ಕಿತ್ತಳೆ ಹಣ್ಣು ಅಂದ್ರೆ ತುಂಬ ಇಷ್ಟಾನಾ, ಹಾಗಾದರೆ ಅದನ್ನು ತಿನ್ನೋವಾಗ ಈ 12 ಫುಡ್ ತಿನ್ನಲೇಬೇಡಿ
ಕಿತ್ತಳೆ ಹಣ್ಣು ಅಂದ್ರೆ ತುಂಬಾ ಇಷ್ಟಾನಾ.. ಆರೆಂಜ್ ಹಣ್ಣು ತಿನ್ನೋದನ್ನು ಎಂಜಾಯ್ ಮಾಡ್ತೀರಾ, ಫ್ಯೂಷನ್ ಫುಡ್ ಅಂತ ಕಿತ್ತಳೆ ಹಣ್ಣು ತಿನ್ನೋವಾಗ ಈ 12 ಫುಡ್ ತಿನ್ನಲೇಬೇಡಿ. ಅಂತಹ ಪ್ರಯತ್ನ ಮಾಡಿದ್ರೆ ಆರೋಗ್ಯ ಕೆಡುವುದು ಖಚಿತ. ಯಾಕೆ ಎಂಬ ವಿವರ ಇಲ್ಲಿದೆ ನೋಡಿ.
(1 / 14)
ಕಿತ್ತಳೆ ಹಣ್ಣು ಅಂದರೆ ಇಷ್ಟ ಪಡದವರ ಸಂಖ್ಯೆ ಬಹಳ ಕಡಿಮೆ. ರಸಭರಿತ ಹಣ್ಣು ಅದರಲ್ಲೂ ನಮ್ಮ ಕನ್ನಡಿಗರಂತೂ ಕೊಡಗಿನ ಕಿತ್ತಳೆ, ನಾಗಪುರದ ಕಿತ್ತಳೆ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ನೀವು ಕೂಡ ಈ ಪಟ್ಟಿಯಲ್ಲಿದ್ದೀರಾ, ಕಿತ್ತಳೆ ಹಣ್ಣು ಅಂದ್ರೆ ತುಂಬ ಇಷ್ಟಾನಾ, ಹಾಗಾದರೆ ಅದನ್ನು ತಿನ್ನೋವಾಗ ಈ 12 ಫುಡ್ ತಿನ್ನಲೇಬೇಡಿ
(2 / 14)
ಕಿತ್ತಳೆ ಹಣ್ಣಿನ ಸರಿಯಾದ ಸೀಸನ್ ಶುರುವಾಗುವುದು ಚಳಿಗಾಲದಲ್ಲಿ. ಆದರೆ ಈಗ ಎಲ್ಲ ಸೀಸನ್‌ನಲ್ಲೂ ಈ ಹಣ್ಣು ಸಿಗುತ್ತಿದೆ. ಕೊಡಗಿನ ಕಿತ್ತಳೆ ಬೇಕು ಅಂದ್ರೆ ಚಳಿಗಾಲದ ತನಕ ಕಾಯಲೇಬೇಕು. ಸೀಸನ್ ವಿಚಾರ ಹಾಗಿರಲಿ ಬಿಡಿ. ಕಿತ್ತಳೆ ಹಣ್ಣು ಅತ್ಯಂತ ರಸಭರಿತ ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವಂಥದ್ದು. ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಹೀಗಾಗಿ ಈ ಹಣ್ಣು ತಿನ್ನುವಾಗ ಕೆಲವು ಫುಡ್ ತಿಂದರೆ ಅದರಿಂದ ಅಜೀರ್ಣ, ಫುಡ್ ಅಲರ್ಜಿ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಂತಹ 12 ಆಹಾರ ಉತ್ಪನ್ನಗಳ ವಿವರ ಇಲ್ಲಿದೆ.
(3 / 14)
ಕಿತ್ತಳೆ ಅಥವಾ ಸಿಟ್ರಸ್ ಅಂಶ ಇರುವ ಹಣ್ಣುಗಳು ಅಥವಾ ಅವುಗಳ ಜ್ಯೂಸ್‌ನೊಂದಿಗೆ ಡೇರಿ ಉತ್ಪನ್ನಗಳನ್ನು ತಿಂದರೆ ಅಂತಹ ಆಹಾರ ಸೇವನೆಯಿಂದ ಅಜೀರ್ಣ ಅಥವಾ ಎದೆಯುರಿ ಉಂಟಾಗಬಹುದು. ಕಿತ್ತಳೆಯ ಆಮ್ಲೀಯತೆಯು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಮೊಸರು ಮಾಡಬಹುದು. ಇದರಿಂದಾಗಿ ಹೊಟ್ಟೆ ಕೆಡಬಹುದು.
(4 / 14)
ಟೊಮ್ಯಾಟೊ ಮತ್ತು ಕಿತ್ತಳೆಗಳೆರಡೂ ವಿಟಮಿನ್ ಸಿ ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ, ಎರಡು ಆಮ್ಲೀಯ ಆಹಾರಗಳನ್ನು ಸಂಯೋಜಿಸುವುದು ಕೆಟ್ಟ ಆಹಾರ ಸಂಯೋಜನೆ. ಇದು ಆಮ್ಲದ ಹಿಮ್ಮುಖ ಹರಿವು ಅಥವಾ ಜೀರ್ಣಕ್ಕೆ ಸಂಬಂಧಿಸಿದ ಅಸ್ವಸ್ಥತೆಗೆ ಕಾರಣವಾಗಬಹುದು.
(5 / 14)
ಕಿತ್ತಳೆ ಹಣ್ಣು ಸೇವಿಸುವಾಗ ಹಾಲು ಮಾತ್ರವಲ್ಲ, ಮೊಸರು ಕೂಡ ಸೇವಿಸಬಾರದು. ಇದು ಎಲ್ಲರಿಗೂ ಆಗಿಬರಲ್ಲ. ಅಜೀರ್ಣ ಉಂಟಾಗಬಹುದು. ಹೊಟ್ಟೆ ಸಂಕಟ ಸಂಭವಿಸಬಹುದು.
(6 / 14)
ಕಿತ್ತಳೆ ತಿನ್ನುವಾಗ ಬಾಳೆಹಣ್ಣುಗಳನ್ನು ತಿನ್ನುವುದರಿಂದ ಅಜೀರ್ಣದ ಸಮಸ್ಯೆ ಆಗಬಹುದು. ಉದರ ಸಂಬಂಧಿ ಕಾಯಿಲೆ ಇರುವಂಥವರು ಈ ಕಾಂಬಿನೇಷನ್ ಪ್ರಯತ್ನಿಸಲೇಬಾರದು. ಉಳಿದವರಿಗೂ ಇದು ನಿಷಿದ್ಧ.
(7 / 14)
ಬೆಳಗ್ಗೆ ಉಪಾಹಾರ ಮಾಡುವಾಗ ಏಕದಳ ಧಾನ್ಯ, ಹಾಲು ಮತ್ತು ಕಿತ್ತಳೆ ಹಣ್ಣಿನ ಕಾಂಬಿನೇಷನ್ ಬಳಸುತ್ತೀದ್ದೀರಾ? ಇದು ಅಪಾಯಕಾರಿ ಸಂಯೋಜನೆ. ಇದರಿಂದ ಹೊಟ್ಟೆ ಕೆಡಬಹುದು.
(8 / 14)
ಕೆಲವು ದ್ವಿದಳ ಧಾನ್ಯಗಳೊಂದಿಗೆ ಕಿತ್ತಳೆಯ ಆಮ್ಲೀಯತೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಹಾಗಾಗಿ ಅಂತಹ ಸಂಯೋಜನೆಯನ್ನು ಬಳಸಬಾರದು. ಅವು ಅಜೀರ್ಣಕ್ಕೆ ಕಾರಣವಾಗಬಹುದು.
(9 / 14)
ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥದ ಜೊತೆಗೆ ಕಿತ್ತಳೆ ಹಣ್ಣು ತಿನ್ನಬಾರದು. ಅಥವಾ ಕಿತ್ತಳೆ ಹಣ್ಣು ತಿನ್ನುವಾಗ ಇಂತಹ ಆಹಾರವನ್ನು ತಿನ್ನಬಾರದು. ಅದರಿಂದ ಅಜೀರ್ಣ ಉಂಟಾಗಬಹುದು. ಹೊಟ್ಟೆ ಕೆಡಬಹುದು.
(10 / 14)
ತುಂಬಾ ಫ್ಯಾಟ್ ಹೊಂದಿರುವ ಜಂಕ್ ಫುಡ್‌ಗಳೊಂದಿಗೆ ಕಿತ್ತಳೆ ಹಣ್ಣು ತಿನ್ನಬಾರದು. ಇದು ಕೂಡ ಹೊಟ್ಟೆ ಕೆಡಿಸಬಹುದು. ವಾಂತಿ ಕೂಡ ಆಗಬಹುದು.
(12 / 14)
ಕಿತ್ತಳೆ ಹಣ್ಣು ಮತ್ತು ಕಾರ್ಬೋಹೈಡ್ರೇಟೆಡ್ ಸಾಫ್ಟ್ ಡ್ರಿಂಕ್ ಒಟ್ಟಿಗೆ ಸೇವಿಸಬಾರದು. ಇದರಿಂದ ಅಸ್ವಸ್ಥರಾಗಬಹುದು.
ಇತರ ಗ್ಯಾಲರಿಗಳು