ಅಂದ ಹೆಚ್ಚುವುದಷ್ಟೇ ಅಲ್ಲ, ಚಿನ್ನದ ಕಿವಿಯೋಲೆ ಧರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ತಿಳಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ
- ಹೆಣ್ಣುಮಗು ಹುಟ್ಟಿ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುತ್ತಾರೆ. ಸಣ್ಣ ಮಗುವಿನಿಂದಲೇ ಹೆಣ್ಣುಮಕ್ಕಳಿಗೆ ಕಿವಿಯೋಲೆ ಧರಿಸುವ ಅಭ್ಯಾಸವಾಗಿರುತ್ತದೆ. ಚಿನ್ನದ ಬಗೆ ಬಗೆಯ ಕಿವಿಯೋಲೆ ಧರಿಸುವುದರಿಂದ ಅಂದ ಹೆಚ್ಚುವುದು ಮಾತ್ರವಲ್ಲ, ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ, ಚಿನ್ನದ ಕಿವಿಯೋಲೆ ಧರಿಸುವುದರಿಂದಾಗು 6 ಪ್ರಯೋಜನ ತಿಳಿಯಿರಿ.
- ಹೆಣ್ಣುಮಗು ಹುಟ್ಟಿ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುತ್ತಾರೆ. ಸಣ್ಣ ಮಗುವಿನಿಂದಲೇ ಹೆಣ್ಣುಮಕ್ಕಳಿಗೆ ಕಿವಿಯೋಲೆ ಧರಿಸುವ ಅಭ್ಯಾಸವಾಗಿರುತ್ತದೆ. ಚಿನ್ನದ ಬಗೆ ಬಗೆಯ ಕಿವಿಯೋಲೆ ಧರಿಸುವುದರಿಂದ ಅಂದ ಹೆಚ್ಚುವುದು ಮಾತ್ರವಲ್ಲ, ಇದರಿಂದ ಇನ್ನೂ ಹಲವು ಪ್ರಯೋಜನಗಳಿವೆ, ಚಿನ್ನದ ಕಿವಿಯೋಲೆ ಧರಿಸುವುದರಿಂದಾಗು 6 ಪ್ರಯೋಜನ ತಿಳಿಯಿರಿ.
(1 / 10)
ಹೆಣ್ಣುಮಕ್ಕಳ ಅಂದಕ್ಕೆ ಆಭರಣಗಳು ಭೂಷಣ ಎಂದರೆ ತಪ್ಪಲ್ಲ. ಆಭರಣ ಧರಿಸುವುದರಿಂದ ಅವರ ನೋಟವೇ ಬದಲಾಗುತ್ತದೆ. ಈ ಆಭರಣಗಳಲ್ಲಿ ಕಿವಿಯೋಲೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಬೇರೆ ಬೇರೆ ರೂಪದ ಕಿವಿಯೋಲೆಗಳು ಬಂದರೂ, ಹಿಂದಿನಿಂದಲೂ ಚಿನ್ನದ ಕಿವಿಯೋಲೆಯನ್ನೇ ಧರಿಸುವ ರೂಢಿ ಇದೆ.
(2 / 10)
ಚಿನ್ನದ ಕಿವಿಯೋಲೆ ಹೆಣ್ಣುಮಕ್ಕಳಿಗೆ ಲಕ್ಷಣವಾಗಿ ಕಾಣಿಸುವುದು ಮಾತ್ರವಲ್ಲ, ಇದನ್ನು ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಬಹುತೇಕರಿಗೆ ಚಿನ್ನದ ಕಿವಿಯೋಲೆ ಧರಿಸುವುದರ ಪ್ರಯೋಜನ ತಿಳಿದಿಲ್ಲ. ಚಿನ್ನದ ಕಿವಿಯೋಲೆ ಧರಿಸುವುದರಿಂದಾಗುವ ಈ ಪ್ರಯೋಜನಗಳ ಬಗ್ಗೆ ತಿಳಿಸಿದರೆ ನೀವು ಅಚ್ಚರಿ ಪಡ್ತೀರಿ.(PC: Canva)
(3 / 10)
ಬುಧನ ಅನುಗ್ರಹ: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನಿಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯದ ಪ್ರಕಾರ ಚಿನ್ನದ ಕಿವಿಯೋಲೆ ಧರಿಸಿದರೆ ಬುಧನ ಅನುಗ್ರಹ ಸಿಗುತ್ತದೆ. ನಿಮ್ಮ ಜಾತಕದಲ್ಲಿ ಬುಧನು ಬಲಶಾಲಿಯಾಗುತ್ತಾನೆ. ಕಿವಿನೋವು, ಕಿವಿ ಸ್ರಾವ ಮುಂತಾದ ಕಿವಿ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.
(4 / 10)
ಬುದ್ಧಿ ಚುರುಕಾಗುತ್ತದೆ: ಚಿನ್ನದ ಕಿವಿಯೋಲೆ ಧರಿಸುವುದರಿಂದ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಇದು ನಿಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ.(PC: Canva)
(5 / 10)
ನಕಾರಾತ್ಮಕ ಭಾವವನ್ನು ತೊಡೆದು ಹಾಕಬಹುದು: ಚಿನ್ನವು ಸಕಾರಾತ್ಮಕತೆಯನ್ನು ಆಕರ್ಷಿಸುವ ಲೋಹವಾಗಿದೆ, ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳಿದ್ದರೆ, ನೀವು ಚಿನ್ನದ ಕಿವಿಯೋಲೆಗಳನ್ನು ಧರಿಸಬೇಕು, ಏಕೆಂದರೆ ಇದು ದುಷ್ಟ ಶಕ್ತಿಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. (PC: Canva)
(6 / 10)
ದೃಷ್ಟಿ ಸುಧಾರಣೆ: ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. (PC: Canva)
(7 / 10)
ಗುರುವಿನ ಬಲ: ಚಿನ್ನದ ಕಿವಿಯೋಲೆ ಧರಿಸುವುದರಿಂದ ಜಾತಕದಲ್ಲಿ ಗುರು ಬಲಗೊಳ್ಳುತ್ತಾನೆ. ಗುರುವಿನ ಆಶೀರ್ವಾದದಿಂದ ಶುಭಪಲಗಳನ್ನು ಪಡೆಯಲು ಸಾಧ್ಯವಿದೆ.(PC: Canva)
(8 / 10)
ಮಾನಸಿಕ ಒತ್ತಡ ನಿವಾರಣೆ: ನ್ನವು ನಮ್ಮ ಮಾನಸಿಕ ಮಟ್ಟವನ್ನು ಸಮತೋಲನಗೊಳಿಸಲು ಕೆಲಸ ಮಾಡುವ ಲೋಹವಾಗಿದೆ. ಚಿನ್ನ ಕಿವಿಯೋಲೆ ಧರಿಸುವುದರಿಂದ ಅದು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ ಮತ್ತು ಒತ್ತಡವನ್ನು ನಿರ್ವಹಿಸುತ್ತದೆ.(PC: Canva)
(9 / 10)
ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ ಬರಹ. ಈ ಮಾಹಿತಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಇತರ ಗ್ಯಾಲರಿಗಳು