ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು
- ದಸರಾ ಹಬ್ಬಕ್ಕೆ ದೇಶದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ದೇಶದ ವಿವಿಧೆಡೆ ದಸರಾವನ್ನು ವಿವಿಧ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಹೀಗಾಗಿ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆ ತೊಡುವುದು ರೂಢಿ. ಈ ಬಾರಿಯ ಹಬ್ಬಕ್ಕೆ ಪುರುಷರು ಹೇಗೆಲ್ಲಾ ಮಿಂಚಬಹುದು. ಭಿನ್ನ ಶೈಲಿಯ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಅದ್ದೂರಿ ಸಿದ್ಧತೆಗೆ ಸಲಹೆಗಳು ಇಲ್ಲಿವೆ.

(1 / 7)
ಮಹಿಳೆಯರಿಗೆ ವಿವಿಧ ವಿನ್ಯಾಸದ ಬಟ್ಟೆಬರೆಗಳು ಬರುತ್ತವೆ. ಹಾಗಂತಾ ಪುರುಷರೇನೂ ಕಮ್ಮಿ ಇಲ್ಲ. ದಸರಾ, ವಿಜಯದಶಮಿ ಸಮಯದಲ್ಲಿ ಮಹಿಳೆಯರಿಗೆ ಸಮನಾಗಿ ವಿಭಿನ್ನ ಡಿಸೈನ್‌ಗಳ ಸಾಂಪ್ರದಾಯಿಕ ಉಡುಗೆಯನ್ನು ಪುರುಷರು ಕೂಡಾ ತೊಡಬಹುದು. ಧೋತಿ, ಶೆರ್ವಾನಿ ಪುರುಷರ ಸಾಮಾನ್ಯ ಆಯ್ಕೆ.
(2 / 7)
ಪಶ್ಚಿಮ ಬಂಗಾಳದಲ್ಲು ಪುರುಷರ ಸಂಪ್ರದಾಯಿಕ ಉಡುಗೆ ಧೋತಿ-ಪಂಜಾಬಿ ಕುರ್ತಾ ಧರಿಸುತ್ತಾರೆ. ದಕ್ಷಿಣ ಭಾರತದಲ್ಲೂ ಇದು ಪರಿಚಿತ. ನವರಾತ್ರಿ ಮಾತ್ರವಲ್ಲದೆ ಮದುವೆ ಸೇರಿದಂತೆ ಇನ್ನಿತರ ಯಾವುದೇ ಸಂದರ್ಭಗಳಲ್ಲಿ ಈ ಉಡುಗೆ ಕಾಮನ್. ಧೋತಿ-ಪಂಜಾಬಿ ಕುರ್ತಾ ಎಂದರೆ ಹಳೆಯ ಕಾಲದ ಫ್ಯಾಷನ್ ಏನೂ ಅಲ್ಲ. ಈ ಟ್ರೆಡಿಶನಲ್ ಉಡುಗೆಗೆ ಮಾಡರ್ನ್ ಸ್ಪರ್ಶ ಸಿಕ್ಕಿದೆ.
(5 / 7)
ಈ ಫೋಟೊದಲ್ಲಿರುವಂತೆ ಧೋತಿ ಪ್ಯಾಂಟ್ ಹಾಗೂ ಉದ್ದನೆಯ ಕುರ್ತಾ ಧರಿಸಬಹುದು. ಕುರ್ತಾ ಮೇಲೆ ಪ್ರಿಂಟೆಡ್ ವಿನ್ಯಾಸದ ಸಣ್ಣ ಕೋಟ್ ಧರಿಸಿದರೆ ಸ್ಮಾರ್ಟ್ ಲುಕ್ ಕೊಡುತ್ತದೆ.
(6 / 7)
ಮನೆಯಲ್ಲಿ ಮಕ್ಕಳಿದ್ದರೆ, ಅವರನ್ನೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಹಬ್ಬಕ್ಕೆ ರೆಡಿ ಮಾಡಿ. ಮಕ್ಕಳು ಕೂಡಾ ಅದ್ದೂರಿ ಉಡುಗೆ ಇಷ್ಟಪಡುತ್ತಾರೆ.
ಇತರ ಗ್ಯಾಲರಿಗಳು