Ayodhya Airport: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ನಾಳೆ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ಧಾಣಕ್ಕೆ ಸಂಬಂಧಿಸಿದ 10 ವಿಶೇಷ ಅಂಶಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya Airport: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ನಾಳೆ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ಧಾಣಕ್ಕೆ ಸಂಬಂಧಿಸಿದ 10 ವಿಶೇಷ ಅಂಶಗಳು ಹೀಗಿವೆ

Ayodhya Airport: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ನಾಳೆ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ಧಾಣಕ್ಕೆ ಸಂಬಂಧಿಸಿದ 10 ವಿಶೇಷ ಅಂಶಗಳು ಹೀಗಿವೆ

ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ಇರಿಸಲಾಗಿದೆ. ಈ ವಿಮಾನ ನಿಲ್ದಾಣವನ್ನು ನಾಳೆ (ಡಿ.30) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ಧಾಣವು ರಾಮಾಯಣ ಯುಗದ ಕಲೆ ಸಂಸ್ಕೃತಿಗಳನ್ನು ಬಿಂಬಿಸುವ ರೀತಿಯಲ್ಲಿ ರೂಪುಗೊಳ್ಳುತ್ತಿದ್ದು, ಆಕರ್ಷಕ ಸಚಿತ್ರ ವರದಿ ಇಲ್ಲಿದೆ.

ಅಯೋಧ್ಯಾ ನಗರವನ್ನು ರಾಮಾಯಣ ಯುಗದ ಚಿತ್ರಣ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗುತ್ತಿದ್ದು, ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ (ಜ.22)ಕ್ಕೆ ಮೊದಲು ಕೆಲವು ಮೂಲಸೌಕರ್ಯಗಳನ್ನು ಸರ್ಕಾರ ಲೋಕಾರ್ಪಣೆ ಮಾಡುತ್ತಿದೆ. ಅಯೋಧ್ಯಾ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ, ವಿಮಾನ ನಿಲ್ಧಾಣಕ್ಕೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ. 
icon

(1 / 10)

ಅಯೋಧ್ಯಾ ನಗರವನ್ನು ರಾಮಾಯಣ ಯುಗದ ಚಿತ್ರಣ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗುತ್ತಿದ್ದು, ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ (ಜ.22)ಕ್ಕೆ ಮೊದಲು ಕೆಲವು ಮೂಲಸೌಕರ್ಯಗಳನ್ನು ಸರ್ಕಾರ ಲೋಕಾರ್ಪಣೆ ಮಾಡುತ್ತಿದೆ. ಅಯೋಧ್ಯಾ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ, ವಿಮಾನ ನಿಲ್ಧಾಣಕ್ಕೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ. (PTI)

ಪ್ರಧಾನ ಮಂತ್ರಿಯವರ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳವಾಗಿರುವ ದೃಶ್ಯದ ಫೋಟೋ ಇದು.
icon

(2 / 10)

ಪ್ರಧಾನ ಮಂತ್ರಿಯವರ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳವಾಗಿರುವ ದೃಶ್ಯದ ಫೋಟೋ ಇದು.(HT_PRINT / PTI)

ಅಯೋಧ್ಯೆಯ ನೂತನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. 
icon

(3 / 10)

ಅಯೋಧ್ಯೆಯ ನೂತನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. (ANI )

ಅಯೋಧ್ಯೆಯ ನೂತನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಯೋಧ್ಯಾ ನಗರದ ಕೇಂದ್ರಭಾಗದಿಂದ 15 ಕಿ.ಮೀ. ದೂರದಲ್ಲಿದೆ. 
icon

(4 / 10)

ಅಯೋಧ್ಯೆಯ ನೂತನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಯೋಧ್ಯಾ ನಗರದ ಕೇಂದ್ರಭಾಗದಿಂದ 15 ಕಿ.ಮೀ. ದೂರದಲ್ಲಿದೆ. (ANI )

ಮೇಲಿರುವ ಚಿತ್ರದಲ್ಲಿ ವಿಮಾನ ನಿಲ್ಧಾಣದ ಒಳಭಾಗದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ನಡೆಸುತ್ತಿರುವ ದೃಶ್ಯವಿದೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ಇದ್ದು, ವಾರ್ಷಿಕವಾಗಿ 10 ಲಕ್ಷ ವಿಮಾನ ಯಾತ್ರಿಕರಿಗೆ ಸೌಲಭ್ಯ ಒದಗಿಸುವಷ್ಟು ಸಾಮರ್ಥ್ಯ ಹೊಂದಿದೆ. 
icon

(5 / 10)

ಮೇಲಿರುವ ಚಿತ್ರದಲ್ಲಿ ವಿಮಾನ ನಿಲ್ಧಾಣದ ಒಳಭಾಗದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ನಡೆಸುತ್ತಿರುವ ದೃಶ್ಯವಿದೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ಇದ್ದು, ವಾರ್ಷಿಕವಾಗಿ 10 ಲಕ್ಷ ವಿಮಾನ ಯಾತ್ರಿಕರಿಗೆ ಸೌಲಭ್ಯ ಒದಗಿಸುವಷ್ಟು ಸಾಮರ್ಥ್ಯ ಹೊಂದಿದೆ. (ANI )

ಮೇಲಿನ ಚಿತ್ರದಲ್ಲಿರುವುದು ವಿಮಾನ ನಿಲ್ದಾಣ ಸಿಬ್ಬಂದಿ ಸ್ವಚ್ಛತೆ ಮಾಡಿ ಉದ್ಘಾಟನೆಗೆ ಸಜ್ಜಾಗುತ್ತಿರುವ ದೃಶ್ಯ. ಅಯೋಧ್ಯೆಯ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದಲ್ಲಿ ವಿವಿಧ ರೀತಿಯ ಸುಸ್ಥಿರ ಸೌಲಭ್ಯಗಳಿದ್ದು, ವಿಶೇಷವೆನಿಸುವ ಮೇಲ್ಛಾವಣಿ, ಎಲ್‌ಇಡಿ ದೀಪಾಲಂಕಾರ, ಮಳೆನೀರು ಕೊಯ್ಲು ಸಂಗ್ರಹ, ನೀರಿನ ಕಾರಂಜಿಗಳು, ಕೊಳಚೆ ನೀರು ಸಂಸ್ಕರಣಾ ಘಟಕ, ಸೌರ ವಿದ್ಯುತ್ ಘಟಕ, ಗೃಹ 5 ಸ್ಟಾರ್ ರೇಟಿಂಗ್‌ನ ಅತ್ಯಾಧುನಿಕ ಸವಲತ್ತುಗಳನ್ನು ಒದಗಿಸಲಾಗಿದೆ. 
icon

(6 / 10)

ಮೇಲಿನ ಚಿತ್ರದಲ್ಲಿರುವುದು ವಿಮಾನ ನಿಲ್ದಾಣ ಸಿಬ್ಬಂದಿ ಸ್ವಚ್ಛತೆ ಮಾಡಿ ಉದ್ಘಾಟನೆಗೆ ಸಜ್ಜಾಗುತ್ತಿರುವ ದೃಶ್ಯ. ಅಯೋಧ್ಯೆಯ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದಲ್ಲಿ ವಿವಿಧ ರೀತಿಯ ಸುಸ್ಥಿರ ಸೌಲಭ್ಯಗಳಿದ್ದು, ವಿಶೇಷವೆನಿಸುವ ಮೇಲ್ಛಾವಣಿ, ಎಲ್‌ಇಡಿ ದೀಪಾಲಂಕಾರ, ಮಳೆನೀರು ಕೊಯ್ಲು ಸಂಗ್ರಹ, ನೀರಿನ ಕಾರಂಜಿಗಳು, ಕೊಳಚೆ ನೀರು ಸಂಸ್ಕರಣಾ ಘಟಕ, ಸೌರ ವಿದ್ಯುತ್ ಘಟಕ, ಗೃಹ 5 ಸ್ಟಾರ್ ರೇಟಿಂಗ್‌ನ ಅತ್ಯಾಧುನಿಕ ಸವಲತ್ತುಗಳನ್ನು ಒದಗಿಸಲಾಗಿದೆ. (ANI )

ಅಯೋಧ್ಯೆಯ ವಿಮಾನ ನಿಲ್ದಾಣದ ಗೋಡೆಯಲ್ಲಿ ರಾಮಾಯಣದ ಕಥಾ ಚಿತ್ರಗಳನ್ನು ಬಿಡಲಾಗುತ್ತಿದೆ. ಈ ವಿಮಾನ ನಿಲ್ದಾಣದ ರನ್‌ವೇಯು ಎ-321/ ಬಿ 737 ಮಾದರಿ ವಿಮಾನಗಳ ಕಾರ್ಯನಿರ್ವಹಣೆಗೆ ಹೇಳಿಮಾಡಿಸಿದಂತೆ ಇದೆ. ಉದ್ಘಾಟನಾ ಸಂಚಾರವನ್ನು ದೆಹಲಿ ಏರ್‌ಪೋರ್ಟ್‌ನಿಂದ ಅಯೋಧ್ಯಾ ವಿಮಾನ ನಿಲ್ದಾಣಕ್ಕೆ ಇಂಡಿಗೋ ನಡೆಸಲಿದೆ. ಇದರ ವಾಣಿಜ್ಯ ಸೇವೆಯು ಜನವರಿ 6ರಿಂದ ಶುರುವಾಗಲಿದೆ.
icon

(7 / 10)

ಅಯೋಧ್ಯೆಯ ವಿಮಾನ ನಿಲ್ದಾಣದ ಗೋಡೆಯಲ್ಲಿ ರಾಮಾಯಣದ ಕಥಾ ಚಿತ್ರಗಳನ್ನು ಬಿಡಲಾಗುತ್ತಿದೆ. ಈ ವಿಮಾನ ನಿಲ್ದಾಣದ ರನ್‌ವೇಯು ಎ-321/ ಬಿ 737 ಮಾದರಿ ವಿಮಾನಗಳ ಕಾರ್ಯನಿರ್ವಹಣೆಗೆ ಹೇಳಿಮಾಡಿಸಿದಂತೆ ಇದೆ. ಉದ್ಘಾಟನಾ ಸಂಚಾರವನ್ನು ದೆಹಲಿ ಏರ್‌ಪೋರ್ಟ್‌ನಿಂದ ಅಯೋಧ್ಯಾ ವಿಮಾನ ನಿಲ್ದಾಣಕ್ಕೆ ಇಂಡಿಗೋ ನಡೆಸಲಿದೆ. ಇದರ ವಾಣಿಜ್ಯ ಸೇವೆಯು ಜನವರಿ 6ರಿಂದ ಶುರುವಾಗಲಿದೆ.(ANI)

ವಿಮಾನ ನಿಲ್ದಾಣದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಕಳೆದ ಶುಕ್ರವಾರ (ಡಿ.22) ಅಯೋಧ್ಯೆಯ ವಿಮಾನ ನಿಲ್ಧಾಣದಲ್ಲಿ ಏರ್‌ಫೋರ್ಸ್‌ನ ವಿಮಾನ ಪ್ರಾಯೋಗಿಕವಾಗಿ ಬಂದಿಳಿದು, ರನ್‌ವೇಯ ಪರಿಶೀಲನೆ ನಡೆಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣ ಉದ್ಘಾಟಿಸುವುದಕ್ಕೆ ಸರಿಯಾಗಿ ಏಳು ದಿನ ಮೊದಲು ಪ್ರಾಯೋಗಿಕ ಪರೀಕ್ಷೆ ನಡೆಯಿತು.
icon

(8 / 10)

ವಿಮಾನ ನಿಲ್ದಾಣದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಕಳೆದ ಶುಕ್ರವಾರ (ಡಿ.22) ಅಯೋಧ್ಯೆಯ ವಿಮಾನ ನಿಲ್ಧಾಣದಲ್ಲಿ ಏರ್‌ಫೋರ್ಸ್‌ನ ವಿಮಾನ ಪ್ರಾಯೋಗಿಕವಾಗಿ ಬಂದಿಳಿದು, ರನ್‌ವೇಯ ಪರಿಶೀಲನೆ ನಡೆಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣ ಉದ್ಘಾಟಿಸುವುದಕ್ಕೆ ಸರಿಯಾಗಿ ಏಳು ದಿನ ಮೊದಲು ಪ್ರಾಯೋಗಿಕ ಪರೀಕ್ಷೆ ನಡೆಯಿತು.(ANI)

 ಅಯೋಧ್ಯೆ ವಿಮಾನ ನಿಲ್ದಾಣದ ಕಾಮಗಾರಿಯ ಮೊದಲ ಹಂತದಲ್ಲಿ 2200 ಚದರ ಮೀಟರ್ ರನ್‌ ವೇ ನಿರ್ಮಾಣವಾಗಿದೆ. ಟರ್ಮಿನಲ್ ಕಟ್ಟಡವು 65,000 ಚದರ ಅಡಿ ವಿಸ್ತೀರ್ಣವಿದೆ. ಇಲ್ಲಿ ಬೋಯಿಂಗ್ 737, ಏರ್‌ಬಸ್‌ 319, 320 ಮತ್ತು ಇತರೆ ಸಣ್ಣ ವಿಮಾನ ಬಂದಿಳಿಯಬಹುದು. ಹಾರಾಟಕ್ಕೆ ಈ ರನ್‌ವೇಯನ್ನು ಬಳಸಬಹುದು. ಗಂಟೆಗೆ ಎರಡರಿಂದ ಮೂರು ವಿಮಾನ ಹಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. 
icon

(9 / 10)

 ಅಯೋಧ್ಯೆ ವಿಮಾನ ನಿಲ್ದಾಣದ ಕಾಮಗಾರಿಯ ಮೊದಲ ಹಂತದಲ್ಲಿ 2200 ಚದರ ಮೀಟರ್ ರನ್‌ ವೇ ನಿರ್ಮಾಣವಾಗಿದೆ. ಟರ್ಮಿನಲ್ ಕಟ್ಟಡವು 65,000 ಚದರ ಅಡಿ ವಿಸ್ತೀರ್ಣವಿದೆ. ಇಲ್ಲಿ ಬೋಯಿಂಗ್ 737, ಏರ್‌ಬಸ್‌ 319, 320 ಮತ್ತು ಇತರೆ ಸಣ್ಣ ವಿಮಾನ ಬಂದಿಳಿಯಬಹುದು. ಹಾರಾಟಕ್ಕೆ ಈ ರನ್‌ವೇಯನ್ನು ಬಳಸಬಹುದು. ಗಂಟೆಗೆ ಎರಡರಿಂದ ಮೂರು ವಿಮಾನ ಹಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. (PTI)

ಅಯೋಧ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯ ಎರಡನೇ ಹಂತದಲ್ಲಿ 3700 ಚದರ ಮೀಟರ್ ರನ್‌ವೇ ರಚನೆಯಾಗಿದ್ದು, ಟರ್ಮಿನಲ್ ಬಿಲ್ಡಿಂಗ್ 5 ಲಕ್ಷ ಚದರ ಅಡಿ ಇದೆ. ಇಲ್ಲಿ ಬೋಯಿಂಗ್‌ 787 ಮತ್ತು 777 ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯುತ್ತವೆ. ಅದೇ ರೀತಿ ಹಾರಲಿವೆ.
icon

(10 / 10)

ಅಯೋಧ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯ ಎರಡನೇ ಹಂತದಲ್ಲಿ 3700 ಚದರ ಮೀಟರ್ ರನ್‌ವೇ ರಚನೆಯಾಗಿದ್ದು, ಟರ್ಮಿನಲ್ ಬಿಲ್ಡಿಂಗ್ 5 ಲಕ್ಷ ಚದರ ಅಡಿ ಇದೆ. ಇಲ್ಲಿ ಬೋಯಿಂಗ್‌ 787 ಮತ್ತು 777 ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯುತ್ತವೆ. ಅದೇ ರೀತಿ ಹಾರಲಿವೆ.(PTI)


ಇತರ ಗ್ಯಾಲರಿಗಳು