ನಿಮಗ್ಯಾರ್ರಿ ವಯಸ್ಸಾಗಿದೆ ಅಂದೌವ್ರು? ನೀಳ ಕಾಯದ ಶ್ರೀಯಾ ಸರಣ್ ಮೈಮಾಟ ನೋಡಿ ಹುಬ್ಬೇರಿಸಿದ ನೆಟ್ಟಿಗರು PHOTOS
- Shriya Saran Photos: ಬಹುಭಾಷಾ ನಟಿ ಶ್ರೀಯಾ ಸರಣ್ ದಶಕಗಳಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಇಂದಿಗೂ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ ಈ ಚೆಲುವೆ. ಇದೀಗ ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಶೇಷ ಸೀರೆ ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ 42ರ ಹರೆಯದ ಈ ನಟಿ. ಇಲ್ಲಿವೆ ನೋಡಿ ಈ ಬೆಡಗಿಯ ಫೋಟೋಗಳು.

(1 / 9)
ಬಹುಭಾಷಾ ನಟಿ ಶ್ರೀಯಾ ಸರಣ್ ಅವರ ಇತ್ತೀಚಿನ ಗ್ಲಾಮರಸ್ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. (instagram\ Shriya saran)
(2 / 9)
ಕಪ್ಪು ಬಣ್ಣದ ವಿಶೇಷ ವಿನ್ಯಾಸದ ಸೀರೆಯಲ್ಲಿ ನೀಳ ಕಾಯದ ಬೋಲ್ಡ್ ಬ್ಯೂಟಿಯ ಹಾಟ್ ಲುಕ್‌ಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.
(3 / 9)
ಕಳೆದ ಎರಡು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಶ್ರೀಯಾ ಸರಣ್, ಇಂದಿಗೂ ಒಂದಿಲ್ಲೊಂದು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
(4 / 9)
ಅದರಲ್ಲೂ ತಮಿಳು ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್ ನಟರ ಜತೆಗೆ ನಟಿಸಿರುವ ಶ್ರೀಯಾ, ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿ ಶ್ರೀಯಾ ಸರಣ್ ನಟಿಸಿದ್ದಾರೆ.
(5 / 9)
ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನಕ್ಕೂ ಕಾಲಿರಿಸಿ, ಪತಿ ಮತ್ತು ಮಗುವಿನ ಜತೆಗೆ ಹಾಯಾಗಿದ್ದರು.
(6 / 9)
ಹೀಗೆ ಮದುವೆಯಾದ ಬಳಿಕ ನಟನೆಗೆ ಬ್ರೇಕ್ ಹಾಕಿದ್ದ ಈ ಬೆಡಗಿ, ಸದ್ಯ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
(7 / 9)
ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದ ಶ್ರೀಯಾ, ಸೀರೆಯಲ್ಲಿ ಮೈಮಾಟ ಪ್ರದರ್ಶಿಸಿದ್ದಾರೆ.
ಇತರ ಗ್ಯಾಲರಿಗಳು