ರಾತ್ರಿ ಸರಿ ನಿದ್ದೆ ಬೀಳದಿದ್ದರೆ ಚಿಂತೆ ಬೇಡ; ಮಲಗುವ ಮುನ್ನ ಈ ಪಾನೀಯಗಳನ್ನು ಕುಡಿದರೆ ನಿದ್ರೆ ಸುಧಾರಿಸುತ್ತೆ
- ರಾತ್ರಿಯಲ್ಲಿ ನಿದ್ರೆ ಮಾಡಲು ಹಲವರು ಒದ್ದಾಡುತ್ತಾರೆ. ಜೀವನಶೈಲಿಯಲ್ಲಿ ವ್ಯತ್ಯಾಸಗಳಾದಾಗ ಈ ಸಮಸ್ಯೆ ಕಾಡುತ್ತದೆ. ಆದರೆ, ಮಲಗುವ ಮುನ್ನ ಕೆಲವು ರೀತಿಯ ಪಾನೀಯಗಳನ್ನು ಕುಡಿಯುವ ಮೂಲಕ ನಿದ್ರೆಯ ಗುಣಮಟ್ಟ ಸುಧಾರಿಸಬಹುದು. ಅವು ಯಾವುವು ಎಂಬುದನ್ನು ನೋಡೋಣ.
- ರಾತ್ರಿಯಲ್ಲಿ ನಿದ್ರೆ ಮಾಡಲು ಹಲವರು ಒದ್ದಾಡುತ್ತಾರೆ. ಜೀವನಶೈಲಿಯಲ್ಲಿ ವ್ಯತ್ಯಾಸಗಳಾದಾಗ ಈ ಸಮಸ್ಯೆ ಕಾಡುತ್ತದೆ. ಆದರೆ, ಮಲಗುವ ಮುನ್ನ ಕೆಲವು ರೀತಿಯ ಪಾನೀಯಗಳನ್ನು ಕುಡಿಯುವ ಮೂಲಕ ನಿದ್ರೆಯ ಗುಣಮಟ್ಟ ಸುಧಾರಿಸಬಹುದು. ಅವು ಯಾವುವು ಎಂಬುದನ್ನು ನೋಡೋಣ.
(1 / 7)
ಹಗಲಿಡೀ ದಣಿದ ದೇಹಕ್ಕೆ ರಾತ್ರಿ ನಿದ್ದೆ ಮುಖ್ಯ. ರಾತ್ರಿ ವೇಳೆ ಸರಿಯಾದ ಕ್ರಮದಲ್ಲಿ ಮಲಗಿದರೆ, ಬೆಳಗ್ಗೆ ಎದ್ದು ದೈನಂದಿನ ಕೆಲಸವನ್ನು ಸರಿಯಾಗಿ ಮಾಡಬಹುದು. ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸಲು, ನೀವು ರಾತ್ರಿ ಮಲಗುವುದಕ್ಕೂ ಮೊದಲು ಕೆಲವು ಪಾನೀಯಗಳನ್ನು ಕುಡಿಯಬೇಕು. ಕ್ಯಾಮೊಮೈಲ್ ಚಹಾ ಕುಡಿಯುವುದರಿಂದ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಮೆಲನಿನ್ ಅನ್ನು ಹೆಚ್ಚಿಸುತ್ತದೆ. ಅಲ್ಲದೆ, ಅರಿಶಿನ ಹಾಲು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
(2 / 7)
ಅರಿಶಿನ ಬೆರೆಸಿದ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದೇ ವೇಳೆ ಬಾದಾಮಿ ಹಾಲನ್ನು ಕೂಡಾ ಕುಡಿಯಬಹುದು. ರಾತ್ರಿಯ ನಿದ್ರೆಯನ್ನು ಸುಧಾರಿಸಲು ನೀವು ಈ ಪಾನೀಯಗಳು ನಿಮಗೆ ನೆರವಾಹುತ್ತವೆ.
(3 / 7)
ಪ್ರತಿ ರಾತ್ರಿ ಕನಿಷ್ಠ 8 ಗಂಟೆ ನಿದ್ರೆ ಮಾಡಿ. ರಾತ್ರಿ 10 ಗಂಟೆಯ ಮೊದಲು ಮಲಗಿ ಮತ್ತು ಬೆಳಗ್ಗೆ 6 ಗಂಟೆಗೆ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಒಂದೇ ಸಮಯದಲ್ಲಿ ಎಚ್ಚರಗೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ. ಮಲಗಿದ 20 ನಿಮಿಷಗಳಲ್ಲಿ ನಿದ್ರೆ ಬರದಿದ್ದರೆ, ಎದ್ದು ಸ್ವಲ್ಪ ವಿಶ್ರಾಂತಿ ಪಡೆಯಿರಿ. ಶಾಂತವಾದ ಸಂಗೀತವನ್ನು ಆಲಿಸಿ.
(4 / 7)
ನೀವು ಹಸಿವಿನಿಂದ ಮಲಗಿದರೆ, ನಿಮಗೆ ನಿದ್ರೆ ಮಾಡಲು ಕಷ್ಟವಾಗಬಹುದು. ಅಲ್ಲದೆ ಮಲಗುವ ಎರಡು ಗಂಟೆಗಳ ಮೊದಲು ಏನನ್ನೂ ತಿನ್ನಬೇಡಿ. ನಿಕೋಟಿನ್, ಕೆಫೀನ್ ಮತ್ತು ಆಲ್ಕೋಹಾಲ್ ಕುಡಿಯುವವರು ಬಹಳ ಜಾಗರೂಕರಾಗಿರಬೇಕು. ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಸುಖನಿದ್ರೆಗೆ ಭಂಗ ತರಬಹುದು.
(5 / 7)
ಮಲಗುವ ಕೋಣೆ ತಂಪಾಗಿರಲಿ. ಬೆಳಕು ಇದ್ದರೆ, ಅದು ನಿಮ್ಮ ನಿದ್ರೆಗೆ ಭಂಗ ತರಬಹುದು. ಮಲಗುವ ಮೊದಲು ಬೆಳಕು ಬರುವ ಪರದೆಗಳನ್ನು ಮುಚ್ಚಿ. ಮಲಗುವ ಕೋಣೆ ಪ್ರಶಾಂತವಾಗಿದ್ದರೆ ನಿದ್ರೆಯನ್ನು ಸುಧಾರಿಸುತ್ತದೆ.
(6 / 7)
ಹಗಲಿನಲ್ಲಿ ದೀರ್ಘಕಾಲ ಮಲಗಿದರೆ ರಾತ್ರಿಯಲ್ಲಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು. ರಾತ್ರಿ ಕೆಲಸ ಮಾಡುವ ಸಮಯದಲ್ಲಿ ಮಧ್ಯಾಹ್ನದ ನಂತರ ಮಲಗಿದರೆ, ಮತ್ತೆ ರಾತ್ರಿ ಪಾಳಿಯಲ್ಲಿ ತಾಜಾತನದಿಂದ ಕೆಲಸ ಮಾಡಬಹುದು.
ಇತರ ಗ್ಯಾಲರಿಗಳು