Kartika Deepotsava 2024: ಕಡೆಯ ಕಾರ್ತಿಕದ ಬೆಳಕು: ಕರ್ನಾಟಕದ ದೇಗುಲಗಳಲ್ಲಿ ಸೋಮವಾರದ ದೀಪೋತ್ಸವ
- ಕರ್ನಾಟಕದ ಹಲವು ಭಾಗಗಳಲ್ಲಿ ಸೋಮವಾರದ ಕಾರ್ತಿಕ ಸಡಗರ. ಹಲವರು ಭಕ್ತಿಯಿಂದ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಿದ ಕ್ಷಣಗಳು ಹೀಗಿದ್ದವು.
- ಕರ್ನಾಟಕದ ಹಲವು ಭಾಗಗಳಲ್ಲಿ ಸೋಮವಾರದ ಕಾರ್ತಿಕ ಸಡಗರ. ಹಲವರು ಭಕ್ತಿಯಿಂದ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಿದ ಕ್ಷಣಗಳು ಹೀಗಿದ್ದವು.
(1 / 9)
ಮೈಸೂರು ಮಡಿಕೇರಿ ರಸ್ತೆಯಲ್ಲಿರುವ ಹಿನಕಲ್‌ನ ನನ್ನೇಶ್ವರ ದೇಗುಲದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಕಲ್ಯಾಣಿ ದೀಪೋತ್ಸವ ಗಮನ ಸೆಳಯಿತು. (ಚಿತ್ರ: ರವಿಕೀರ್ತಿಗೌಡ ಮೈಸೂರು)
(2 / 9)
ರಾಯಚೂರು ಜಿಲ್ಲೆಯ ಮಾನ್ವಿ ನಗರದ ಶ್ರೀ ಸಾಯಿಬಾಬಾ ಮತ್ತು ಶ್ರೀ ವೆಂಕಟೇಶ್ವರ್ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಗಮನ ಸೆಳಯಿತು.
(3 / 9)
ತುಮಕೂರು ಜಿಲ್ಲೆಯ ಮಧುಗಿರಿ ಕೊಂಡವಾಡಿ ಚೌಡೇಶ್ವರಿ ದೇವಾಲಯದ ಕಾರ್ತಿಕ ದೀಪೋತ್ಸವ ಅಂಗವಾಗಿ ದೇವರ ಮೆರವಣಿಗೆ ನಡೆಯಿತು,
(4 / 9)
ಕಾರ್ತಿಕ ಮಾಸದ ಪಾವನ ಪರ್ವದ ಅಂಗವಾಗಿ ಧಾರವಾಡದ ಮಹಾತ್ಮ ಬಸವೇಶ್ವರ ನಗರದ ಶಿವಾಲಯದಲ್ಲಿ ಸ್ಥಳೀಯ ನಾಗರಿಕರೊಂದಿಗೆ ಕಾರ್ತಿಕೋತ್ಸವದ ದೀಪೋತ್ಸವದಲ್ಲಿ ಪಾಲ್ಗೊಂಡು ದೀಪ ಬೆಳಗುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಯಿತು.
(5 / 9)
ತುಮಕೂರು ಜಿಲ್ಲೆಯ ಕೊರಟಗೆರೆ ವಡ್ಡಗೆರೆ ಶ್ರೀವೀರನಾಗಮ್ಮ ದೇವಾಲಯದ ಕಾರ್ತಿಕ ದೀಪೋತ್ಸವದಲ್ಲಿ ಸ್ವಾಮೀಜಿ ಹಾಗೂ ಭಕ್ತರು ಭಾಗಿಯಾದರು.
(7 / 9)
ಉತ್ತರ ಕನ್ನಡ ಜಿಲ್ಲೆಯ ಕತಗಾಲದ ಶ್ರೀ ಶಂಭುಲಿಂಗ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದೀಪೋತ್ಸವ ನಡೆಸಲಾಯಿತು,
(8 / 9)
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ.
ಇತರ ಗ್ಯಾಲರಿಗಳು