Team India: ವಿಶ್ವಕಪ್ಗೂ ಮುನ್ನ ಏಷ್ಯಾಕಪ್ನಲ್ಲಿ ಭಾರತ ತಂಡಕ್ಕೆ ಕಾಡಿದ್ದ 5 ಪ್ರಶ್ನೆಗಳಿಗೆ ಸಿಕ್ತು ಉತ್ತರ
- Team India: ಪ್ರಸಕ್ತ ಸಾಲಿನ ಏಷ್ಯಾಕಪ್‌ನಿಂದ ಭಾರತ ಟ್ರೋಫಿಯ ಹೊರತಾಗಿ ಹಲವು ಸಕಾರಾತ್ಮಕ ಅಂಶಗಳನ್ನು ಹೊತ್ತು ವಿಶ್ವಕಪ್‌ಗೆ ಹೆಜ್ಜೆ ಇಡಲು ಸಜ್ಜಾಗಿದೆ. ಅನೇಕ ಅಜ್ಞಾತ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದೆ. ಅದೇನು ಎಂಬುದನ್ನು ಈ ಮುಂದೆ ತಿಳಿಯೋಣ.
- Team India: ಪ್ರಸಕ್ತ ಸಾಲಿನ ಏಷ್ಯಾಕಪ್‌ನಿಂದ ಭಾರತ ಟ್ರೋಫಿಯ ಹೊರತಾಗಿ ಹಲವು ಸಕಾರಾತ್ಮಕ ಅಂಶಗಳನ್ನು ಹೊತ್ತು ವಿಶ್ವಕಪ್‌ಗೆ ಹೆಜ್ಜೆ ಇಡಲು ಸಜ್ಜಾಗಿದೆ. ಅನೇಕ ಅಜ್ಞಾತ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದೆ. ಅದೇನು ಎಂಬುದನ್ನು ಈ ಮುಂದೆ ತಿಳಿಯೋಣ.
(1 / 9)
ಸೆಪ್ಟೆಂಬರ್ 17ರಂದು ಭಾನುವಾರ ಕೊಲಂಬೊದ ಪ್ರೇಮದಾಸ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ, 8ನೇ ಟ್ರೋಫಿಗೆ ಮುತ್ತಿಕ್ಕಿತು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಗೆದ್ದಿರುವುದು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿಯ ಏಷ್ಯಾಕಪ್‌ನಿಂದ ಭಾರತ ಟ್ರೋಫಿಯ ಹೊರತಾಗಿ ಹಲವು ಸಕಾರಾತ್ಮಕ ಅಂಶಗಳನ್ನು ಹೊತ್ತು ವಿಶ್ವಕಪ್‌ಗೆ ಹೆಜ್ಜೆ ಇಡಲು ಸಜ್ಜಾಗಿದೆ. ಕಾಡುತ್ತಿದ್ದ ಈ 5 ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದೆ. ಅದೇನು ಎಂಬುದನ್ನು ಈ ಮುಂದೆ ತಿಳಿಯೋಣ.
(2 / 9)
ತವರಿನಲ್ಲಿ ವಿಶ್ವಕಪ್‌ಗೆ ಪ್ರವೇಶಿಸುವ ಮೊದಲು ಉಪಖಂಡದ ನೆಲದಲ್ಲಿ ಏಷ್ಯಾಕಪ್ ಟ್ರೋಫಿ ಗೆದ್ದಿರುವುದು ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊನೆಯದಾಗಿ 2018ರಲ್ಲಿ ಏಷ್ಯಾಕಪ್ ಗೆಲ್ಲುವ ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಯಶಸ್ಸು ಸಾಧಿಸಿತ್ತು. 5 ವರ್ಷಗಳ ನಂತರ ಟೀಮ್ ಇಂಡಿಯಾ ಮತ್ತೊಮ್ಮೆ ದೊಡ್ಡ ವೇದಿಕೆಯಲ್ಲಿ ವಿಜಯ ಪತಾಕೆ ಹಾರಿಸಿದೆ. ಈ ಆತ್ಮ ವಿಶ್ವಾಸ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುವುದರಲ್ಲಿ ಸಂಶಯವಿಲ್ಲ.
(3 / 9)
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡದಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದವು. ಕೆಲವರು ದೀರ್ಘಕಾಲದ ಗಾಯದ ಸಮಸ್ಯೆಯಿಂದ ತಂಡಕ್ಕೆ ಮರಳಿದರೆ, ಇನ್ನೂ ಕೆಲವರದ್ದು ಫಾರ್ಮ್ ಸಮಸ್ಯೆ. ಫಿಟ್ ಆಗಿದ್ದಾರಾ? ಫಾರ್ಮ್ನಲ್ಲಿ ಇದ್ದಾರಾ? ಎಂಬ ಪ್ರಶ್ನೆಗಳು ಕಾಡಿದ್ದವು. ಹಾಗಾಗಿ ವಿಶ್ವಕಪ್‌ಗೆ ಭಾರತ ಎಷ್ಟು ಸಿದ್ಧವಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅದರಲ್ಲೂ ಈ ಐದು ಸಮಸ್ಯೆಗಳು ಟೀಮ್ ಮ್ಯಾನೇಜ್ಮೆಂಟ್ಗೆ ಸಿಕ್ಕಾಪಟ್ಟೆ ಕಾಡಿದ್ದವು. ಇದೀಗ ಏಷ್ಯಾಕಪ್ನಲ್ಲಿ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ.
(4 / 9)
ಗಾಯದ ಸಮಸ್ಯೆಯಿಂದ 4 ತಿಂಗಳಿಂದ ಕ್ರಿಕೆಟ್ ಸೇವೆಗೆ ದೂರವಾಗಿದ್ದ ಕೆಎಲ್ ರಾಹುಲ್, ಫಿಟ್ನೆಸ್ ಮೇಲೆ ಸಾಕಷ್ಟು ಅನುಮಾನಗಳಿದ್ದವು. ಅಲ್ಲದೆ, ಫಾರ್ಮ್ ಕಳೆದುಕೊಂಡು ವೈಫಲ್ಯ ಅನುಭವಿಸಿದ್ದರು. ಗಾಯದಿಂದ ಏಷ್ಯಾಕಪ್ನ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿದ್ದ ರಾಹುಲ್, ಸೂಪರ್-4 ಹಂತದಲ್ಲಿ ಕಣಕ್ಕಿಳಿದು ಶತಕ ಸಿಡಿಸಿ ಕಂಬ್ಯಾಕ್ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. ಅಲ್ಲದೆ, ವಿಕೆಟ್ ಕೀಪರ್ನಲ್ಲೂ ಸಖತ್ ಮೋಡಿ ಮಾಡಿದರು. ಏಕದಿನ ವಿಶ್ವಕಪ್ಗೂ ಮುನ್ನ ಫುಟ್ ಫಿಟ್ ಮತ್ತು ಫಾರ್ಮ್ಗೆ ಮರಳಿದ್ದು, ಟೀಮ್ ಮ್ಯಾನೇಜ್ಮೆಂಟ್ ನಿಟ್ಟುಸಿರು ಬಿಡುವಂತೆ ಮಾಡಿದೆ.
(5 / 9)
ಜಸ್ಪ್ರೀತ್ ಬೂಮ್ರಾ ಸಹ ಕಳೆದ ವರ್ಷದಿಂದ ಗಾಯದಿಂದ ತಂಡಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಐರ್ಲೆಂಡ್ ಸರಣಿಯಲ್ಲಿ ಕಂಬ್ಯಾಕ್ ಮಾಡಿದ ಜಸ್ಪ್ರೀತ್ ಬುಮ್ರಾ, ಫಿಟ್ನೆಸ್ ಬಗ್ಗೆ ಇನ್ನಷ್ಟು ಅನುಮಾನಗಳಿದ್ದವು. ಆದರೆ ಏಷ್ಯಾಕಪ್ನಲ್ಲಿ ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರು. ಆದಾಗ್ಯೂ, ತಮ್ಮ ನೈಜ ಫಾರ್ಮ್ ಅನ್ನು ತೋರಿಸಿದರು. ಏಷ್ಯಾಕಪ್ನಲ್ಲಿ ಅದ್ಬುತವಾಗಿ ಆಡುವ ಮೂಲಕ ವಿಶ್ವಕಪ್‌ಗೆ ಸ್ಪಷ್ಟ ಸಂದೇಶ ಕೊಟ್ಟರು. ಅವರ ಕಂಬ್ಯಾಕ್ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ಬಂದಂತಾಗಿದೆ.
(6 / 9)
ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಗೆ ವಿಕೆಟ್ ಕೀಪರ್ ಇಶಾನ್ ಕಿಶನ್ ಆಯ್ಕೆಯನ್ನು ಕೆಲವರು ಪ್ರಶ್ನಿಸಿದ್ದರು. ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಪಾಕ್ ವಿರುದ್ಧ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವ ಮೂಲಕ ಪ್ರಶ್ನಿಸಿದವರಿಗೆ ಇಶಾನ್ ಉತ್ತರ ನೀಡಿದರು. ಒತ್ತಡದಲ್ಲಿ 82 ರನ್ ಗಳಿಸಿ ಬಂಗಾರದಂತಹ ಇನ್ನಿಂಗ್ಸ್ ಕಟ್ಟಿದ ಇಶಾನ್, ವಿಶ್ವಕಪ್‌ಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದರು. ವಿಶ್ವಕಪ್ಗೂ ಮುನ್ನ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಿದೆ.
(7 / 9)
ಏಷ್ಯಾಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಕುಲ್ದೀಪ್ ಯಾದವ್, ವಿಶ್ವಕಪ್‌ನಲ್ಲಿ ಭಾರತ ತಂಡದ ಟ್ರಂಪ್ ಕಾರ್ಡ್ ಆಗಲಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ಭಾರತದ ಮೊದಲ ಆಯ್ಕೆ ಸ್ಪಿನ್ನರ್ ಕುಲ್ದೀಪ್. ಕೆಲವು ತಿಂಗಳಿಂದಲೂ ಫಾರ್ಮ್ನಲ್ಲಿ ಇರದ ಚೈನಾಮೆನ್ ಸ್ಪಿನ್ನರ್, ತಂಡಕ್ಕೆ ಕಂಬ್ಯಾಕ್ ಮಾಡುವುದೇ ಕಷ್ಟ ಎನ್ನಲಾಗಿತ್ತು. ಕಳೆದ ಒಂದೂವರೆ ವರ್ಷದಿಂದ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಅದ್ಭುತ ಬೌಲಿಂಗ್ ಮೂಲಕ ಫಾರ್ಮ್ಗೆ ಮರಳಿದ್ದು, ವಿಶ್ವಕಪ್ನಲ್ಲೂ ಇದೇ ಲಯ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
(8 / 9)
ಏಷ್ಯಾಕಪ್ಗೂ ಮುನ್ನ ಬುಮ್ರಾ ಬಳಿಕ ಮೊಹಮ್ಮದ್ ಶಮಿ ತಂಡದ 2ನೇ ಬೌಲರ್ ಎನಿಸಿದ್ದರು. ಆದರೆ ಶಮಿ ಬದಲಿಗೆ ಸಿರಾಜ್ಗೆ ಅವಕಾಶ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಹೊಸ ಚೆಂಡಿನೊಂದಿಗೆ ಸಿರಾಜ್ ಬೆಂಕಿ-ಬಿರುಗಾಳಿ ಬೌಲಿಂಗ್ ನಡೆಸಿ ಟೀಕಾಕಾರರ ಬಾಯಿ ಮುಚ್ಚಿಸಿ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಮಧ್ಯಮ ಓವರ್ಗಳಲ್ಲಿ ಭರ್ಜರಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ತನ್ನನ್ನು ತಾನು ಸಾಬೀತುಪಡಿಸುತ್ತಿದ್ದಾರೆ. ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಡೇಜಾ ಕೂಡ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಇತರ ಗ್ಯಾಲರಿಗಳು