Shani: ಈ ರಾಶಿಯವರ ಆರೋಗ್ಯ, ವೈವಾಹಿಕ ಜೀವನದ ಮೇಲೆ ಶನಿಯ ವಕ್ರದೃಷ್ಟಿ
ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಶನಿಯು 2023ರ ಜನವರಿ 17ರಂದು ಕುಂಭ ರಾಶಿ ಪ್ರವೇಶಿಸಿದ್ದು, 2025ರ ಮಾರ್ಚ್ ವರೆಗೂ ಅಲ್ಲಿಯೇ ಇರುತ್ತಾನೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸುವ ರಾಶಿ ಯಾವುದು ಎಂದು ನೋಡೋಣ.
(1 / 6)
ನವಗ್ರಹ ಪೈಕಿ ಶನಿಗೆ ಹೆದರುವವರೇ ಹೆಚ್ಚು. ಆದರೆ ಎಲ್ಲರಿಗೂ ಶನಿ ಬೆನ್ನು ಹತ್ತುವುದಿಲ್ಲ. ಶನಿ ಸೇರಿದಂತೆ ಯಾವುದೇ ಗ್ರಹಗಳ ಸ್ಥಾನ ಬದಲಾವಣೆಗಳು ಕೆಲ ರಾಶಿಗಳ ಮೇಲೆ ಶುಭ ಪರಿಣಾಮ ಬೀರಿದರೆ ಕೆಲ ರಾಶಿಗಳ ಮೇಲೆ ಅಶುಭ ಪರಿಣಾಮ ಬೀರಬಹುದು.
(2 / 6)
ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಶನಿಯು 2023ರ ಜನವರಿ 17ರಂದು ಕುಂಭ ರಾಶಿ ಪ್ರವೇಶಿಸಿದ್ದು, 2025ರ ಮಾರ್ಚ್ ವರೆಗೂ ಅಲ್ಲಿಯೇ ಇರುತ್ತಾನೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸುವ ರಾಶಿ ಯಾವುದು ಎಂದು ನೋಡೋಣ.
(3 / 6)
ಈ ಸಮಯದಲ್ಲಿ ಶನಿಯ ವಕ್ರದೃಷ್ಟಿ ಬೀರಿರುವುದು ಕನ್ಯಾ ರಾಶಿಯ ಮೇಲೆ. ಅದರಲ್ಲಿಯೂ ವೈವಾಹಿಕ ಜೀವನದಲ್ಲಿ ಕನ್ಯಾ ರಾಶಿಯವರಿಗೆ ಸಮಸ್ಯೆಗಳು ಎದುರಾಗಬಹುದು.
(4 / 6)
ಶನಿಯು ನಿಮ್ಮ ರಾಶಿಯಲ್ಲಿ 6ನೇ ಮನೆಯಲ್ಲಿದ್ದು, ನೀವು ಶುಭ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ದಂಪತಿಗಳ ನಡುವೆ ವಿರಸ, ಭಿನ್ನಾಭಿಪ್ರಾಯ ಸೇರಿದಂತೆ ಇತರ ಸಮಸ್ಯೆಗಳು ಎದುರಾಗಬಹುದು.
(5 / 6)
ಇದಲ್ಲದೇ ನೀವು ಆರೋಗ್ಯದ ವಿಚಾರದಲ್ಲಿಯೂ ತುಂಬಾ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಕೂಡ ಇದೆ.
ಇತರ ಗ್ಯಾಲರಿಗಳು