ಬಾಯಿ ಸಪ್ಪೆ ಎನಿಸಿದಾಗ, ಮನೆಯಲ್ಲಿ ತರಕಾರಿ ಖಾಲಿಯಾಗಿದ್ದರೆ ಮಾಡಿ ಸವಿಯಿರಿ ಬೆಳ್ಳುಳ್ಳಿ ಖಾರ: ಈ ಚಳಿಗಾಲಕ್ಕೆ ಹೇಳಿ ಮಾಡಿದ ರೆಸಿಪಿಯಿದು
ಬಾಯಿ ಸಪ್ಪೆ ಎನಿಸಿದಾಗ ಅಥವಾಮನೆಯಲ್ಲಿ ತರಕಾರಿ ಇಲ್ಲದಿರುವಾಗ ಬೆಳ್ಳುಳ್ಳಿ ಖಾರ ಖಾದ್ಯವನ್ನು ಮಾಡಿ ನೋಡಿ. ಈ ಸಂಪೂರ್ಣ ಸಸ್ಯಾಹಾರಿ ರೆಸಿಪಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಚಳಿಗಾಲಕ್ಕಂತೂ ಹೇಳಿ ಮಾಡಿದ ರೆಸಿಪಿಯಿದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳಿಂದ ಮಾಡಿದ ಯಾವುದೇ ಆಹಾರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಯಿ ಸಪ್ಪೆ ಎನಿಸಿದಾಗ ಅಥವಾ ಮನೆಯಲ್ಲಿ ತರಕಾರಿ ಇಲ್ಲದಿರುವಾಗ ಬೆಳ್ಳುಳ್ಳಿ ಖಾರ ಖಾದ್ಯವನ್ನು ಮಾಡಿ ನೋಡಿ. ಈ ಸಂಪೂರ್ಣ ಸಸ್ಯಾಹಾರಿ ರೆಸಿಪಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಚಳಿಗಾಲಕ್ಕಂತೂ ಹೇಳಿ ಮಾಡಿದ ರೆಸಿಪಿಯಿದು. ಇದನ್ನು ಮಾಡುವುದು ಕೂಡ ತುಂಬಾನೇ ಸುಲಭ. ಇಲ್ಲಿದೆ ಬೆಳ್ಳುಳ್ಳಿ ಖಾರ ಕರಿ ಮಾಡುವ ವಿಧಾನ.
ಬೆಳ್ಳುಳ್ಳಿ ಖಾರ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಜೀರಿಗೆ- ಎರಡು ಟೀ ಚಮಚ, ಬೆಳ್ಳುಳ್ಳಿ ಎಸಳು- 20, ಮೆಣಸಿನಪುಡಿ- ಎರಡು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಮೂರು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಕಡಲೆಬೇಳೆ- ಅರ್ಧ ಟೀ ಚಮಚ, ಉದ್ದಿನ ಬೇಳೆ- ಅರ್ಧ ಚಮಚ, ಮೆಂತ್ಯ ಕಾಳು- ನಾಲ್ಕು ಕಾಳುಗಳು, ಕಾಳುಮೆಣಸು- ಎರಡು, ಕರಿಬೇವು- 10 ರಿಂದ 12 ಎಲೆ.
ಮಾಡುವ ವಿಧಾನ: ಈ ಗ್ರೇವಿ ಮಾಡಲು ಮೊದಲಿಗೆ ಬೆಳ್ಳುಳ್ಳಿ ಎಸಳು ತೆಗೆದುಕೊಳ್ಳಿ.
- ಬೆಳ್ಳುಳ್ಳಿ ಸಿಪ್ಪೆ ತೆಗೆಯಬೇಕೋ ಅಥವಾ ಹಾಗೆಯೇ ಬಿಡಬೇಕೋ ಎಂಬುದು ನಿಮಗೆ ಬಿಟ್ಟದ್ದು. ಇದನ್ನು ಹೇಗೆ ಮಾಡಿದರೂ ರುಚಿಕರವಾಗಿರುತ್ತದೆ.
- ಮೆಣಸಿನಪುಡಿ, ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
- ನಂತರ ಅದಕ್ಕೆ ಬೆಳ್ಳುಳ್ಳಿ ಎಸಳು ಹಾಕಿ ರುಬ್ಬಿಕೊಳ್ಳಿ. ಇದನ್ನು ಸ್ವಲ್ಪ ಒರಟಾದ ಪೇಸ್ಟ್ ರೀತಿಯಲ್ಲಿ ಬೆರೆಸಬೇಕು, ತುಂಬಾ ಮೃದುವಾದ ಪೇಸ್ಟ್ ಆಗಿ ಅಲ್ಲ.
- ಈಗ ಈ ಸಂಪೂರ್ಣ ಮಿಶ್ರಣವನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ.
- ಸ್ಟೌವ್ ಮೇಲೆ ಬಾಣಲೆ ಇಟ್ಟು ಮೂರು ಚಮಚ ಎಣ್ಣೆ ಹಾಕಿ.
- ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ನಾಲ್ಕು ಜಜ್ಜಿರುವ ಬೆಳ್ಳುಳ್ಳಿ ಎಸಳು, ಕಾಳುಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
- ಈ ಸಂಪೂರ್ಣ ಮಿಶ್ರಣವನ್ನು ಪುಡಿಮಾಡಿ, ಬೆಳ್ಳುಳ್ಳಿ ಮಿಶ್ರಣಕ್ಕೆ ಸೇರಿಸಿ.
- ಅಷ್ಟೇ, ರುಚಿಯಾದ ಬೆಳ್ಳುಳ್ಳಿ ಖಾರ ಸವಿಯಲು ಸಿದ್ಧ.
ನಿಮ್ಮ ಬಾಯಿ ಸಪ್ಪೆ ಎನಿಸಿದಾಗ ಇದನ್ನು ತಯಾರಿಸಿ ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಬಹುದು. ಖಂಡಿತ ಇದು ನಿಮಗೆ ತುಂಬಾ ಇಷ್ಟವಾಗುತ್ತದೆ. ಮಸಾಲೆಯುಕ್ತ ಈ ಗ್ರೇವಿ ಈ ಚಳಿಗಾಲಕ್ಕೆ ಹೇಳಿಮಾಡಿಸಿದ ರೆಸಿಪಿ. ರುಚಿಯಂತೂ ಅದ್ಭುತ. ಕೀಲು ನೋವಿನಿಂದ ಬಳಲುತ್ತಿರುವವರು ಈ ರೆಸಿಪಿ ತಿನ್ನುವುದರಿಂದ ಚಳಿಗಾಲದಲ್ಲಿ ಸಂಧಿವಾತ ನೋವು ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳ ವಿರುದ್ಧ ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ. ಇದು ಹೃದಯವನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಏಕೆಂದರೆ ಅವು ಹೆಚ್ಚು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದು ಗಂಟಲು ಮತ್ತು ಮೂಗು ಕಟ್ಟುವಿಕೆಯನ್ನು ತಡೆಯುತ್ತದೆ. ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ. ಇದು ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಅಲ್ಲದೆ ಅಧಿಕ ಬಿಪಿಯಿಂದ ಬಳಲುತ್ತಿರುವವರು ಕೂಡ ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿನ್ನಬೇಕು. ಬೆಳ್ಳುಳ್ಳಿ ಪುಡಿ ಮತ್ತು ಬೆಳ್ಳುಳ್ಳಿ ಎಣ್ಣೆ ಕೂಡ ಆರೋಗ್ಯಕ್ಕೆ ಒಳ್ಳೆಯದು.
ವಿಭಾಗ