ಯುಎಸ್, ಯುಕೆ ಮಾತ್ರವಲ್ಲ; ವಿದೇಶದಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತ ರಾಷ್ಟ್ರಗಳಿವು
- ಭಾರತದ ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುತ್ತಾರೆ. ಕೆಲಸ ಮತ್ತು ಅಧ್ಯಯನದ ವಿಷಯ ಬಂದಾಗ ಯುಎಸ್ ಮತ್ತು ಯುಕೆ ಭಾರತೀಯರ ಮೊದಲ ಆದ್ಯತೆ. ಈ ಎರಡು ಪ್ರಮುಖ ರಾಷ್ಟ್ರಗಳ ಹೊರತಾಗಿಯೂ, ಉನ್ನತ ಶಿಕ್ಷಣ ಪಡೆಯಲೂ ಹಲವು ದೇಶಗಳಿಗೆ ತೆರಳಬಹುದು. ಅಂಥಾ ದೇಶಗಳ ವಿವರ ಇಲ್ಲಿದೆ.
- ಭಾರತದ ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುತ್ತಾರೆ. ಕೆಲಸ ಮತ್ತು ಅಧ್ಯಯನದ ವಿಷಯ ಬಂದಾಗ ಯುಎಸ್ ಮತ್ತು ಯುಕೆ ಭಾರತೀಯರ ಮೊದಲ ಆದ್ಯತೆ. ಈ ಎರಡು ಪ್ರಮುಖ ರಾಷ್ಟ್ರಗಳ ಹೊರತಾಗಿಯೂ, ಉನ್ನತ ಶಿಕ್ಷಣ ಪಡೆಯಲೂ ಹಲವು ದೇಶಗಳಿಗೆ ತೆರಳಬಹುದು. ಅಂಥಾ ದೇಶಗಳ ವಿವರ ಇಲ್ಲಿದೆ.
(1 / 6)
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಪಡೆಯುವ ಆಸೆ ಇರುತ್ತದೆ. ಕೆಲವೊಂದು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ವಿದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಜನಪ್ರಿಯ ರಾಷ್ಟ್ರಗಳ ಹೊರತಾಗಿ ಕೆಲವೊಂದು ದೇಶಗಳ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಕೋವಿಡ್ ಕಾಲದ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಉತ್ತಮವಾದ ಕೆಲವು ದೇಶಗಳು ಇಲ್ಲಿವೆ.
(2 / 6)
ಪೋಲೆಂಡ್: ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್ 19 ಸಾಂಕ್ರಾಮಿಕ ರೋಗವು ಈ ದೇಶದ ಮೇಲೆ ಕಡಿಮೆ ಪ್ರಭಾವ ಬೀರಿತ್ತು. ಆ ಬಳಿಕ ಈ ದೇಶದಲ್ಲಿ ಅಧ್ಯಯನ ಮಾಡಲು ಅನೇಕ ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ.(Unsplash)
(3 / 6)
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ): ಯುಎಇಯ ವಿಶ್ವವಿದ್ಯಾಲಯಗಳು ನೀಡುವ ಕೋರ್ಸ್‌ಗಳನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ. ಸಾಂಸ್ಕೃತಿಕವಾಗಿ ಭಾರತ ಮತ್ತು ಯುಎಇಗೆ ಹಲವು ಸಾಮ್ಯತೆಗಳಿವೆ. ಅಲ್ಲದೆ ಹಲವು ಭಾರತೀಯರು ಇಲ್ಲಿ ಉದ್ಯೋಗ ಹಾಗೂ ಕಾಯಂ ನೆಲೆ ಕಂಡುಕೊಂಡಿದ್ದಾರೆ. ಹೀಗಾಗಿ ಇಲ್ಲಿ ಹೊಂದಿಕೊಳ್ಳುವುದು ಭಾರತೀಯರಿಗೆ ಕಷ್ಟವಾಗುವುದಿಲ್ಲ.(Unsplash)
(4 / 6)
ನ್ಯೂಜಿಲ್ಯಾಂಡ್: ಭಾರತೀಯರಿಗೆ ನ್ಯೂಜಿಲ್ಯಾಂಡ್ ಸೌಂದರ್ಯ ಇಷ್ಟವಾಗದಿರಲು ಸಾಧ್ಯವಿಲ್ಲ. ಶಾಂತ, ಪ್ರಶಾಂತ ಮತ್ತು ರಮಣೀಯ ಸೌಂದರ್ಯದಿಂದಾಗಿ ಕಿವೀಸ್ ರಾಷ್ಟ್ರ ಫೇಮಸ್. ವಿಶ್ವದ ಹಲವು ವಿದ್ಯಾರ್ಥಿಗಳು ಇಲ್ಲಿನ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಮುಗಿಬೀಳುತ್ತಾರೆ.(Unsplash)
(5 / 6)
ಕೆನಡಾ: ವಿದೇಶದಲ್ಲಿ ಅಧ್ಯಯನ ಬಯಸುವವರಲ್ಲಿ ಉನ್ನತ ಶಿಕ್ಷಣಕ್ಕೆ ಕೆನಡಾ ಯಾವಾಗಲೂ ಸೂಕ್ತ ತಾಣಗಳಲ್ಲಿ ಒಂದು. ಯುಎಸ್‌ನ ಪಕ್ಕದ ದೇಶವು ಉನ್ನತ ಶ್ರೇಣಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುವ ಹಲವು ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯಗಳನ್ನು ಹೊಂದಿದೆ.
ಇತರ ಗ್ಯಾಲರಿಗಳು