Kannada Books: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಓದಬೇಕಾದ ಹತ್ತು ಕನ್ನಡ ಪುಸ್ತಕಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Books: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಓದಬೇಕಾದ ಹತ್ತು ಕನ್ನಡ ಪುಸ್ತಕಗಳು

Kannada Books: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಓದಬೇಕಾದ ಹತ್ತು ಕನ್ನಡ ಪುಸ್ತಕಗಳು

  • ಕನ್ನಡದ ಲೇಖಕರು ಹಾಗೂ ಅವರ ಸಾಹಿತ್ಯ, ಬರೆದ ಹರವು ದೊಡ್ಡದು. ಇದಕ್ಕೆ ಶತಮಾನಗಳ ಇತಿಹಾಸವೇ ಇದೆ. ಸಾಕಷ್ಟು ಪ್ರಭಾವ ಬೀರಿದ ಲೇಖಕರೂ ಇದ್ದಾರೆ. ಹೊಸ ತಲೆಮಾರಿನ ಲೇಖಕರಂತೂ ಭಿನ್ನ ಆಲೋಚನೆಯೊಂದಿಗೆ ಬರೆಯುತ್ತಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಸಮಯದಲ್ಲಿ ನಿಮ್ಮ ಓದಿಗೆ ಪೂರಕವಾಗಲೆಂದು ಹತ್ತು ಕೃತಿಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಓದಿನ ಆಯ್ಕೆ ಮಾತ್ರ ನಿಮ್ಮದು.

ರಾಷ್ಟ್ರಕವಿ ಕುವೆಂಪು ಅವರ ಕೃತಿಗೆಳೆಲ್ಲ ಮೇರು ಕೃತಿಗಳೇ. ಅವರ ಚಿಂತನೆಯ ಪರಿಯೇ ಅಂತಹದ್ದು. ಮಲೆನಾಡಿನ ಸಂಸ್ಕೃತಿ, ಬದುಕನ್ನು ತೆರೆದಿಟ್ಟ ಕಾದಂಬರಿ ಮಲೆಗಳಲ್ಲಿ ಮದುಮಗಳು. ಮೈಸೂರಿನ ಉದಯರವಿ ಪ್ರಕಾಶನ ಇದನ್ನು ಹೊರತಂದಿದೆ. 1967 ರಲ್ಲಿ ಪ್ರಕಟಿತ ಈ ಕಾದಂಬರಿ ಈಗಲೂ ಜನಪ್ರಿಯ.
icon

(1 / 10)

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಭಿನ್ನ ಚಿಂತನೆ, ಬರಹ, ಬದುಕಿನ ಮೂಲಕವೇ ಗಮನ ಸೆಳೆದ ದೇವನೂರ ಮಹದೇವ ಅವರು ದಶಕದ ಹಿಂದೆ ಬರೆದ ಲೇಖನಗಳ ಸಂಗ್ರಹವಿದು. ಸಮ ಸಮಾಜದ ಕನಸಿನೊಂದಿಗೆ ಬರೆದ ಈ ಕೃತಿಯಲ್ಲಿ ಹೊಸ ಚಿಂತನೆಯ ಹರಿವು ಇದೆ. ಬೆಂಗಳೂರಿನ ಅಭಿನವ ಪ್ರಕಾಶನ ಇದನ್ನು ಪ್ರಕಟಿಸಿದೆ.
icon

(2 / 10)

ಕನ್ನಡದ ಚಲಿಸುವ ಕೋಶ ಎಂದೇ ಹೆಸರಾದ ಡಾ.ಶಿವರಾಮಕಾರಂತರು ರಚಿಸಿದ ಒಂಬತ್ತನೆಯ ಕಾದಂಬರಿ ಬೆಟ್ಟದ ಜೀವ. '1943ರಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲೆಯಿಂದ ಪ್ರಕಟಗೊಂಡ ಈ ಕೃತಿ ಹಲವು ಶೈಕ್ಷಣಿಕ ಹಂತಗಳಲ್ಲಿ ಪಠ್ಯಪುಸ್ತಕವಾಗಿ ಇಂದಿಗೂ ತನ್ನ ತಾಜಾತನದಿಂದ ಗಮನ ಸೆಳೆಯುತ್ತಿದೆ. ಹಿಂದಿ ಹಾಗೂ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಬೆಟ್ಟದ ಜೀವ ಎಂಟು ದಶಕಗಳಿಂದ ಚಲಾವಣೆಯಲ್ಲಿದೆ
icon

(3 / 10)

ಕಾದಂಬರಿ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ.ಎಸ್‌.ಎಲ್‌. ಭೈರಪ್ಪ ಅವರ ಬಹು ಚರ್ಚಿತ ಕಾದಂಬರಿಯಿದು. ಮಹಾಭಾರತ ಹಿನ್ನೆಲೆಯಲ್ಲಿ ರಚಿಸಿದ ಈ ಕಾದಂಬರಿ 1979ರಲ್ಲಿಪ್ರಕಟವಾಯಿತು. ಆಗಿನಿಂದಲೂ ಪರ್ವ ಒಂದಿಲ್ಲೊಂದು ರೀತಿ ಚರ್ಚೆಯಲ್ಲಿದೆ. ಬೆಂಗಳೂರಿನ ಸಾಹಿತ್ಯ ಭಂಡಾರ ಇದನ್ನು ಹೊರ ತಂದಿದೆ.
icon

(4 / 10)

ಕನ್ನಡದ ಮಹಿಳಾ ಲೇಖಕಿಯರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸಾರಾ ಅಬೂಬಕರ್‌ ಅವರು ಎಲ್ಲ ಸಂಪ್ರದಾಯಗಳ ಎಲ್ಲೆಗಳನ್ನು ಮೀರಿ ತಮ್ಮದೇ ವಿಭಿನ್ನ ಶೈಲಿಯಿಂದ ಬರವಣಿಗೆ ಮೂಲಕ ಗಮನ ಸೆಳೆದವರು. ಅವರ ಮೊದಲ ಕಾದಂಬರಿಯಾದ ಚಂದ್ರಗಿರಿ ತೀರ ಹೆಚ್ಚು ಓದುಗರನ್ನು ಪಡೆದಿದೆ. ಚಂದ್ರಗಿರಿ ಪ್ರಕಾಶನ ಇದನ್ನು ಹೊರ ತಂದಿದೆ,
icon

(5 / 10)

ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ಛಾಪು ಮೂಡಿಸಿದ ಪೂರ್ಣಚಂದ್ರ ತೇಜಸ್ವಿ ಅವರ ರೋಚಕ ಕಾದಂಬರಿಗಳಲ್ಲಿ ಇದು ಒಂದು. ನಾಲ್ಕು ದಶಕದ ಹಿಂದೆ ಪ್ರಕಟಗೊಂಡ ಚಿದಂಬರ ರಹಸ್ಯ ಈಗಲು ಬಹು ಓದಿನ ಪುಸ್ತಕ. ಇಪ್ಪತ್ತಕ್ಕೂ ಹೆಚ್ಚು ಬಾರಿ ಮುದ್ರಣಗೊಂಡಿದೆ. ಸಾಹಿತ್ಯ ಭಂಡಾರ ಇದನ್ನು ಹೊರ ತಂದಿದೆ. 
icon

(6 / 10)

ಕನ್ನಡದ ಹಿರಿಯ ಲೇಖಕಿ ಗೀತಾ ನಾಗಭೂಷಣ ಕಲಬುರಗಿ ಮಣ್ಣಿನಿಂದ ಬಂದವರು. ಉಪನ್ಯಾಸಕಿಯಾಗಿ ಲೇಖಕಿಯಾಗಿ ದೊಡ್ಡಹೆಸರು ಮಾಡಿದವರು ಅವರ ಹಲವಾರು ಕೃತಿಗಳು ಪ್ರಕಟಗೊಂಡಿದ್ದು ಅದರಲ್ಲಿ ಇತ್ತೀಚಿನ ಬದುಕು ಪ್ರಮುಖವಾದದ್ದು. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಇದನ್ನು  ಸ್ವಪ್ನ ಬುಕ್‌ ಹೌಸ್‌ ಪ್ರಕಟಿಸಿದೆ. 
icon

(7 / 10)

ಕನ್ನಡದ ಯುವ ತಲೆಮಾರಿನ ಪ್ರಭಾವಿ ಲೇಖಕರಲ್ಲಿ ರಹಮತ್‌ ತರಿಕೆರೆ ಪ್ರಮುಖರು. ಅವರ ಬರಹದ ಶೈಲಿಯೇ ಸರಳ ಸುಲಲಿತ. ಕರುನಾಡನ್ನು ಸುತ್ತಿ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ಈ ಲೇಖನಗಳ ಸಂಗ್ರಹದ ಕೃತಿ ನಡೆದಷ್ಟೂ ನಾಡು ಕರ್ನಾಟಕವನ್ನು ತರೆದಿಡುತ್ತದೆ, ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
icon

(8 / 10)

ಯುವ ತಲೆಮಾರಿನ ಲೇಖಕರಲ್ಲಿ ಟಿ.ಎಸ್.ಗೊರವರ ಪ್ರಮುಖರು. ತಮ್ಮದೇ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ತಾವೂ ಬರೆಯುತ್ತಾ, ಹಳಬರು- ಹೊಸಬರು ಎನ್ನದೇ ಎಲ್ಲ ತಲೆಮಾರಿನವರ ಒಡನಾಟದೊಂದಿಗೆ ಗಮನ ಸೆಳೆಯುವ ಗೊರವರ ಅವರ ಕಥಾ ಸಂಕಲನ ಕುದರಿ ಮಾಸ್ತರ. ಹನ್ನೊಂದು ವರ್ಷದ ಹಿಂದೆ ಸಂಗಾತ ಪುಸ್ತಕದಿಂದ ಇದನ್ನು ಪ್ರಕಟಿಸಲಾಗಿದೆ.
icon

(9 / 10)

ಹಿರಿಯ ವಿಮರ್ಶಕ ಕಿ.ರಂ.ನಾಗರಾಜ ಅವರು ಬೇಂದ್ರೆ ಕುರಿತು ಅಧಿಕೃತವಾಗಿ ಮಾತನಾಡಬಲ್ಲರಾಗಿದ್ದರು. ಅವರು ಅದೆಷ್ಟೋ ಶಿಬಿರ, ಕಮ್ಮಟಗಳಲ್ಲಿ ಮಾತನಾಡಿದ ಬೇಂದ್ರೆ ಕುರಿತು ಮಾತುಗಳಿಗೆ ಅಕ್ಷರ ರೂಪ ನೀಡಿದ್ದಾರೆ ಶಿವಮೊಗ್ಗದ ಲೇಖಕಿ ಕೆ.ಅಕ್ಷತಾ ಹುಂಚದಕಟ್ಟೆ. ಅಹಿರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸಿದೆ.
icon

(10 / 10)

ಇತರ ಗ್ಯಾಲರಿಗಳು