ಇಂದು, ನಾಳೆ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮ, ಸಡಗರ, ಇಲ್ಲಿದೆ ಆಕರ್ಷಕ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು, ನಾಳೆ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮ, ಸಡಗರ, ಇಲ್ಲಿದೆ ಆಕರ್ಷಕ ಚಿತ್ರನೋಟ

ಇಂದು, ನಾಳೆ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮ, ಸಡಗರ, ಇಲ್ಲಿದೆ ಆಕರ್ಷಕ ಚಿತ್ರನೋಟ

ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಇಂದು (ನವೆಂಬರ್ 25) ಶುರುವಾಗುತ್ತಿದ್ದು, ನಾಳೆ ಸಂಪನ್ನವಾಗಲಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕಡೆ ಸೋಮವಾರ ಈ ರೈತರ ಹಬ್ಬ ನಡೆಯುತ್ತಿದ್ದು, ಕಡಲೆಕಾಯಿ ಪರಿಷೆಯ ಆಕರ್ಷಕ ಚಿತ್ರನೋಟ ಇಲ್ಲಿದೆ. (ಚಿತ್ರ ವರದಿ- ಎಚ್ ಮಾರುತಿ, ಬೆಂಗಳೂರು)

ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಇಂದು ಮತ್ತು ನಾಳೆ ನಡೆಯುತ್ತಿರುವುದಾದರೂ, ಶುಕ್ರವಾರದಿಂದಲೇ ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್ ತನಕವೂ ರಸ್ತೆ ಬದಿ ಕಡಲೆಕಾಯಿ ಮತ್ತು ಆಟಸಾಮಗ್ರಿ, ಹೆಣ್ಮಕ್ಕಳ ಅಲಂಕಾರ ವಸ್ತುಗಳ ಮಾರಾಟ, ತಿಂಡಿ ತಿನಿಸುಗಳ ಮಾರಾಟ ಜೋರಾಗಿದೆ. 
icon

(1 / 10)

ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಇಂದು ಮತ್ತು ನಾಳೆ ನಡೆಯುತ್ತಿರುವುದಾದರೂ, ಶುಕ್ರವಾರದಿಂದಲೇ ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್ ತನಕವೂ ರಸ್ತೆ ಬದಿ ಕಡಲೆಕಾಯಿ ಮತ್ತು ಆಟಸಾಮಗ್ರಿ, ಹೆಣ್ಮಕ್ಕಳ ಅಲಂಕಾರ ವಸ್ತುಗಳ ಮಾರಾಟ, ತಿಂಡಿ ತಿನಿಸುಗಳ ಮಾರಾಟ ಜೋರಾಗಿದೆ. (MRT)

ದೊಡ್ಡಗಣಪತಿ ದೇವಸ್ಥಾನದಲ್ಲಿ ಇಂದು (ನವೆಂಬರ್ 25) ಬೆಳಗ್ಗೆ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಗಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸ್ಥಳೀಯ ಶಾಸಕರು, ಸಂಸದರು ಮತ್ತು ಇತರೆ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. 
icon

(2 / 10)

ಕಡಲೆಕಾಯಿ ವ್ಯಾಪಾರಕ್ಕೆ ಬಂದವರು ಕಡಲೆಯ ನಡುವೆ ಗಣಪತಿ ಮತ್ತು ಇತರೆ ದೇವರುಗಳನ್ನು ಇರಿಸಿಕೊಂಡು ವ್ಯಾಪಾರ ಆರಂಭಿಸಿದ್ದು, ಜನರನ್ನು ಆಕರ್ಷಿಸತೊಡಗಿದೆ. ಈ ಬಾರಿ ಶೇಂಗಾ ಬೆಳೆಗಾರರು ಪಾಲಿಕೆಗೆ ಯಾವುದೇ ಸುಂಕ ಪಾವತಿಸದೇ ತಾವು ಬೆಳೆದುದನ್ನು ಮಾರಾಟ ಮಾಡುತ್ತಿದ್ದಾರೆ. 
icon

(3 / 10)

ಕಡಲೆಕಾಯಿ ಪರಿಷೆಯ ಕಾರಣ ಬುಲ್ ಟೆಂಪಲ್ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ರಾಮಕೃಷ್ಣ ಆಶ್ರಮ ವೃತ್ತದಿಂದ ಬ್ಯೂಗಲ್‌ರಾಕ್, ಬುಲ್ ಟೆಂಪಲ್ ರಸ್ತೆ, ದೊಡ್ಡಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ರಸ್ತೆಗಳ ಬದಿಗಳಲ್ಲಿ ರಾಶಿರಾಶಿ ಕಡಲೆಕಾಯಿ, ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಇತರೆ ಸಾಮಗ್ರಿಗಳ ವ್ಯಾಪಾರ ಜೋರಾಗಿದೆ.
icon

(4 / 10)

ಬೆಂಗಳೂರು ಗ್ರಾಮಾಂತರ, ಮಾಗಡಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ಇತರೆ ಪ್ರದೇಶಗಳಿಂದ ಕಡಲೆಕಾಯಿಯನ್ನು ತಂದು ಮಾರಾಟ ಮಾಡಲಾಗುತ್ತಿದೆ.
icon

(5 / 10)

ಕರ್ನಾಟಕ ಮಾತ್ರವಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸಹ ಉತ್ತ ಮಳೆ ಬಾರದಿರುವುದರಿಂದ ಈ ಬಾರಿ ಕಡಲೆಕಾಯಿ ಬೆಲೆ ತುಸು ಹೆಚ್ಚಾಗಿದೆ. ಒಂದು ಸೇರು ಕಡಲೆಕಾಯಿಗೆ 50 ರೂ.ಗಳಿಂದ 60 ರೂಗೆ ಮಾರಾಟವಾಗುತ್ತಿದೆ. 
icon

(6 / 10)

ಬೆಂಗಳೂರಿನ ಬಸವನಗುಡಿ ಬಡಾವಣೆ ಅಂದರೆ ಈ ಹಿಂದಿನ ಸುಂಕೇನಹಳ್ಳಿ. ಇದರ ಸುತ್ತಮುತ್ತ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ ಮುಂತಾದ ಹಳ್ಳಿಗಳಿದ್ದವು. ಇಲ್ಲಿ ರೈತರು ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಹುಣ್ಣಿಮೆಯಂದು ಬಸವ ಬಂದು ಕಡಲೆಕಾಯಿ ತಿಂದು ಹೋಗುತ್ತಿತ್ತು.
icon

(7 / 10)

ಒಂದು ದಿನ ಕಾವಲಿದ್ದ ರೈತರು ಈ ಬಸವನನ್ನು ಹಿಡಿಯಲು ಪ್ರಯತ್ನ ಪಟ್ಟರು. ಅದು ವೇಗವಾಗಿ ಗುಡ್ಡ ಏರಿ ಮಾಯವಾಯಿತು.ರೈತರಿಗೆ ಗುಡ್ಡದ ಮೇಲೆ ಬಸವನ ಬೃಹತ್‌ ಕಲ್ಲಿನ ಪ್ರತಿಮೆ ಮಾತ್ರ ಕಾಣಿಸಿತ್ತು.
icon

(8 / 10)

ಅದು ಬೃಹದಾಕಾರದಲ್ಲಿರುವ ಕಾರಣ ದೊಡ್ಡ ಬಸವಣ್ಣ ಎಂಬ ಹೆಸರಿಟ್ಟರು. ಈಶ್ವರನ ವಾಹನ ನಂದಿ ಎಂಬ ಕಾರಣಕ್ಕೆ ಪೂಜಿಸಲು ಶುರುಮಾಡಿದರು. ಶೇಂಗಾ ಬೆಳೆ ಬಂದ ಕೂಡಲೇ ಕಾರ್ತಿಕ ಕಡೆ ಸೋಮವಾರ ಅದನ್ನು ಬಸವನಿಗೆ ಅರ್ಪಿಸಲು ತರುವ ಸಂಪ್ರದಾಯ ಬೆಳೆಯಿತು ಎಂಬುದು ಐತಿಹ್ಯ.
icon

(9 / 10)

ಬಸವನಗುಡಿ ಕಡಲೆಕಾಯಿ ಪರಿಷೆಯ ಸಂಭ್ರಮದ ಒಂದು ನೋಟ. ರಾತ್ರಿ ಹೊತ್ತು ದೀಪಾಲಂಕಾರ ಇರುವ ಕಾರಣ ಹೆಚ್ಚು ಆಕರ್ಷಕವಾಗಿರುತ್ತದೆ. ಜನದಟ್ಟಣೆಯೂ ಹೆಚ್ಚಿರುತ್ತದೆ.
icon

(10 / 10)

ಇತರ ಗ್ಯಾಲರಿಗಳು