ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20ಐಗೆ ಭಾರತದ ಸಂಭಾವ್ಯ XI: ಗೆಲುವಿನ ಕಾಂಬಿನೇಷನ್ ಬದಲಿಸ್ತಾರಾ ಸೂರ್ಯಕುಮಾರ್?
- Indias Likely XI: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಗೆಲುವಿನ ಕಾಂಬಿನೇಷನ್ ಬದಲಿಸ್ತಾರಾ ಸೂರ್ಯಕುಮಾರ್ ಎಂಬುದು ಕಾದುನೋಡಬೇಕಿದೆ.
- Indias Likely XI: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಗೆಲುವಿನ ಕಾಂಬಿನೇಷನ್ ಬದಲಿಸ್ತಾರಾ ಸೂರ್ಯಕುಮಾರ್ ಎಂಬುದು ಕಾದುನೋಡಬೇಕಿದೆ.
(1 / 9)
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ 61 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಡರ್ಬನ್ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಭಾರತ, ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ದ್ವಿತೀಯ ಟಿ20ಯನ್ನೂ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಸಿದ್ಧತೆ ನಡೆಸಿದೆ.(HT_PRINT)
(2 / 9)
ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಸಂಜು ಸ್ಯಾಮ್ಸನ್ ಸಿಡಿಸಿದ ಶತಕದ ನೆರವಿನಿಂದ ತನ್ನ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 147 ರನ್ಗಳಿಗೆ ಆಲೌಟ್ ಆಯಿತು. ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದರು. ಇದರೊಂದಿಗೆ 61 ರನ್ಗಳ ಗೆಲುವಿಗೆ ಕಾರಣರಾದರು.(AFP)
(3 / 9)
ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ (7 ಬೌಂಡರಿ, 10 ಸಿಕ್ಸರ್) 107 ರನ್ ಗಳಿಸಿದ್ದು ಹೊರತುಪಡಿಸಿ ಉಳಿದವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾದರು. ತಿಲಕ್ ವರ್ಮಾ 33 ರನ್ ಗಳಿಸಿದ್ದು ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಸೂರ್ಯ, ಹಾರ್ದಿಕ್, ಅಭಿಷೇಕ್ ರನ್ ಗಳಿಸಲು ವಿಫಲರಾದರು.(AFP)
(4 / 9)
ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದರೂ ಎರಡನೇ ಪಂದ್ಯಕ್ಕೆ ತಂಡದಲ್ಲಿ ಒಂದೆರಡು ಬದಲಾವಣೆ ತರಲು ಭಾರತ ಚಿಂತಿಸಿದೆ. ಗೆಲುವಿನ ಕಾಂಬಿನೇಷನ್ ಬದಲಾಯಿಸಲು ಇಷ್ಟಪಡದಿದ್ದರೂ ತಂಡದಲ್ಲಿರುವ ಪೈಪೋಟಿಯ ಕಾರಣ ಅನಿವಾರ್ಯವಾಗಿ ಬದಲಾವಣೆ ಮಾಡಬೇಕೆಂದು ಟೀಮ್ ಮ್ಯಾನೇಜ್ಮೆಂಟ್ ಚರ್ಚಿಸಿದೆ.(REUTERS)
(5 / 9)
ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಗೆ ಅವಕಾಶ ಇಲ್ಲ. ರಮಣದೀಪ್ ಸಿಂಗ್ ಮತ್ತು ಜಿತೇಶ್ ಶರ್ಮಾ ಅವರು ಈ ಸರಣಿಯಲ್ಲಿ ಒಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ಅದು ಕೂಡ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದರೆ, ರಮಣದೀಪ್ ಮತ್ತು ಜಿತೇಶ್ ತಂಡದಲ್ಲಿ ಸ್ಥಾನ ಪಡೆಯಬಹುದು. (REUTERS)
(6 / 9)
ಆದರೆ, ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆ ನಿರೀಕ್ಷೆ ಮಾಡಬಹುದು. ಯಶ್ ದಯಾಳ್ ಮತ್ತು ವಿಜಯ್ ಕುಮಾರ್ ವೈಶಾಕ್ ಅವಕಾಶಗಳಿಗಾಗಿ ಕಾಯುತ್ತಿದ್ದು, ಇಬ್ಬರಲ್ಲಿ ಬಹುಶಃ ವೈಶಾಕ್ ಅವರಿಗೆ ಆಡಲು ಅವಕಾಶ ಸಿಗಬಹುದು. ಆದರೆ, ಒಂದು ಪಂದ್ಯದ ನಂತರ ಆಟಗಾರನನ್ನು ಡ್ರಾಪ್ ಮಾಡುವುದು ಕಷ್ಟವಾದರೂ ಎಲ್ಲಾ ಆಟಗಾರರನ್ನು ಪರೀಕ್ಷೆಗೆ ಒಳಪಡಬೇಕಾದ ಕಾರಣ ಅವೇಶ್ ಖಾನ್ ಅವರು ವೈಶಾಕ್‌ಗೆ ದಾರಿ ಮಾಡಿಕೊಡಬಹುದು.(AP)
(7 / 9)
ಅಲ್ಲದೆ, ಗೆಲುವಿನ ತಂಡವನ್ನೇ ಕಣಕ್ಕಿಳಿಸಿ ಸರಣಿ ಗೆದ್ದರೆ, ಕೊನೆಯ ಪಂದ್ಯದಲ್ಲಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಹೀಗಾಗಿ, ಸೂರ್ಯಕುಮಾರ್ ಯಾದವ್ ಮತ್ತು ವಿವಿಎಸ್ ಲಕ್ಷ್ಮಣ್ ನಿರ್ಧಾರ ಏನಿರುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.(AFP)
(8 / 9)
ಎರಡನೇ ಟಿ20ಐಗೆ ಭಾರತದ ಸಂಭಾವ್ಯ XI: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಅವೇಶ್ ಖಾನ್/ವಿಜಯ್ ಕುಮಾರ್ ವೈಶಾಕ್.(AP)
(9 / 9)
ಭಾರತ ಮತ್ತು ಸೌತ್ ಆಫ್ರಿಕಾ ಎರಡನೇ ಟಿ20 ಪಂದ್ಯವು ಸಂಜೆ 7.30 ಆರಂಭವಾಗಿತ್ತು. ಆದರೆ ಮೊದಲ ಪಂದ್ಯ ರಾತ್ರಿ 8.30ಕ್ಕೆ ಶುರುವಾಗಿತ್ತು. ಎರಡನೇ ಟಿ20I ಪಂದ್ಯವನ್ನು ಸ್ಪೋರ್ಟ್ಸ್ 18 1 ಮತ್ತು ಸ್ಪೋರ್ಟ್ಸ್ 18 1 HD ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಪಂದ್ಯ ರಾತ್ರಿ 8:30 IST ಕ್ಕೆ ಪ್ರಾರಂಭವಾಗುತ್ತದೆ.(AFP)
ಇತರ ಗ್ಯಾಲರಿಗಳು