UI First Half Review: ಬುದ್ದಿವಂತರಿಗಲ್ಲ, ದಡ್ಡರಿಗೆ ಮಾತ್ರ- ಸತ್ಯ ಮತ್ತು ಕಲ್ಕಿ ಕದನ ಶುರು; ಉಪ್ಪಿ UI ಸಿನಿಮಾದ ಫಸ್ಟ್ ಹಾಫ್ ಹೇಗಿದೆ?
UI Movie Review (ಯುಐ ಸಿನಿಮಾದ ಮೊದಲಾರ್ಧದ ವಿಮರ್ಶೆ): ಉಪೇಂದ್ರ ನಿರ್ದೇಶನ-ನಟನೆಯ ಯುಐ ಸಿನಿಮಾದ ಮೊದಲಾರ್ಧ ಹೇಗಿದೆ? ಸಿನಿಮಾದ ಕಥೆಯೇನು? ಸಿನಿಮಾ ಚೆನ್ನಾಗಿದೆಯಾ? ಎಂದು ತಿಳಿಯೋಣ ಬನ್ನಿ. ಉಪೇಂದ್ರ, ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ, ಇಂದ್ರಜಿತ್ ಲಂಕೇಶ್ ಮುಂತಾದವರು ನಟಿಸಿರುವ ಸಿನಿಮಾವಿದು.
UI Movie Review (ಯುಐ ಸಿನಿಮಾದ ಮೊದಲಾರ್ಧದ ವಿಮರ್ಶೆ): ಉಪೇಂದ್ರ ನಟನೆ ನಿರ್ದೇಶನದ ಯುಐ ಸಿನಿಮಾ ಶುಕ್ರವಾರ (ಡಿಸೆಂಬರ್ 20) ಬಿಡುಗಡೆಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ 6 ಗಂಟೆಯ ನಂತರ ಫಸ್ಟ್ ಶೋ ಆರಂಭವಾಗಿದೆ. ಯುಐ ಸಿನಿಮಾ ಈ ವರ್ಷ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಒಂದು. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಈಗಾಗಲೇ ಉಪೇಂದ್ರ ಅವರು ತನ್ನ ಡಿಫರೆಂಟ್ ಸಿನಿಮಾಗಳಿಂದ ಹೆಸರು ಮಾಡಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶ್ಶು ಸೆಂಗುಪ್ತ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಮುಂತಾದವರು ನಟಿಸಿದ್ದಾರೆ. ಉಪೇಂದ್ರ ಯುಐ ಸಿನಿಮಾ ಹೇಗಿದೆ? ಸಿನಿಮಾ ಚೆನ್ನಾಗಿದೆಯಾ? ಸೂಪರ್‌ಹಿಟ್ ಬ್ಲಾಕ್‌ಬಸ್ಟರ್ ಸಿನಿಮಾವೇ? ಯುಐ ಸಿನಿಮಾದ ಕಥೆಯೇನು? ಯುಐ ಸಿನಿಮಾ ಸುಲಭವಾಗಿ ಅರ್ಥವಾಗುತ್ತ? ಯುಐ ಸಿನಿಮಾದಲ್ಲಿ ಕಾಮಿಡಿ ಹೇಗಿದೆ? ಯುಐ ಸಿನಿಮಾದ ನೀತಿಯೇನು? ಇದು ಕೇವಲ ಬೋಧನಾ ಪ್ರಧಾನ ಸಿನಿಮಾವೇ, ಮನರಂಜನೆ ಸಾಕಷ್ಟು ಇದೆಯೇ? ಉಪೇಂದ್ರ ಈ ಯುಐ ಸಿನಿಮಾದ ಮೂಲಕ ಏನು ಸಂದೇಶ ನೀಡಿದ್ದಾರೆ ಇತ್ಯಾದಿ ಪ್ರಶ್ನೆಗಳು ಸಿನಿಮಾಪ್ರಿಯರಲ್ಲಿ ಇರಬಹುದು. ಯುಐ ಸಿನಿಮಾದ ಸಂಪೂರ್ಣ ವಿಮರ್ಶೆ ತಿಳಿಯುವ ಮುನ್ನ ಈ ಸಿನಿಮಾದ ಮೊದಲಾರ್ಧ ಹೇಗಿದೆ? ಎಂದು ತಿಳಿಯೋಣ ಬನ್ನಿ.
ಇದನ್ನೂ ಓದಿ: ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ
ಉಪೇಂದ್ರ UI ಸಿನಿಮಾದ ಫಸ್ಟ್ ಹಾಫ್ ಹೇಗಿದೆ?
- ಆರಂಭದಲ್ಲಿಯೇ ಇದು ಬುದ್ಧಿವಂತರಿಗಲ್ಲ, ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕವೇ ಪ್ರೇಕ್ಷಕನನ್ನು ಬರಮಾಡಿಕೊಳ್ಳುತ್ತಾರೆ ಉಪ್ಪಿ. ಅಲ್ಲಿಂದ UI ಅನ್ನೋ ಹೊಸ ಪ್ರಪಂಚದ ಬಾಗಿಲು ತೆರೆಯುತ್ತದೆ. ಹುಳ ಬಿಡುವ ಕೆಲಸ ಮೊದಲ ಸೀನ್‌ನಿಂದಲೇ ಶುರುವಾಗುತ್ತದೆ. ಹಾಗಾದರೆ, ಏನಿದು UI ಕಥೆ.
- ಸತ್ಯ ಮಿಥ್ಯದ ಕಥೆಯೇ UI. ಒಳ್ಳೆಯ ಸತ್ಯ (ಉಪೇಂದ್ರ) ಮತ್ತು ಜಗತ್ತನೇ ಸರ್ವನಾಶ ಮಾಡುವ ಕಲ್ಕಿ (ಉಪೇಂದ್ರ) ಇವರಿಬ್ಬರಲ್ಲಿ ಕೊನೆಗೆ ಯಾರಿಗೆ ಗೆಲುವು? ಈ ಕುತೂಹಲವೇ UI ಸಿನಿಮಾದ ಒಂದೆಳೆ. ಆರಂಭದಲ್ಲಿ ಒಂದಷ್ಟು ನೋಡುಗರನ್ನು ಗಲಿಬಿಲಿ ಮಾಡುತ್ತಾ ಸಾಗುತ್ತಾರೆ ಉಪೇಂದ್ರ.
- ನೋಡುಗನಿಗೆ ಗೊಜಲು ಗೊಜಲು ಎನಿಸಿದರೂ, ಬರು ಬರುತ್ತ ಚಿತ್ರ ನಮ್ಮನ್ನು ಆವರಿಸಿಕೊಳ್ಳುತ್ತದೆ. ನೋಡುಗನಿಗೆ ಇದು ಟಿಪಿಕಲ್ ಉಪ್ಪಿ ಸಿನಿಮಾ ಎಂಬುದು ಮನವರಿಕೆ ಆಗುತ್ತಲೇ ಹೋಗುತ್ತದೆ.
- ಈ ಸಿನಿಮಾದಲ್ಲಿ ಹಿನ್ನೆಲೆ ಸದ್ದು ಮಾಡುವ ಸೌಂಡ್ ಪ್ರಮುಖ ಆಕರ್ಷಣೆ. ನಮ್ಮ ಮೆದುಳಿಗೆ ಜುಮ್ ಎನಿಸುವ ಫೀಲ್ ನೀಡುತ್ತದೆ ಸಿನಿಮಾದ ಸೌಂಡ್. ಇಬ್ಬರು ಸಂಗೀತ ನಿರ್ದೇಶಕರು ಕಾಂಪಿಟೇಷನ್‌ಗೆ ಬಿದ್ದಂತೆ ಸೌಂಡ್ ನೀಡಿದ್ದಾರೆ.
- ಉಪ್ಪಿ ಕಲ್ಪನೆಯಲ್ಲಿ ಯುಐ ಸಾಮ್ರಾಜ್ಯವನ್ನು ತೋರಿಸಿರುವ ರೀತಿಯೂ ತ್ರಿಡಿ ಅನುಭವ ನೀಡುತ್ತದೆ. ಏಕೆಂದರೆ ಇದು 2ಡಿ ಸಿನಿಮಾ ಆದರೂ, ತ್ರಿಡಿ ಅನುಭವಾಗುತ್ತದೆ.
- ರಾಜಕೀಯ ಮತ್ತು ಪ್ರಜಾಕೀಯದ ಬಗ್ಗೆಯೂ ಉಪೇಂದ್ರ UIನಲ್ಲಿ ಟಚ್ ಮಾಡಿದ್ದಾರೆ. ಎಲ್ಲಿಯೂ ಅದನ್ನು ನೇರವಾಗಿ ಹೇಳದೆ, ಪರೋಕ್ಷವಾಗಿಯೇ ಜನರ ಮುಂದಿಟ್ಟಿದ್ದಾರೆ. ಸಮಾಜದಲ್ಲಿ ನಡೆಯುವ ರಾಜಕೀಯವನ್ನು ತಮ್ಮದೇ ಸ್ಟೈಲ್‌ನಲ್ಲಿ ಪ್ರಸೆಂಟ್ ಮಾಡಿದ್ದಾರೆ ಉಪ್ಪಿ.
- ಹೆಣ್ಣು ಮತ್ತು ಪ್ರಕೃತಿಯನ್ನು ಇಲ್ಲಿ ಜತೆಯಾಗಿ ತೋರಿಸಿದ್ದಾರೆ. ಜನರು ಈ ಪ್ರಕೃತಿಯನ್ನು ಮೈನಿಂಗ್ ಮಾಫಿಯಾ, ಬಿಸಿನೆಸ್ ಮಾಫಿಯಾದಿಂದ ಹೇಗೆ ಹಾಳು ಮಾಡುತ್ತಿದ್ದಾರೆ ಎಂಬುದೂ ಮೊದಲಾರ್ಧದಲ್ಲಿ ಕಾಣಿಸುತ್ತದೆ.
ಸಿನಿಮಾ ವಿಮರ್ಶೆ: ಯುಐ
ಭಾಷೆ: ಕನ್ನಡ
ನಿರ್ದೇಶನ: ಉಪೇಂದ್ರ
ತಾರಾಗಣ: ರಿಯಲ್ ಸ್ಟಾರ್ ಉಪೇಂದ್ರ, ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶ್ಶು ಸೆಂಗುಪ್ತ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ, ಮುರಳಿ ಕೃಷ್ಣ, ಇಂದ್ರಜಿತ್ ಲಂಕೇಶ್
ಸಂಗೀತ: ಅಜನೀಶ್ ಲೋಕನಾಥ್
ನಿರ್ಮಾಣ: ಲಹರಿ ಫಿಲ್ಮ್ಸ್ ಮತ್ತು ವೆನ್ಯೂಸ್ ಎಂಟರ್‌ಟೈನರ್ಸ್
ಎಚ್ಟಿ ಕನ್ನಡದ ಇತ್ತೀಚಿನ ಸಿನಿಮಾ ವಿಮರ್ಶೆಗಳನ್ನು ಓದಿ
- ಲಕ್ಕಿ ಬಾಸ್ಕರ್ ಸಿನಿಮಾ ವಿಮರ್ಶೆ: ದುಲ್ಕರ್ ಸಲ್ಮಾನ್ ಮಾಸ್ಟರ್ ಪೀಸ್ ನಟನೆ; ಅನಿರೀಕ್ಷಿತ ತಿರುವುಗಳು, ಅದ್ಭುತ ರೋಮಾಂಚನದ ಹಣಾಹಣಿ
- ಮರ್ಫಿ ಸಿನಿಮಾ ವಿಮರ್ಶೆ: 2 ಕಾಲಘಟ್ಟದ ಕಥೆಗೆ ರೇಡಿಯೋ ಹಿಡಿದ ನಿರ್ದೇಶಕ; ಪ್ರೇಮ ಸಂಬಂಧಗಳ ಸಮ್ಮಿಲನ
- Pushpa 2 Review: ಪುಷ್ಪ ಇದು ಒನ್ ಮ್ಯಾನ್ ಶೋ! ಅತಿಯಾಯ್ತು ಬಿಲ್ಡಪ್, ರುಚಿಸದ ಕಥೆಗೆ ವೈಭವೀಕರಣದ ಲೇಪನ
- ರೆಡ್ ಒನ್ ವಿಮರ್ಶೆ: ಸಾರೋಟು ಏರಿಬಂದ ಸಾಂತಾಕ್ಲಾಸ್ ಕಿಡ್ನ್ಯಾಪ್; ಕ್ರಿಸ್ಮಸ್ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ