ರಾಯರ ಆರಾಧನಾ ಸಪ್ತಾಹ ಮಹೋತ್ಸವದ ಮೊದಲ ದಿನ ಏನೇನು ನಡೆಯಿತು, ಇಲ್ಲಿದೆ ಸಚಿತ್ರ ವರದಿ
ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಎಂದರೆ ರಾಯರ ಭಕ್ತರಿಗೆಲ್ಲ ಸಂಭ್ರಮ, ಸಡಗರ. ಆರಾಧನಾ ಸಪ್ತಾಹದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಹೀಗೆ ಹಲವು ಕಾರ್ಯಕ್ರಮಗಳು ನಡೆಯುವುದು ವಾಡಿಕೆ. ಮೊದಲ ದಿನದ ಸಚಿತ್ರ ವರದಿ ಇಲ್ಲಿದೆ.
(1 / 6)
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ರನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಮಂಗಳವಾರ (ಆ.29) ಚಾಲನೆ ನೀಡಿದರು. ಇದು ಸಪ್ತಾಹ ಕಾರ್ಯಕ್ರಮವಾಗಿದ್ದು ಸೆಪ್ಟೆಂಬರ್ 4ರ ತನಕ ನಡೆಯುತ್ತದೆ.
(2 / 6)
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದ ಶ್ರೀ ಸುಬುಧೇಂದ್ರ ಶ್ರೀಪಾದರು.
(5 / 6)
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಭಾಗವಾಗಿ ಒಂಟೆಗಳಿಗೂ ಪೂಜೆ ಸಲ್ಲಿಸಿದ ಶ್ರೀ ಸುಬುಧೇಂದ್ರ ತೀರ್ಥರು.
ಇತರ ಗ್ಯಾಲರಿಗಳು