ಅನುಬಂಧ ಅವಾರ್ಡ್ಸ್ 2024: ಭಾಗ್ಯಾಗೆ ಮನೆ ಮೆಚ್ಚಿದ ಸೊಸೆ, ವೈಷ್ಣವ್‌ಗೆ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ; ಇನ್ನಾರಿಗೆ ಇನ್ನಾವ ಗೌರವ?
ಕಲರ್ಸ್ ಕನ್ನಡದ ಬಹುನಿರೀಕ್ಷಿತ ಕಾರ್ಯಕ್ರಮ ಅನುಬಂಧ ಅವಾರ್ಡ್ಸ್ 2024, ಶುಕ್ರವಾರದಿಂದ ಮೂರು ದಿನಗಳ ಕಾಲ ಪ್ರಸಾರ ಆರಂಭಿಸಿದೆ. ಭಾನುವಾರದವರೆಗೂ ಕಾರ್ಯಕ್ರಮ ಮುಂದುವರೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
(1 / 15)
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಲಾವಿದರಿಗೆ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. (PC: Colors Kannada)
(2 / 15)
ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಾ ಪಾತ್ರಧಾರಿ ಸುಷ್ಮಾ ರಾವ್‌ಗೆ ತಾರಾ ಅವರಿಂದ ಮನೆ ಮೆಚ್ಚಿದ ಸೊಸೆ ಪ್ರಶಸ್ತಿ.
(3 / 15)
ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಾವೇರಿ ಪಾತ್ರಧಾರಿ ಸುಷ್ಮಾ ನಾಣಯ್ಯಗೆ ಭಾವನಾ ಅವರಿಂದ ಜನ ಮೆಚ್ಚಿದ ಮಂಥರೆ ಪ್ರಶಸ್ತಿ.
(5 / 15)
ಮನೆ ಮೆಚ್ಚಿದ ವಿದೂಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ನಿನಗಾಗಿ ಧಾರಾವಾಹಿ ಬಾಲಾ ಮಾಮ ಪಾತ್ರಧಾರಿ ಸುನಿಲ್ ಕುಮಾರ್.
(6 / 15)
ಕರಿಮಣಿ ಧಾರಾವಾಹಿ ಭರತ್ ಪಾತ್ರಧಾರಿ ರಜನೀಶ್‌ಗೆ ವಿಕ್ರಮ್ ರವಿಚಂದ್ರನ್ ಅವರಿಂದ ಮನೆ ಮೆಚ್ಚಿದ ಸಹೋದರ ಪ್ರಶಸ್ತಿ ಪ್ರದಾನ.
(7 / 15)
ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿಗೆ ರಿಯಲ್ ಲೈಫ್ ಜೋಡಿಯಾದ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರಿಂದ ಡಿಜಿಟಲ್ ಜೋಡಿ ಪ್ರಶಸ್ತಿ.
(8 / 15)
ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್‌ಗೆ ಜನ ಮೆಚ್ಚಿದ ಎಂಟರ್‌ಟೈನರ್ ಅವಾರ್ಡ್ ನೀಡಿದ ಮೇಘನಾ ರಾಜ್ ಸರ್ಜಾ.
(9 / 15)
ಕರಿಮಣಿಯ ಕರ್ಣ ಪಾತ್ರಧಾರಿ ಅಶ್ವಿನ್‌ಗೆ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿ ನೀಡಿ ಶುಭ ಹಾರೈಸಿದ ಹಿರಿಯ ನಟಿ ಶ್ರುತಿ
(10 / 15)
ಈ ಬಾರಿ ಮನೆ ಮೆಚ್ಚಿದ ಅಮ್ಮ ಪ್ರಶಸ್ತಿಯನ್ನು ಇಬ್ಬರು ನಟಿಯರು ಹಂಚಿಕೊಂಡಿದ್ದಾರೆ. ರಾಮಾಚಾರಿ ಧಾರಾವಾಹಿಯ ಜಾನಕಿ ಪಾತ್ರಧಾರಿ ಅಂಜಲಿ ಹಾಗೂ ಶ್ರೀಗೌರಿ ಧಾರಾವಾಹಿ ಮಂಗಳಮ್ಮ ಪಾತ್ರಧಾರಿ ನಂದಿನಿಗೆ ನಟಿ ಶ್ವೇತಾ ಶ್ರೀವಾತ್ಸವ್ ಪ್ರಶಸ್ತಿ ನೀಡಿದ್ದಾರೆ.
(11 / 15)
ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಅವರಿಂದ ಲಕ್ಷ್ಮೀ ಬಾರಮ್ಮ ಕೀರ್ತಿ ಪಾತ್ರಧಾರಿ ತನ್ವಿ ರಾವ್‌ಗೆ ಜನ ಮೆಚ್ಚಿದ ಸ್ಟೈಲ್ ಐಕಾನ್ ಅವಾರ್ಡ್.
(12 / 15)
ಲಕ್ಷ್ಮೀ ಬಾರಮ್ಮ ಧಾರಾವಾಹಿ ವೈಷ್ಣವ್ ಪಾತ್ರಧಾರಿ ಶಮಂತ್ ಬ್ರೋ ಗೌಡಗೆ ಅದಿತಿ ಪ್ರಭುದೇವ ದಂಪತಿಯಿಂದ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ.
(13 / 15)
ನಿನಗಾಗಿ ಧಾರಾವಾಹಿಯ ಉತ್ತಮ ಛಾಯಾಗ್ರಹಣ ಪ್ರಶಸ್ತಿ ಜೀವನ್ ಅವರಿಗೆ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಉತ್ತಮ ಕತೆ, ಚಿತ್ರಕತೆ ಪ್ರಶಸ್ತಿ ವಿಶಾಲಾ ರಾಜ್ ಅವರಿಗೆ ಹಾಗೂ ಕರಿಮಣಿಯ ರಾಜು ಆರ್ಯನ್‌ಗೆ ಉತ್ತಮ ಸಂಕಲನ ಪ್ರಶಸ್ತಿ ದೊರೆತಿದೆ.
(14 / 15)
ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಅವರಿಗೆ ಉತ್ತಮ ಧಾರ್ಮಿಕ ದರ್ಶನ ಪ್ರಶಸ್ತಿ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಉತ್ತಮ ಸಂಕಲನ ಪ್ರಶಸ್ತಿ ಮಲ್ಲೇಶ್ ಅವರಿಗೆ ದೊರೆತಿದೆ.
ಇತರ ಗ್ಯಾಲರಿಗಳು