ಕರ್ನಾಟಕ ನಕ್ಸಲ್‌ ನಿಗ್ರಹ ಘಟಕ: ಬಂದೂಕು ಎತ್ತಲೂ ಸೈ, ಆಹಾರ ಕೊಡಲೂ ರೆಡಿ, ಕಷ್ಟ ಕಾಲದಲ್ಲಿ ಮಲೆನಾಡು ಜನರ ಕೈಹಿಡಿದ ಮಾನವೀಯ ಮುಖಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ನಕ್ಸಲ್‌ ನಿಗ್ರಹ ಘಟಕ: ಬಂದೂಕು ಎತ್ತಲೂ ಸೈ, ಆಹಾರ ಕೊಡಲೂ ರೆಡಿ, ಕಷ್ಟ ಕಾಲದಲ್ಲಿ ಮಲೆನಾಡು ಜನರ ಕೈಹಿಡಿದ ಮಾನವೀಯ ಮುಖಗಳು ಹೀಗಿವೆ

ಕರ್ನಾಟಕ ನಕ್ಸಲ್‌ ನಿಗ್ರಹ ಘಟಕ: ಬಂದೂಕು ಎತ್ತಲೂ ಸೈ, ಆಹಾರ ಕೊಡಲೂ ರೆಡಿ, ಕಷ್ಟ ಕಾಲದಲ್ಲಿ ಮಲೆನಾಡು ಜನರ ಕೈಹಿಡಿದ ಮಾನವೀಯ ಮುಖಗಳು ಹೀಗಿವೆ

  • ಉಡುಪಿ ಜಿಲ್ಲೆ ಕಾರ್ಕಳ ಕೇಂದ್ರಿತ ನಕ್ಸಲ್‌ ನಿಗ್ರಹ ಘಟಕ( ANF) ಈಗ ಎನ್‌ಕೌಂಟರ್‌ ಕಾರಣಕ್ಕೆ ಸುದ್ದಿಯಲ್ಲಿದೆ. ಈ ಘಟಕದ ಪೊಲೀಸರು ಬರೀ ಎನ್‌ಕೌಂಟರ್‌ ಮಾಡುವುದಿಲ್ಲ. ತಮ್ಮ ವ್ಯಾಪ್ತಿಯ ಜನರ ಕಷ್ಟಗಳಿಗೂ ಸ್ಪಂದಿಸುತ್ತಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ದಟ್ಟಾರಣ್ಯದಲ್ಲಿ ನೆಲೆಸಿದ್ದ ತೆಂಗಮಾರು ನಾರಾಯಣಗೌಡ ಎಂಬುವವರ ಮನೆ ಕುಸಿದಾಗ ಎಎನ್‌ಎಫ್‌ ಪೊಲೀಸರು ಮನೆಯನ್ನು ನಿರ್ಮಿಸಿಕೊಟ್ಟಿದ್ದರು.
icon

(1 / 6)

ಸ್ವಂತ ಖರ್ಚಿನಲ್ಲಿ ಮನೆಯನ್ನು ಎಎನ್‌ಎಫ್‌ ಸಿಬ್ಬಂದಿ ನಿರ್ಮಿಸಿಕೊಟ್ಟಾಗ ಅದನ್ನು ಆಗಿನ ಎಸ್ಪಿ ಪ್ರಕಾಶ್‌ ಅಮೃತ್‌ ನಿಕ್ಕಂ ಅವರು ನಾರಾಯಣಗೌಡ ಅವರಿಗೆ ಹಸ್ತಾಂತರಿಸಿದ್ದರು.
icon

(2 / 6)

ಭಾರೀ ಮಳೆಯಿಂದ ಕಾರ್ಕಳ ತಾಲ್ಲೂಕಿನ ನಾರಾಯಣಗೌಡ ಅವರಮನೆ ಬೀಳುವ ಹಂತದಲ್ಲಿತ್ತು. ಇದನ್ನು ಗುರುತಿಸಿ ಎಎನ್‌ಎಫ್‌ ಸಿಬ್ಬಂದಿ ನೆರವಿಗೆ ನಿಂತಿದ್ದರು,.
icon

(3 / 6)

ಮಳೆ ಹಾಗೂ ಇತರೆ ವೈಪರಿತ್ಯದ ಕಾಲದಲ್ಲೂ ಎಎನ್‌ಎಫ್‌ ಸಿಬ್ಬಂದಿ ಸ್ಥಳೀಯರಿಗೆ ಆಹಾರ ನೀಡಿ ನೆರವಾಗಿದ್ದರು
icon

(4 / 6)

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಉದ್ಯೋಗವೂ ಇಲ್ಲದೇ ಹೊರಗೆ ಹೋಗಲು ಆಗದ ಉಡುಪಿ ಭಾಗದ ಕಾಡಿನ ಜನರ ಸಂಕಷ್ಟಗಳಿಗೆ ಎಎನ್‌ಎಫ್‌ ಸಿಬ್ಬಂದಿ ನೆರವಾಗಿ ಆಹಾರ ಸಾಮಗ್ರಿ ವಿತರಿಸಿದ್ದರು.
icon

(5 / 6)

ಹಿರಿಯ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರಂತೂ ನಕ್ಸಲ್‌ ಚಟುವಟಿಕೆ ಬಾಧಿತ ಪ್ರದೇಶಗಳಿಗೆ ಆಗಾಗ ಭೇಟಿ ನೀಡಿ ಸ್ಥಳೀಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದರು.
icon

(6 / 6)

ಇತರ ಗ್ಯಾಲರಿಗಳು