Boiling & Drinking Milk: ಹಾಲನ್ನು ಹೇಗೆ ಬಿಸಿ ಮಾಡುತ್ತೀರಿ, ಕುಡಿಯುವ ವಿಧಾನ ಹೇಗೆ.. ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ಇದನೊಮ್ಮೆ ಓದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Boiling & Drinking Milk: ಹಾಲನ್ನು ಹೇಗೆ ಬಿಸಿ ಮಾಡುತ್ತೀರಿ, ಕುಡಿಯುವ ವಿಧಾನ ಹೇಗೆ.. ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ಇದನೊಮ್ಮೆ ಓದಿ

Boiling & Drinking Milk: ಹಾಲನ್ನು ಹೇಗೆ ಬಿಸಿ ಮಾಡುತ್ತೀರಿ, ಕುಡಿಯುವ ವಿಧಾನ ಹೇಗೆ.. ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ಇದನೊಮ್ಮೆ ಓದಿ

  • ಕ್ಯಾಲ್ಸಿಯಂ ಅಂಶ ಹೇರಳವಾಗಿರುವ ಹಾಲು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ. ಆದರೆ ಹಾಲನ್ನು ಕಾಯಿಸುವಾಗಲೀ, ಕುಡಿಯುವಾಗ ಆಗಲೀ ನಾವು ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಡಬೇಡಕು. ಅದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಹೇರಳವಾಗಿದೆ. ಪ್ರತಿದಿನ ಕನಿಷ್ಠ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು. ಮಕ್ಕಳಿಗೆ 2 ಅಥವಾ 3 ಗ್ಲಾಸ್‌ ಹಾಲು ನೀಡಿ.    
icon

(1 / 6)

ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಹೇರಳವಾಗಿದೆ. ಪ್ರತಿದಿನ ಕನಿಷ್ಠ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು. ಮಕ್ಕಳಿಗೆ 2 ಅಥವಾ 3 ಗ್ಲಾಸ್‌ ಹಾಲು ನೀಡಿ.    (unsplash)

ಹಸಿ ಹಾಲು ಸೂಕ್ಷ್ಮಾಣುಜೀವಿಗಳನ್ನು ಹೊಂದಿರುತ್ತದೆ. ಹಾಲನ್ನು ಹಾಗೇ ಸೇವಿಸಿದರೆ ಆರೋಗ್ಯಕ್ಕೆ ಅಪಾಯ. ಹಸಿ ಹಾಲು ಕುಡಿಯುವುದರಿಂದ ಅತಿಸಾರ, ಹೊಟ್ಟೆನೋವು ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಪಾಶ್ಚರೀಕರಣ ಮಾಡಿದ ಹಾಲನ್ನು ನೇರವಾಗಿ ಕುಡಿಯಬಹುದು. 
icon

(2 / 6)

ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬಿಸಿ ಹಾಲು ತುಂಬಾ ಒಳ್ಳೆಯದು. ಇದು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಉತ್ತಮ ನಿದ್ದೆ ಬರುತ್ತದೆ. ನೀವು ಇದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಬಹುದು. 
icon

(3 / 6)

ಹಾಲು ಸೇವಿಸಿದರೆ ತೂಕ ಹೆಚ್ಚಾಗುತ್ತೆ ಎನ್ನುವುದು ಸುಳ್ಳು. ಆದರೆ ನೀವು ಕೆನೆ ತೆಗೆದ ಹಾಲನ್ನು ಕುಡಿಯಬೇಕು. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬೇಕಾದರೆ ಹಾಲಿಗೆ ಸಕ್ಕರೆ ಸೇರಿಸಬೇಡಿ. ಬದಲಿಗೆ ದಾಲ್ಚಿನ್ನಿ ಪುಡಿ ಸೇರಿಸಿ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 
icon

(4 / 6)

ಹಾಲು ಸೇವಿಸಿದರೆ ತೂಕ ಹೆಚ್ಚಾಗುತ್ತೆ ಎನ್ನುವುದು ಸುಳ್ಳು. ಆದರೆ ನೀವು ಕೆನೆ ತೆಗೆದ ಹಾಲನ್ನು ಕುಡಿಯಬೇಕು. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬೇಕಾದರೆ ಹಾಲಿಗೆ ಸಕ್ಕರೆ ಸೇರಿಸಬೇಡಿ. ಬದಲಿಗೆ ದಾಲ್ಚಿನ್ನಿ ಪುಡಿ ಸೇರಿಸಿ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. (Freepik)

ಅಷ್ಟೇ ಅಲ್ಲ, ಹಾಲನ್ನು ಬಹಳ ಹೆಚ್ಚು ತಾಪಮಾನದಲ್ಲಿ ಕಾಯಿಸಬಾರದು. ಹಾಲನ್ನು ಕಾಯಿಸುವಾಗ ಆಗ್ಗಾಗ್ಗೆ ಕಲಕಬೇಕು. ಹಾಲು ಕಾಯಿಸಲು ಮೈಕ್ರೋವೇವ್‌ ಅವನ್‌ ಬಳಸಬೇಡಿ.
icon

(5 / 6)

ಅಷ್ಟೇ ಅಲ್ಲ, ಹಾಲನ್ನು ಬಹಳ ಹೆಚ್ಚು ತಾಪಮಾನದಲ್ಲಿ ಕಾಯಿಸಬಾರದು. ಹಾಲನ್ನು ಕಾಯಿಸುವಾಗ ಆಗ್ಗಾಗ್ಗೆ ಕಲಕಬೇಕು. ಹಾಲು ಕಾಯಿಸಲು ಮೈಕ್ರೋವೇವ್‌ ಅವನ್‌ ಬಳಸಬೇಡಿ.(Pixabay)

ಹಾಲನ್ನು ಪದೇ ಪದೆ ಕಾಯಿಸಿದರೆ ಅದರಲ್ಲಿನ ಪೋಷಕಾಂಶಗಳು ನಾಶವಾಗುತ್ತದೆ. ನೀವು ಡೈರಿಯಿಂದ ಕೊಂಡು ತಂದ ಹಾಲನ್ನು ಹೆಚ್ಚು ಬಿಸಿ ಮಾಡಿ ಕುಡಿದರೆ ಅದರ ಕಿಂಚಿತ್ತೂ ಪ್ರಯೋಜನ ನಿಮಗೆ ದೊರೆಯುವುದಿಲ್ಲ. ಏಕೆಂದರೆ ಪ್ಯಾಕ್‌ ಮಾಡುವ ಮುನ್ನ ಡೈರಿಯಲ್ಲೇ ಹಾಲನ್ನು ಪಾಶ್ಚರೀಕರಣ ಮಾಡಿರುತ್ತಾರೆ. ಅದನ್ನು ಮನೆಗೆ ತಂದು ಮತ್ತೆ ಮತ್ತೆ ಕಾಯಿಸಿದರೆ ಅದರಲ್ಲಿನ ಪೋಷಕಾಂಶಗಳು ಇಲ್ಲದಂತಾಗುತ್ತದೆ. 
icon

(6 / 6)

ಇತರ ಗ್ಯಾಲರಿಗಳು