ದಳಪತಿ ವಿಜಯ್ 69ನೇ ಚಿತ್ರಕ್ಕೆ ಪೂಜಾ ಹೆಗ್ಡೆ ಪಡೆದ ಸಂಭಾವನೆ ಇಷ್ಟೊಂದಾ? ಸರಣಿ ಪ್ಲಾಪ್ ಕೊಟ್ಟ ನಟಿಗೆ ಕೋಟಿ ಕೋಟಿ!
Pooja Hegde Remuneration: ಬುಟ್ಟ ಬೊಮ್ಮ ಪೂಜಾ ಹೆಗ್ಡೆ ಬೀಸ್ಟ್ ಸಿನಿಮಾ ಬಳಿಕ ತಮಿಳಿನಲ್ಲಿ ದಳಪತಿ ವಿಜಯ್ ಅವರೊಂದಿಗೆ ಮತ್ತೊಮ್ಮೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ವಿಜಯ್ ಅವರ 69ನೇ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಒಳ್ಳೆಯ ಸಂಭಾವನೆಯೂ ಅವರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
(1 / 5)
ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಲಿರುವ ದಳಪತಿ 69 ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ಮುಗಿದಿತ್ತು.
(2 / 5)
ಅಚ್ಚರಿಯ ವಿಚಾರ ಏನೆಂದರೆ, ದಳಪತಿ ವಿಜಯ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆಗೆ ಕೋಟಿ ಕೋಟಿ ಸಂಭಾವನೆ ನೀಡಿದೆಯಂತೆ ನಿರ್ಮಾಣ ಸಂಸ್ಥೆ ಕೆವಿಎನ್. .
(3 / 5)
ಪೂಜಾ ಹೆಗ್ಡೆಗೆ ಒಂದೊಳ್ಳೆ ಸೂಪರ್ ಹಿಟ್ ಸಿನಿಮಾ ಸಿಗದೆ ಮೂರು ವರ್ಷಗಳ ಮೇಲಾಗಿದೆ. ಆದರೆ ಕಾಲಿವುಡ್‌ನಲ್ಲಿ 'ಬುಟ್ಟ ಬೊಮ್ಮ'ಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ.
(4 / 5)
ವಿಜಯ್ ಸಿನಿಮಾಕ್ಕೆ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆದಿದ್ದಾರಂತೆ ಪೂಜಾ, ಜತೆಗೆ ತಮಿಳಿನಲ್ಲಿ ಸ್ಟಾರ್ ಹೀರೋ ಸೂರ್ಯ ಜತೆಗೂ ಒಂದು ಸಿನಿಮಾ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು