ಮನೆಯಲ್ಲಿ ಸವಿರುಚಿ ಮೊಸರು ಮಾಡೋಕೆ ಆಗುತ್ತಿಲ್ವಾ? ನಿಮಗೆ ಸಹಾಯ ಮಾಡಬಹುದಾದ 6 ಟಿಪ್ಸ್ ಇಲ್ಲಿವೆ
- ಕೆಲವರಿಗೆ ಮನೆಯಲ್ಲೇ ರುಚಿಯಾದ ಮೊಸರು ತಯಾರಿಸಬೇಕೆಂಬ ಆಸೆ ಇರುತ್ತೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಗಟ್ಟಿ ಹಾಗೂ ರುಚಿಕರವಾದ ಮೊಸಲು ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ಇಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ಈ ಟಿಪ್ಸ್ ಅನುಸರಿಸಿ ನೋಡಿ.
- ಕೆಲವರಿಗೆ ಮನೆಯಲ್ಲೇ ರುಚಿಯಾದ ಮೊಸರು ತಯಾರಿಸಬೇಕೆಂಬ ಆಸೆ ಇರುತ್ತೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಗಟ್ಟಿ ಹಾಗೂ ರುಚಿಕರವಾದ ಮೊಸಲು ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ಇಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ಈ ಟಿಪ್ಸ್ ಅನುಸರಿಸಿ ನೋಡಿ.
(1 / 9)
ಮನೆಯಲ್ಲಿ ಮೊಸರು ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭದಾಯಕವಾಗಿದೆ. ಮನೆಯಲ್ಲೇ ಮೊಸರು ಮಾಡಿಕೊಳ್ಳುವುದು ತುಂಬಾ ಸರಳವಾಗಿದ್ದು, ನಿಮ್ಮ ರುಚಿಯನ್ನು ಹೆಚ್ಚಿಸುತ್ತದೆ.
(2 / 9)
ಸಾಕಷ್ಟು ಮಂದಿ ಪಾಕೆಟ್ ಮೊಸರಿಗಿಂತ ಮನೆಯಲ್ಲೇ ತಯಾರಿಸುವ ಮೊಸರನ್ನು ಇಷ್ಟಪಡುತ್ತಾರೆ. ಕೆನೆಭರಿತ ಮೊಸರನ್ನು ತಿನ್ನುವ ಮಜಾನೇ ಬೇರೆ ಎಂಬುದು ಹಲವರ ವಾದ.
(3 / 9)
ಮೊಸರು ಅನೇಕ ಪಾಕಪದ್ಧತಿಗಳಲ್ಲಿ ಪ್ರಧಾನವಾಗಿದೆ. ಇದು ರುಚಿಕರವಾದದ್ದು ಮಾತ್ರವಲ್ಲದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಬಯಾಟಿಕ್‌ಗಳು ಸೇರಿದಂತೆ ಹೆಚ್ಚಿನ ಆರೋಗ್ಯ ಪ್ರಯೋಜನೆಯ ಪೋಷಕಾಂಶಗಳಿರುತ್ತವೆ.
(4 / 9)
ನೀವು ಮನೆಯಲ್ಲಿ ಮೊಸರು ಮಾಡಲು ಸಾಕಷ್ಟು ಸರ್ಕಸ್ ಮಾಡುತ್ತಿದ್ದರೆ, ನಿಮ್ಮ ವಿಧಾನವನ್ನು ಸುಧಾರಿಸಲು ಬಯಸಿದ್ದರೆ ನಿಮಗಾಗಿ ಒಂದಿಷ್ಟು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.
(5 / 9)
ಯಾವುದೇ ಪೋಷಕಾಂಶಗಳನ್ನು ಬೇರ್ಪಡಿಸಿದೆ ಇರುವ ಅಥವಾ ಗಟ್ಟಿಹಾಲನ್ನು ಮೊಸರು ಮಾಡಲು ಬಳಸಬೇಕು. ಗಟ್ಟಿ ಮೊಸರನ್ನು ಮಾಡಲು ನೀವು ನಿರೀಕ್ಷಿಸಿದ್ದರೆ ಹಾಲನ್ನು 43 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚೆನ್ನಾಗಿ ಕುದಿಸಿದ ನಂತರ ತಣ್ಣಗಾಗಲು ಬಿಡಬೇಕು.
(6 / 9)
ಕಾಯಿಸಿದ ಹಾಲು ಚೆನ್ನಾಗಿ ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಮೊಸರು ಸೇರಿಸಬೇಕು. ಸಾಮಾನ್ಯವಾಗಿ 1 ಲೀಟರ್ ಹಾಲಿಗೆ ಒಂದು ಚಟಮ ಮೊಸರನ್ನು ಸೇರಿಸಲಾಗುತ್ತೆ
(7 / 9)
ಸವಿರುಚಿಯಾದ ಮೊಸರು ಮಾಡಲು ಒಂದು ಟೀ ಚಮಚ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಬಹುದು. ಗಟ್ಟಿಯಾದ ಮೊಸರನ್ನು ಇದು ಉತ್ತೇಜಿಸುತ್ತದೆ.
(8 / 9)
ಸರಿಯಾಗಿ ಮೊಸರು ಆಗಲು ಪಾತ್ರೆಯಲ್ಲಿನ ಹಾಲನ್ನು ಬೆಚ್ಚಿನ ವಾತಾವರಣದಲ್ಲಿ ಇಡಬೇಕು. ಒಂದು ವೇಳೆ ತಾಪಮಾನದ ಕೊರತೆ ಇದ್ದರೆ ಪಾತ್ರೆಯನ್ನು ಒಂದು ಟವೆಲ್‌ನಲ್ಲಿ ಸುತ್ತಿಡಬಹುದು
ಇತರ ಗ್ಯಾಲರಿಗಳು