮ್ಮ ಮೂಳೆಯ ಆರೋಗ್ಯ ಉತ್ತಮಪಡಿಸಲು ಹಲವು ಗಿಡಮೂಲಿಕೆಗಳು, ಅಭ್ಯಾಸಗಳು ನೆರವಾಗುತ್ತವೆ.
(2 / 7)
ದೇಹದಲ್ಲಿ ಮೂಳೆಯ ಆರೋಗ್ಯ ಉತ್ತಮಗೊಳ್ಳಲು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಬಳಸಬಹುದು. ಆಯುರ್ವೇದ ಮತ್ತು ಕರುಳಿನ ಆರೋಗ್ಯ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಡಾ.ಡಿಂಪಲ್ ಜಂಗ್ಡಾ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮೂಳೆಗಳ ಆರೋಗ್ಯಕ್ಕಾಗಿ ವಿವಿಧ ಸಲಹೆ ನೀಡಿದ್ದಾರೆ. (Unsplash)
(3 / 7)
ಅರ್ಜುನ: ಅರ್ಜುನ ಮರದ ತೊಗಟೆಯಲ್ಲಿ ಆಂಟಿಆಕ್ಸಿಡೆಂಟ್ಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಸತುವಿನಂತಹ ಖನಿಜಗಳಿವೆ, ಇದು ಮೂಳೆಯ ಖನಿಜ ಸಾಂದ್ರತೆಯನ್ನು ಸುಧಾರಿಸುತ್ತದೆ.(Pinterest)
(4 / 7)
ಶುಂಠಿ: ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಮೂಳೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ಕಪ್ ಶುಂಠಿ ಚಹಾವನ್ನು ಸೇವಿಸಿ. ಆರೋಗ್ಯವಾಗಿರಿ.(Pinterest)
(5 / 7)
ಅಶ್ವಗಂಧ: ಇದು ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಳೆಗಳಿಗೆ ಬಲವನ್ನು ನೀಡುತ್ತದೆ, ಒಟ್ಟಾರೆ ಮೂಳೆಯ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ. (Shutterstock)
(6 / 7)
ಗೋಕ್ಷುರ: ಗೋಕ್ಷುರಾ ಕೂಡ ಮೂಳೆಗಳನ್ನು ಬಲಪಡಿಸಲು ಮತ್ತು ಸ್ನಾಯುಗಳ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆ ಸಾಂದ್ರತೆಯನ್ನು ಸುಧಾರಿಸಲು ನೆರವು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಇತರ ಗ್ಯಾಲರಿಗಳು