HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್ ಅನುಸರಿಸಿ
- How to Book hsrp Karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಎಚ್‌ಎಸ್‌ಆರ್‌ಪಿ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ ಎಂದು ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.
- How to Book hsrp Karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಎಚ್‌ಎಸ್‌ಆರ್‌ಪಿ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ ಎಂದು ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.
(1 / 11)
How to Book hsrp karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವರಿಗೆ ಬೇಕಾದ ಸ್ಲಾಟ್‌ಗಳು ದೊರಕುತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.
(2 / 11)
HSRP karnataka online: ಹಂತ 1- ಮೊದಲು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ. ಅಲ್ಲಿ ಬುಕ್ ಎಚ್‌ಎಸ್‌ಆರ್‌ಪಿ ಲಿಂಕ್ ಕ್ಲಿಕ್ ಮಾಡಿ. ಪೂರ್ತಿ ಹೆಸರು, ಇಮೇಲ್ ವಿಳಾಸ, ರಾಜ್ಯ, ವಾಹನ ನೋಂದಣಿ ಸಂಖ್ಯೆ, ಮೊಬೈಲ್, ಜಿಲ್ಲೆ ಆಯ್ಕೆ ಮಾಡಿಕೊಳ್ಳಿ. ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
(3 / 11)
ಹಂತ 2: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನಿಮ್ಮ ವಾಹನದ ಬ್ರಾಂಡ್ ಆಯ್ಕೆ ಮಾಡಿಕೊಳ್ಳಿ. ದ್ವಿಚಕ್ರವಾಹನಕ್ಕೆ 320-380 ರೂ.ವರೆಗೆ ಮತ್ತು ಹೈ ಎಂಡ್ ದ್ವಿಚಕ್ರವಾಹನಗಳಿಗೆ 400-500 ರೂಪಾಯಿ ಶುಲ್ಕ ಇರುತ್ತದೆ. ನಾಲ್ಕು ಚಕ್ರದ ವಾಹನಗಳಿಗೆ 400-500 ರೂಪಾಯಿ ಇರುತ್ತದೆ. ನೀಡಲಾದ ಆಯ್ಕೆಗಳಲ್ಲಿ ನಿಮ್ಮ ಕಾರು ಅಥವಾ ಬೈಕ್‌ನ ಬ್ರಾಂಡ್ ಯಾವುದೆಂದು ಸೆಲೆಕ್ಟ್ ಮಾಡಿ. ಅಥೆರ್, ಬಜಾಜ್ ಬೆನೆಲಿ, ಮಾರುತಿ ಸುಜುಕಿ, ಹೋಂಡಾ, ಹೀರೋ ಮಹೀಂದ್ರ ಸೇರಿದಂತೆ ವಿವಿಧ ಕಂಪನಿಗಳ ಬ್ರಾಂಡ್ ವಿವರ ಲಭ್ಯವಿರುತ್ತದೆ.
(4 / 11)
ಬ್ರಾಂಡ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ https://www.orderyourhsrp.com/ ಹೊಸ ಲಿಂಕ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು "ಆರ್ಡರ್ ಯುವರ್ ಎಚ್‌ಎಸ್‌ಆರ್‌ಪಿ" ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವವರು ಟ್ರ್ಯಾಕ್ ಎಚ್‌ಎಸ್‌ಆರ್‌ಪಿ, ರಿ ಶೆಡ್ಯೂಲ್ ಅಪಾಯಿಂಟ್‌ಮೆಂಟ್ ಇತ್ಯಾದಿ ಆಯ್ಕೆಗಳನ್ನು ಗಮನಿಸಬಹುದು.
(5 / 11)
ಇಲ್ಲಿ ನೀವು ವಾಹನ ನೋಂದಣಿ ರಾಜ್ಯ, ಎಚ್‌ಎಸ್‌ಆರ್‌ಪಿ ಆರ್ಡರ್ ಟೈಪ್, ವಾಹನ ನೋಂದಣಿ ಸಂಖ್ಯೆ, ವಾಹನ ಎಂಜಿನ್ ಸಂಖ್ಯೆ, ವಾಹನ ಛಾಸಿ ಸಂಖ್ಯೆ, ಪಿನ್‌ಕೋಡ್, ಫಿಟ್ ಮಾಡುವ ಸ್ಥಳ (ಡೀಲರ್ ಲೊಕೆಷನ್ ಮತ್ತು ಮನೆಗೆ ಡೆಲಿವರಿ) ಆಯ್ಕೆಗಳನ್ನು ಭರ್ತಿ ಮಾಡಬೇಕು. ಬಹುತೇಕ ಸಂದರ್ಭಗಳಲ್ಲಿ ಹೋಮ್ ಡೆಲಿವರಿ ಆಯ್ಕೆಗಳು ದೊರಕುವುದಿಲ್ಲ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಎಚ್‌ಟಿ ಕನ್ನಡದ ವರದಿಗಾರ ಪ್ರಯತ್ನಿಸಿದಾಗ "ಈ ಸ್ಥಳದಲ್ಲಿ ಮನೆಗೆ ಎಚ್‌ಎಸ್‌ಆರ್‌ಪಿ ಡೆಲಿವರಿ ಲಭ್ಯವಿಲ್ಲ" ಎಂದಿತ್ತು. ಇಷ್ಟು ಕಾಲಂಗಳನ್ನು ಭರ್ತಿ ಮಾಡಿದ ಬಳಿಕ ವೇರಿಫೈ ಮತ್ತು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ವಾಹನ್ ವೆಬ್‌ಸೈಟ್‌ನಲ್ಲಿರುವ ವಿವರಕ್ಕೆ ನೀವು ನಮೂದಿಸಿರುವ ವಿವರಗಳು ಮ್ಯಾಚ್ ಆದರೆ ಮುಂದಿನ ಹಂತ ಓಪನ್ ಆಗುತ್ತದೆ.
(6 / 11)
ಇದಾದ ಬಳಿಕ ನಿಮ್ಮ ಅದೃಷ್ಟ ಚೆನ್ನಾಗಿಲ್ಲದೆ ಇದ್ದರೆ ಟೆಕ್ನಿಕಲ್ ಸಮಸ್ಯೆ ಅಥವಾ ಸರ್ವರ್ ಸಮಸ್ಯೆಯಿಂದ ಮುಂದಿನ ಪುಟ ಲೋಡ್ ಆಗದೆ ಇರಬಹುದು. ಅದೃಷ್ಟ ಚೆನ್ನಾಗಿದ್ದರೆ ಇದಾದ ಬಳಿಕ ಡೀಲರ್ ಲೊಕೆಷನ್ ಆಯ್ಕೆ ಬರುತ್ತದೆ. ನಿಮಗೆ ಹತ್ತಿರದ ಡೀಲರ್ ಲೊಕೆಷನ್ ಆಯ್ಕೆ ಮಾಡಿಕೊಳ್ಳಬಹುದು. ಕೆಲವೊಂದು ವಾಹನ ಕಂಪನಿಗಳಿಗೆ ಇನ್ನೊಂದೆರಡು ದಿನ ಟೆಕ್ನಿಕಲ್ ಸಮಸ್ಯೆ ಮುಂದುವರೆಯುವ ನಿರೀಕ್ಷೆಯಿದೆ ಎಂದು ಶೋರೂಂ ಮೂಲಗಳು ತಿಳಿಸಿವೆ.
(7 / 11)
ಫಿಟ್‌ಮೆಂಟ್ ಲೊಕೆಷನ್ ಆಯ್ಕೆ ಮಾಡಿಕೊಳ್ಳುವ ಹಂತವಿದು. ಸದ್ಯ ಒಂದೆರಡು ತಿಂಗಳಿಗೆ ಬಹುತೇಕ ಎಲ್ಲಾ ಲೊಕೆಷನ್‌ಗಳು ಫುಲ್ ಆಗಿದೆ. ಶನಿವಾರ ಮತ್ತು ಭಾನುವಾರದ ಸ್ಲಾಟ್‌ಗಳಂತೂ ಮುಂದಿನ ಹಲವು ತಿಂಗಳುಗಳ ಕಾಲ ಬುಕ್ಕಿಂಗ್ ಆಗಿವೆ.
(8 / 11)
ಸ್ಲಾಟ್ ಬುಕ್ಕಿಂಗ್ ಮಾಡಿದ ಬಳಿಕ ನೋಂದಣಿ ದಿನಾಂಕ, ವಾಹನ ಟೈಪ್, ವಾಹನ ಕ್ಲಾಸ್, ಇಂಧನ, ಎಂಜಿನ್, ವಾಹನ ಮಾಲೀಕರ ಹೆಸರು, ಬಿಲ್ಲಿಂಗ್ ರಾಜ್ಯ ಇತ್ಯಾದಿ ವಿವರ ನಮೂದಿಸಬೇಕು.
(9 / 11)
ಅಂತಿಮ ಹಂತದಲ್ಲಿ ಬಿಲ್ಲಿಂಗ್ ವಿಳಾಸ ನಮೂದಿಸಬೇಕು. ಮಾಹಿತಿ ನಮೂದಿಸುವಾಗ ಹೆಚ್ಚು ತಡಮಾಡಲು ಹೋಗಬೇಡಿ. ಏಕೆಂದರೆ, ಈಗಾಗಲೇ ನೀವು ಟಿಕ್ ಮಾಡಿರುವ ಸ್ಲಾಟ್ ನೀವು ಅಂತಿಮ ಹಂತಕ್ಕೆ ಬರುವ ವೇಳೆಗೆ "ಲಭ್ಯವಿಲ್ಲ" ಎಂಬ ವಿವರ ದೊರಕಬಹುದು. ಈ ರೀತಿ ಸ್ಲಾಟ್ ಆಯ್ಕೆ ಮಾಡಿಕೊಂಡ ಬಳಿಕ ಆ ಸ್ಲಾಟ್ ಲಾಕ್ ಆಗದೆ "ಲಭ್ಯವಿಲ್ಲ" ಎಂದು ಬರುವುದು ಈ ವೆಬ್‌ಸೈಟ್‌ನ ಕೆಟ್ಟ ಪ್ರೋಗ್ರಾಮಿಂಗ್‌ಗೆ ಉದಾಹರಣೆಯೂ ಹೌದು. ಮುಂದಿನ ಹಂತದಲ್ಲಿ ನಿಮಗೆ ಸ್ಲಾಟ್ ನಿಗದಿಪಡಿಸಿರುವ ಮಾಹಿತಿ ದೊರಕುತ್ತದೆ. ಆ ರಿಸಿಪ್ಟ್ ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಅದರ ಫೋಟೋ ತೆಗೆದುಕೊಳ್ಳಿ. ನೆಟ್‌ವರ್ಕ್, ಸರ್ವರ್ ಉತ್ತಮವಾಗಿದ್ದರೆ ಆನ್‌ಲೈನ್ ಮೂಲಕ ಫಟಾಫಟ್ ಎಂದು ಎಚ್‌ಎಚ್‌ಆರ್‌ಪಿ ನಂಬರ್‌ಪ್ಲೆಟ್‌ಗೆ ಅರ್ಜಿ ಸಲ್ಲಿಸಬಹುದು.
(11 / 11)
ನಿಗದಿಗೊಳಿಸಿದ ದಿನದಂದು ನಂಬರ್‌ಪ್ಲೇಟ್ ಅಳವಡಿಸಲು ಹೋಗಲು ಸಾಧ್ಯವಾಗದೆ ಇದ್ದರೆ ಬೇರೆದಿನಕ್ಕೆ ರಿಶೆಡ್ಯೂಲ್ ಮಾಡಲು ಕೂಡ ಅವಕಾಶವಿದೆ. ಸದ್ಯ ಸ್ಲಾಟ್ ಬುಕ್ಕಿಂಗ್ ಮಾಡಲು ಕೆಲವೇ ದಿನಗಳು ಬಾಕಿ ಇರುವುದರಿಂದ ಆನ್‌ಲೈನ್‌ನಲ್ಲಿ ಆಗಾಗ ತಾಂತ್ರಿಕ ತೊಂದರೆಗಳು ಕಾಣಸಿಗುತ್ತವೆ. ಹೆಚ್ಚು ಜನದಟ್ಟಣೆ ಇರದ ಬೆಳಗ್ಗೆ ಅಥವಾ ರಾತ್ರಿಯ ಸಮಯದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಹೆಚ್ಚು ತೊಂದರೆಯಿಲ್ಲದೆ ಸುಸೂತ್ರವಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯಬಹುದು.
ಇತರ ಗ್ಯಾಲರಿಗಳು