2 ವರ್ಷಗಳ ಗ್ಯಾಪ್ ನಂತರ ಹೊಸ ಚಿತ್ರದಲ್ಲಿ ಸಾಯಿ ಪಲ್ಲವಿ; ಅಮರನ್ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಜೊತೆಯಾದ ಪ್ರೇಮಂ ಬ್ಯೂಟಿ
ಗಾರ್ಗಿ ಸಿನಿಮಾದ ನಂತರ ಕೆಲ ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸಾಯಿ ಪಲ್ಲವಿ ಸುಮಾರು ಎರಡು ವರ್ಷಗಳ ನಂತರ ಅಮರನ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.
(1 / 10)
ಸ್ಟಾರ್ ಹೀರೋಯಿನ್ ಸಾಯಿ ಪಲ್ಲವಿ ಬಹಳ ದಿನಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶಿವ ಕಾರ್ತಿಕೇಯನ್ ಅಭಿನಯದ ಅಮರನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಶಿವ ಕಾರ್ತಿಕೇಯನ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. (saipallavi.senthamarai/Instagram)
(2 / 10)
ಅಮರನ್, ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ ಜೀವನ ಚರಿತ್ರೆಯಾಗಿದೆ. ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ ಮತ್ತು ಶಿವ ಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿ ಪಲ್ಲವಿ, ಅವರ ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. (saipallavi.senthamarai/Instagram)
(3 / 10)
ಇದು ಸಾಯಿ ಪಲ್ಲವಿ ಅಭಿನಯದ ಮೊದಲ ಬಯೋಪಿಕ್ ಸಿನಿಮಾ. ಅಮರನ್ ಸಿನಿಮಾದಲ್ಲಿ ನಟಿಸುವ ಮುನ್ನ ರೆಬೆಕಾಳನ್ನು ಭೇಟಿಯಾಗಿದ್ದ ಸಾಯಿ ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ಆಕೆಯೊಂದಿಗೆ ಕೆಲವು ದಿನ ಕಾಲ ಕಳೆದಿದ್ದಾಗಿ ಹೇಳಿದ್ದಾರೆ. (saipallavi.senthamarai/Instagram)
(4 / 10)
ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ ಪುಸ್ತಕದಲ್ಲಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಮೇಜರ್ ವರದರಾಜನ್ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕಥೆ ಬರೆದಿದ್ದಾರೆ. (saipallavi.senthamarai/Instagram)
(5 / 10)
ಅಮರನ್ ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ತೆಲುಗು, ತಮಿಳು ಮಾತ್ರವಲ್ಲದೆ ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. (saipallavi.senthamarai/Instagram)
(6 / 10)
ಪ್ರೇಮಂ, ಫಿದಾ ಸಿನಿಮಾಗಳ ಮೂಲಕ ಹುಡುಗರ ಮನ ಕದ್ದ ಸಾಯಿ ಪಲ್ಲವಿ ಈಗ ದಕ್ಷಿಣದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ರಾಮಾಯಣದಲ್ಲೂ ನಟಿಸುತ್ತಿದ್ದಾರೆ. (saipallavi.senthamarai/Instagram)
(7 / 10)
ಲವ್ ಸ್ಟೋರಿ ನಂತರ ಮತ್ತೆ ನಾಗ ಚೈತನ್ಯ ಜೊತೆ ತಾಂಡೇಲ್ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಂದೂ ಮೊಂಡೇಟಿ ನಿರ್ದೇಶನದಲ್ಲಿ ಬನ್ನಿವಾಸು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗ ಚೈತನ್ಯ ಈ ಚಿತ್ರದಲ್ಲಿ ಮೀನುಗಾರನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. (saipallavi.senthamarai/Instagram)
(8 / 10)
2 ವರ್ಷಗಳ ಹಿಂದೆ ಗಾರ್ಗಿ ಸಿನಿಮಾದಲ್ಲಿ ನಟಿಸಿದ್ದ ಸಾಯಿ ಪಲ್ಲವಿ ಆ ಸಿನಿಮಾ ಸೋಲಿನ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರ ಕೈಯ್ಯಲ್ಲಿ 4 ಸಿನಿಮಾಗಳಿವೆ. (saipallavi.senthamarai/Instagram)
(9 / 10)
ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಂಗಿ ಮದುವೆಯಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. (saipallavi.senthamarai/Instagram)
ಇತರ ಗ್ಯಾಲರಿಗಳು