ತೂಕ ಇಳಿಕೆಗೆ ಡಯೆಟ್ ಮಾಡುತ್ತಿದ್ದೀರಾ: ಈ ಸಮತೋಲಿತ ಆಹಾರವನ್ನು ಸೇವಿಸಿ, ಆರೋಗ್ಯವಾಗಿರಿ
ತೂಕ ಇಳಿಕೆ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯಕರ, ಸಮತೋಲಿತ ಆಹಾರವು ಧಾನ್ಯಗಳು, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಸೇವಿಸಬೇಕು. ಸಮತೋಲಿತ ಆಹಾರ ಪಡೆಯಬೇಕೆಂದರೆ ನಿಯಮಿತ ಊಟದಲ್ಲಿ ಈ ಆಹಾರಗಳನ್ನು ಸೇವಿಸಲೇಬೇಕು.
(1 / 8)
ತೂಕ ಇಳಿಕೆ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯಕರ, ಸಮತೋಲಿತ ಆಹಾರವು ಧಾನ್ಯಗಳು, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಸೇವಿಸಬೇಕು. ಸಮತೋಲಿತ ಆಹಾರ ಪಡೆಯಬೇಕೆಂದರೆ ನಿಯಮಿತ ಊಟದಲ್ಲಿ ಈ ಆಹಾರಗಳನ್ನು ಸೇವಿಸಲೇಬೇಕು.
(2 / 8)
ಹಣ್ಣುಗಳು: ಕಿತ್ತಳೆ, ಸೇಬು, ಕಿವಿ ಮತ್ತು ಸ್ಟ್ರಾಬೆರಿಗಳಂತಹ ಹಣ್ಣುಗಳು ವಿಟಮಿನ್ ಎ, ಸಿ ಅನ್ನು ಹೊಂದಿರುತ್ತವೆ. ಇದು ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಚರ್ಮದ ಆರೋಗ್ಯ, ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. (freepik)
(3 / 8)
ಧಾನ್ಯಗಳು: ಬ್ರೌನ್ ರೈಸ್ (ಕೆಂಪಕ್ಕಿ), ಓಟ್ಸ್, ಸಿರಿಧಾನ್ಯಗಳಲ್ಲಿ ಫೈಬರ್ ಸಮೃದ್ಧವಾಗಿದ್ದು, ಇವುಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಕ್ಯಾಲೋರಿ ಕಡಿಮೆ ಇರುವ ಈ ಧಾನ್ಯಗಳ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (freepik)
(4 / 8)
ಮೊಟ್ಟೆ: ಬೆಳಗ್ಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು, ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಯ ಊಟಕ್ಕೆ ಮೊಟ್ಟೆಯ ರೋಲ್ ಅಥವಾ ಸ್ಯಾಂಡ್ವಿಚ್ ಅನ್ನು ಸೇವಿಸಬಹುದು. ಇದು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೂದಲಿನ ಆರೈಕೆಗೂ ಇದು ಸಹಕಾರಿ.(freepik)
(5 / 8)
ಮೀನು: ಸಾಲ್ಮನ್, ಚಿಪ್ಪುಮೀನು ಮತ್ತು ಸಾರ್ಡೀನ್‍ನಂತಹ ಮೀನುಗಳು ವಿಟಮಿನ್ ಡಿ, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲಗಳಾಗಿವೆ. (freepik)
(6 / 8)
ಮಾಂಸ: ಕೋಳಿ ಮಾಂಸ, ಮಟನ್ ಇತ್ಯಾದಿಯಲ್ಲಿ ಪೌಷ್ಟಿಕಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಕಬ್ಬಿಣದ ಜೀವಸತ್ವಗಳು, ಖನಿಜಗಳು ಮತ್ತು ಎಲ್ಲಾ ಅಗತ್ಯ ಪೌಷ್ಟಿಕಾಂಶದ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇದು ಪರಿಪೂರ್ಣ ಸಮತೋಲಿತ ಆಹಾರವಾಗಿದೆ.(freepik)
(7 / 8)
ತರಕಾರಿಗಳು: ಪೋಷಕಾಂಶಗಳ ಅತ್ಯಂತ ಕೇಂದ್ರೀಕೃತ ಮೂಲಗಳಾಗಿವೆ. ಅವು ಫೈಬರ್, ವಿಟಮಿನ್ ಸಿ ಮತ್ತು ಕೆ ಯ ಅತ್ಯುತ್ತಮ ಮೂಲವಾಗಿದೆ. ಅಲ್ಲದೆ, ಅಧಿಕ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತವೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯಬೇಕೆಂದರೆ ಪೌಷ್ಟಿಕಾಂಶಯುಕ್ತ ತರಕಾರಿಗಳನ್ನು ಸೇವಿಸಬಹುದು.(freepik)
ಇತರ ಗ್ಯಾಲರಿಗಳು