Hunsur Hanuma Jayanti: ಹುಣಸೂರು ಹನುಮ ಜಯಂತಿಯಲ್ಲಿ ಅಯೋಧ್ಯ ರಾಮಮಂದಿರ: ಭರ್ಜರಿ ಮೆರವಣಿಗೆ, ಕಲಾ ತಂಡಗಳ ಭಾಗಿ: ಹೀಗಿತ್ತು ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hunsur Hanuma Jayanti: ಹುಣಸೂರು ಹನುಮ ಜಯಂತಿಯಲ್ಲಿ ಅಯೋಧ್ಯ ರಾಮಮಂದಿರ: ಭರ್ಜರಿ ಮೆರವಣಿಗೆ, ಕಲಾ ತಂಡಗಳ ಭಾಗಿ: ಹೀಗಿತ್ತು ಸಡಗರ

Hunsur Hanuma Jayanti: ಹುಣಸೂರು ಹನುಮ ಜಯಂತಿಯಲ್ಲಿ ಅಯೋಧ್ಯ ರಾಮಮಂದಿರ: ಭರ್ಜರಿ ಮೆರವಣಿಗೆ, ಕಲಾ ತಂಡಗಳ ಭಾಗಿ: ಹೀಗಿತ್ತು ಸಡಗರ

  • ಮೈಸೂರು ಜಿಲ್ಲೆ ಹುಣಸೂರು ನಗರದಲ್ಲಿ ಹನುಮ ಜಯಂತಿ ಜೋರಾಗಿಯೇ ಇರುತ್ತದೆ. ಹಿಂದೊಮ್ಮೆ ಭಾರೀ ಗಲಾಟೆಗೆ ಕಾರಣವಾದ ನಂತರ ಪೊಲೀಸ್‌ ಭದ್ರತೆಯ ನಡುವೆ ಹನುಮ ಜಯಂತಿ ಜರುಗುತ್ತದೆ. ಈ ಬಾರಿ ಮೆರವಣಿಗೆಯಲ್ಲಿ ಕಲಾ ತಂಡಗಳ ಜತೆಗೆ ಅಯೋಧ್ಯ ರಾಮ ಮಂದಿರದ ಮಾದರಿಯೂ ಗಮನ ಸೆಳಯಿತು. ಸರ್ವ ಪಕ್ಷ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಿತ್ತು ಆ ಸಡಗರದ ಚಿತ್ರ ನೋಟ..

ಹುಣಸೂರಿನಲ್ಲಿ ಮಂಗಳವಾರ ನಡೆದ ಹನುಮಜಯಂತಿ ಕಾರ್ಯಕ್ರಮ ಬೃಹತ್‌ ಹನುಮ ಮೂರ್ತಿ, ವಿವಿಧ ಕಲಾ ತಂಡಗಳು, ಡಮರುಗದೊಂದಿಗೆ ತ್ರಿಶೂಲ ಸಹಿತ ನಾನಾ ಕಲಾ ಪ್ರಕಾರಗಳಿಂದ ಗಮನ ಸೆಳೆಯಿತು.
icon

(1 / 7)

ಹುಣಸೂರಿನ ಹನುಮ ಜಯಂತಿ ಮೆರವಣಿಗೆಯಲ್ಲಿ ಗಮನ ಸೆಳೆದ ಹುಲಿ ವೇಷ, ದುರುಮುರುಗಿ ಕಲಾವಿದರು.
icon

(2 / 7)

ಹುಣಸೂರಿನಲ್ಲಿ ಮಂಗಳವಾರ ನಡೆದ ಹನುಮ ಜಯಂತಿ ಮೆರವಣಿಗೆಯಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿ ಗಮನ ಸೆಳಯಿತು.
icon

(3 / 7)

ಹುಣಸೂರಿನಲ್ಲಿ ಹನುಮಜಯಂತಿ ಅಂಗವಾಗಿ ನಡೆದ ಭಾರೀ ಮೆರವಣಿಗೆಗೆ ಸ್ಥಳೀಯ ಶಾಸಕ ಹರೀಶ್‌ಗೌಡ, ಮುಖಂಡರು, ಧರ್ಮಗುರುಗಳು ಚಾಲನೆ ನೀಡಿದರು.
icon

(4 / 7)

ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವರಾದ ಸಿ.ಎಚ್‌.ವಿಜಯಶಂಕರ್‌ ಹಾಗೂ ಎಚ್‌.ಪಿ. ಮಂಜುನಾಥ್‌ ಚಾಲನೆ ನೀಡಿದರು.
icon

(5 / 7)

ಹುಣಸೂರಿನ ವಿವಿಧ ಬಡಾವಣೆಗಳಲ್ಲಿ ಭಾರೀ ಪೊಲೀಸ್‌ ಭದ್ರತೆ ನಡುವೆ ಹನುಮಜಯಂತಿ ಮೆರವಣಿಗೆ ನಡೆಸಲಾಯಿತು.
icon

(6 / 7)

ಹುಣಸೂರಿನಲ್ಲಿ ಹನುಮ ಜಯಂತಿ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಪಥಸಂಚಲನವೂ ನಡೆಯಿತು.
icon

(7 / 7)

ಇತರ ಗ್ಯಾಲರಿಗಳು