3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಇಂದು, 1947 ರಿಂದ 2024ರ ತನಕ ಭಾರತದ ಪ್ರಧಾನ ಮಂತ್ರಿಗಳಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಇಂದು, 1947 ರಿಂದ 2024ರ ತನಕ ಭಾರತದ ಪ್ರಧಾನ ಮಂತ್ರಿಗಳಿವರು

3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಇಂದು, 1947 ರಿಂದ 2024ರ ತನಕ ಭಾರತದ ಪ್ರಧಾನ ಮಂತ್ರಿಗಳಿವರು

ನರೇಂದ್ರ ಮೋದಿ ಅವರು ಇಂದು (ಜೂನ್ 9) ಮೂರನೆ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದೇ ನಿಮಿತ್ತವಾಗಿ 1947 ರಿಂದ 2024ರ ತನಕ ಭಾರತದ ಪ್ರಧಾನ ಮಂತ್ರಿಗಳಾದವರ ಸಚಿತ್ರ ವರದಿ ಗಮನಿಸೋಣ.

ಭಾರತದ 18ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಇಂದು (ಜೂನ್ 9) ರಾತ್ರಿ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ವ್ಯಕ್ತಿಗತವಾಗಿ 15ನೇ ಪ್ರಧಾನ ಮಂತ್ರಿಯಾಗಿದ್ದು, 2014 ರಿಂದ ಸತತ ಮೂರನೇ ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 
icon

(1 / 7)

ಭಾರತದ 18ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಇಂದು (ಜೂನ್ 9) ರಾತ್ರಿ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ವ್ಯಕ್ತಿಗತವಾಗಿ 15ನೇ ಪ್ರಧಾನ ಮಂತ್ರಿಯಾಗಿದ್ದು, 2014 ರಿಂದ ಸತತ ಮೂರನೇ ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. (ANI)

ನರೇಂದ್ರ ಮೋದಿ ಅವರಿಗೂ ಮೊದಲು ಡಾ.ಮನಮೋಹನ್ ಸಿಂಗ್ (ಬಲ ಚಿತ್ರ) ಅವರು ಎರಡು ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು. 2004 ಮೇ 22 ರಿಂದ 2014ರ ಮೇ 26 ರ ತನಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅವರು ಮುನ್ನಡೆಸಿದ್ದರು. ಅದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುನ್ನಡೆಸಿದ್ದರು. ಅವರು 1996 ಮೇ 16 ರಿಂದ ಜೂನ್ 1ರ ತನಕ ಮತ್ತು 1998ರ ಮಾರ್ಚ್‌ 19 ರಿಂದ 2004 ಮೇ 22 ರ ತನಕ ಪ್ರಧಾನ ಮಂತ್ರಿಯಾಗಿದ್ದರು.
icon

(2 / 7)

ಕರ್ನಾಟಕದ ಹಿರಿಯ ಮುತ್ಸದ್ದಿ ರಾಜಕಾರಣಿ ಎಚ್ ಡಿ ದೇವೇಗೌಡ ಅವರು 1996ರ ಜೂನ್ 1 ರಿಂದ 1997ರ ಏಪ್ರಿಲ್ 21ರ ತನಕ ಪ್ರಧಾನಮಂತ್ರಿಯಾಗಿದ್ದರು. ಅವರ ನಂತರ ಇಂದರ್ ಕುಮಾರ್ ಗುಜ್ರಾಲ್ (ಐಕೆ ಗುಜ್ರಾಲ್) ಅವರು 1997 ರ ಏಪ್ರಿಲ್ 21 ರಿಂದ 1998ರ ಮಾರ್ಚ್‌ 19ರ ತನಕ ಪ್ರಧಾನ ಮಂತ್ರಿಯಾಗಿದ್ದರು.
icon

(3 / 7)

ಪಿ.ವಿ.ನರಸಿಂಹ ರಾವ್ (ಬಲ ಚಿತ್ರ) ಅವರು 1991 ರ ಜೂನ್ 21 ರಿಂದ 1996ರ ಮೇ 16 ರ ತನಕ, ಚಂದ್ರಶೇಖರ್ (ಮಧ್ಯ ಚಿತ್ರ) ಅವರು 1990ರ ನವೆಂಬರ್ 10 ರಿಂದ 1991ರ ಜೂನ್ 21ರ ತನಕ, ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ.ಸಿಂಗ್‌) ಅವರು 1989ರ ಡಿಸೆಂಬರ್‌ 2 ರಿಂದ 1990ರ ನವೆಂಬರ್ 10ರ ತನಕ ಪ್ರಧಾನ ಮಂತ್ರಿಯಾಗಿದ್ದರು.
icon

(4 / 7)

ರಾಜೀವ್ ಗಾಂಧಿ (ಬಲ ಚಿತ್ರ) ಅವರು 1984ರ ಅಕ್ಟೋಬರ್‌ 31 ರಿಂದ 1989ರ ಡಿಸೆಂಬರ್ 2 ರ ತನಕ ಪ್ರಧಾನ ಮಂತ್ರಿಯಾಗಿದ್ದರು. ಅದಕ್ಕೂ ಮೊದಲು 1966ರ ಜನವರಿ 24 ರಿಂದ 1977ರ ಮಾರ್ಚ್ 24ರ ತನಕ ಮತ್ತು 1980ರ ಜನವರಿ 14 ರಿಂದ 1984ರ ಅಕ್ಟೋಬರ್ 31ರ ತನಕ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದರು.
icon

(5 / 7)

ಚರಣ್ ಸಿಂಗ್ ( ಬಲ ಚಿತ್ರ) ಅವರು 1979ರ ಜುಲೈ 28 ರಿಂದ 1980ರ ಜನವರಿ 14 ರ ತನಕ, ಮೊರಾರ್ಜಿ ದೇಸಾಯಿ ಅವರು 1977ರ ಮಾರ್ಚ್ 24 ರಿಂದ 1979ರ ಜುಲೈ 28ರ ತನಕ, ಲಾಲ್ ಬಹಾದೂರ್ ಶಾಸ್ತ್ರಿ ಅವರು 1964 ರ ಜೂನ್ 9 ರಿಂದ 1966ರ ಜನವರಿ 11 ರ ತನಕ ಪ್ರಧಾನ ಮಂತ್ರಿಗಳಾಗಿದ್ದರು.
icon

(6 / 7)

ಗುಲ್ಜಾರಿಲಾಲ್ ನಂದ ಅವರು 1964ರ ಮೇ 27 ರಿಂದ ಜೂನ್ 9ರ ತನಕ ಮತ್ತು 1966ರ ಜನವರಿ 11 ರಿಂದ ಜನವರಿ 24ರ ತನಕ ಪ್ರಧಾನ ಮಂತ್ರಿಯಾಗಿದ್ದರು. ಅದಕ್ಕೂ ಮೊದಲು ಜವಾಹರಲಾಲ್ ನೆಹರೂ ಅವರು 1947ರ ಆಗಸ್ಟ್ 15 ರಿಂದ 1964ರ ಮೇ 27ರ ತನಕ ಪ್ರಧಾನ ಮಂತ್ರಿಯಾಗಿದ್ದರು.
icon

(7 / 7)

ಇತರ ಗ್ಯಾಲರಿಗಳು