ಮಹಿಳೆಯರ ಟಿ20 ರ್ಯಾಂಕಿಂಗ್ನಲ್ಲಿ ದೀಪ್ತಿ ಶರ್ಮಾ ಭಾರಿ ಜಿಗಿತ; ಮಂಧಾನ ಅಗ್ರ-5ರೊಳಗೆ ಪ್ರವೇಶ
- ICC Women's Cricket Rankings: ಐಸಿಸಿ ಮಹಿಳಾ ಟಿ20 ಕ್ರಿಕೆಟ್ನ ಶ್ರೇಯಾಂಕದಲ್ಲಿ ಭಾರತದ ವನಿತೆಯರು ಯಾವೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡಿ.
- ICC Women's Cricket Rankings: ಐಸಿಸಿ ಮಹಿಳಾ ಟಿ20 ಕ್ರಿಕೆಟ್ನ ಶ್ರೇಯಾಂಕದಲ್ಲಿ ಭಾರತದ ವನಿತೆಯರು ಯಾವೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡಿ.
(1 / 8)
ಭಾರತ-ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಟಿ20 ಸರಣಿಯ ಪ್ರದರ್ಶನವು ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಹಲವಾರು ಬದಲಾವಣೆ ಕಂಡಿದೆ. ಭಾರತೀಯ ಆಟಗಾರ್ತಿಯರು ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡರ್ ವಿಭಾಗದಲ್ಲಿ ವಿಶ್ವ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ.
(2 / 8)
ದೀಪ್ತಿ ಶರ್ಮಾ ಪ್ರಸ್ತುತ ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ 2 ಬೌಲರ್ ಆಗಿದ್ದಾರೆ. ದೀಪ್ತಿ ಟಿ20 ಬೌಲರ್ಸ್ ಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡಿದ್ದು, ನಾಲ್ಕು ಸ್ಥಾನ ಮೇಲೇರಿ 2ನೇ ಸ್ಥಾನ ಪಡೆದಿದ್ದಾರೆ.
(3 / 8)
ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ದೀಪ್ತಿ 31ನೇ ಸ್ಥಾನದಲ್ಲಿದ್ದಾರೆ. ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ 3ನೇ ಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರ ಸ್ಥಾನ 27 ಆಗಿದೆ. ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ 6ನೇ ಸ್ಥಾನದಲ್ಲಿದ್ದಾರೆ.(BCCI Women-X)
(4 / 8)
ಐಸಿಸಿ ಮಹಿಳಾ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂಧಾನ 6ನೇ ಸ್ಥಾನದಲ್ಲಿದ್ದಾರೆ. ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಂಧಾನ 4ನೇ ಸ್ಥಾನದಲ್ಲಿದ್ದಾರೆ. ಟಿ20 ಶ್ರೇಯಾಂಕದಲ್ಲಿ ಮಂಧಾನಾ ಅವರಿಗಿಂತ ಮೇಲಿನ ಭಾರತದ ಮತ್ತೊಬ್ಬರಿಲ್ಲ.
(5 / 8)
ಜೆಮಿಮಾ ರೋಡ್ರಿಗಸ್ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರ ಸ್ಥಾನ 35 ಆಗಿದೆ.
(6 / 8)
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ.
(7 / 8)
ಶೆಫಾಲಿ ವರ್ಮಾ ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ನಲ್ಲಿ 18ನೇ ಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ನಲ್ಲಿ 53 ನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು